ಕುಲದಲ್ಲಿ ಮೇಲ್ಯಾವುದೋ ಹಾಡಿಗೆ ಎಂಬಿಟಿ ನಾಗಣ್ಣ ಮಸ್ತ್ ಡಾನ್ಸ್

ಕುಲದಲ್ಲಿ ಮೇಲ್ಯಾವುದೋ ಹಾಡಿಗೆ ಎಂಬಿಟಿ ನಾಗಣ್ಣ ಮಸ್ತ್ ಡಾನ್ಸ್

TV9 Web
| Updated By: Rakesh Nayak Manchi

Updated on:Sep 10, 2022 | 12:44 PM

BJP Janaspandana: ಬಿಜೆಪಿಯ ಜನಸ್ಪಂದನ ಕಾರ್ಯಕ್ರಮದಲ್ಲಿ ಕುಲದಲ್ಲಿ ಮೇಲ್ಯಾವುದೋ ಹಾಡಿಗೆ ವೇದಿಕೆ ಮೇಲೆ ಸಚಿವ ಎಂಟಿಬಿ ನಾಗರಾಜ್ ಸೇರಿದಂತೆ ಅನೇಕರು ಡಾನ್ಸ್ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ: ರಾಜ್ಯ ಸರ್ಕಾರದ ಸಾಧನೆಯ ಬಗ್ಗೆ ಜನರಿಗೆ ತಲುಪಿಸಲು ಹೊರಟಿರುವ ಬಿಜೆಪಿ ದೊಡ್ಡಬಳ್ಳಾಪುರದಲ್ಲಿ ಜನಸ್ಪಂದನ ಬೃಹತ್ ಸಮಾವೇಶವನ್ನು ಆಯೋಜಿಸಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ಹರಿದುಬರುತ್ತಿದ್ದಾರೆ. ಕಾರ್ಯಕ್ರಮ ಆರಂಭಕ್ಕೂ ಮುನ್ನ ವೇದಿಕೆಯಲ್ಲಿ ವಿಜಯಪ್ರಕಾಶ್ ಅವರ ಗಾಯನ ಕಾರ್ಯಕ್ರಮ ನಡೆಯಿತು. ಅದರಂತೆ  ಕುಲದಲ್ಲಿ ಮೇಲ್ಯಾವುದೋ ಎಂಬ ಹಾಡು ಹಾಡುತ್ತಿದ್ದಾಗ  ಸಚಿವ ಎಂಟಿಬಿ ನಾಗರಾಜ್, ಎಸ್​.ಆರ್​.ವಿಶ್ವನಾಥ್ ಸೇರಿದಂತೆ ಕೆಲವು ಶಾಸಕರು ಡಾನ್ಸ್ ಮಾಡಿದರು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Sep 10, 2022 12:44 PM