ಸೂ…ಮಕ್ಕಳಾ ಅಂತ ಹೇಳಿ ಕಾಂಗ್ರೆಸ್ ಪಕ್ಷವನ್ನು ನಿಂದಿಸಿದ ಬಿಜೆಪಿ ಸಂಸದ! ವಿಡಿಯೋ ವೈರಲ್

ಮಾತಿನ ಭರದಲ್ಲಿ ಕಾಂಗ್ರೆಸ್ ಪಕ್ಷದವರನ್ನು ವಿಜಯಪುರದ ಬಿಜೆಪಿ ಸಂಸದ ರಮೇಶ ಜಿಗಜಿಗಣಿ ಅವರು ಸೂ... ಮಕ್ಕಳಾ ಎಂದು ಅವಾಚ್ಯವಾಗಿ ನಿಂದಿಸಿದ ವಿಡಿಯೋ ವೈರಲ್ ಆಗುತ್ತಿದೆ.

ಸೂ...ಮಕ್ಕಳಾ ಅಂತ ಹೇಳಿ ಕಾಂಗ್ರೆಸ್ ಪಕ್ಷವನ್ನು ನಿಂದಿಸಿದ ಬಿಜೆಪಿ ಸಂಸದ! ವಿಡಿಯೋ ವೈರಲ್
ರಮೇಶ ಜಿಗಜಿಣಗಿ
Updated By: Rakesh Nayak Manchi

Updated on: Jun 05, 2022 | 9:15 PM

ವಿಜಯಪುರ: ಮಾತಿನ ಭರದಲ್ಲಿ ಕಾಂಗ್ರೆಸ್ ಪಕ್ಷದವರನ್ನು ವಿಜಯಪುರದ ಬಿಜೆಪಿ ಸಂಸದ ರಮೇಶ ಜಿಗಜಿಗಣಿ (Ramesh Jigajinagi) ಅವರು ಸೂ… ಮಕ್ಕಳಾ ಎಂದು ಅವಾಚ್ಯವಾಗಿ ನಿಂದಿಸಿದ ವಿಡಿಯೋ ವೈರಲ್ (Video Viral) ಆಗುತ್ತಿದೆ. ಜೂನ 2ರಂದು ಚಿಕ್ಕೋಡಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ರಮೇಶ ಜೀಗಜಿಣಗಿ ಅವರು ಈ ರೀತಿಯಾಗಿ ನಿಂದಿಸಿದ್ದಾರೆ.

ಇದನ್ನೂ ಓದಿ: ವಿಜಯಪುರ ಇಂಡಿ ತಾಲೂಕು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಲಂಚಾವತಾರ! ದೃಶ್ಯ ಮೊಬೈಲ್​ನಲ್ಲಿ ಸೆರೆ

ಶಿಕ್ಷಕರ ಕ್ಷೇತ್ರದ ಅರುಣ ಶಹಾಪುರ ಪರ ಪ್ರಚಾರಕ್ಕಾಗಿ ಚಿಕ್ಕೋಡಿಗೆ ಬಂದಿದ್ದ ಸಂಸದ ಜಿಗಜೆಣಗಿ ಅವರಿಗೆ ಆರ್​ಎಸ್​ಎಸ್ ಸಂಘಟನೆಯಿಂದ ದೂರ ಇದ್ದೀರಾ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ನಾವು ಜನತಾ ಪರಿವಾರದ ಮುಖಂಡರ ಸಹವಾಸದಿಂದ ಬೆಳೆದಿದ್ದು. ಅನಿವಾರ್ಯವಾಗಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ಬಾ ಅಂದಿದ್ದರು. ಸೂ.. ಮಕ್ಕಳಾ ಮನೆ ಹಾಳ ಮಾಡಿದ್ದೀರಾ ನೀವು (ಕಾಂಗ್ರೆಸ್). ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಕೊಲೆ‌ ಮಾಡಿದ್ದೀರಿ ನೀವು. ಅವರ ಮರಣದ ನಂತರ ದೆಹಲಿಯಲ್ಲಿ ಮಣ್ಣು ಮಾಡಲು ಕೂಡ ಸ್ಥಳ ನೀಡಲಿಲ್ಲ. ನಿಮ್ಮಂಥ ಮನೆಹಾಳ ಪಕ್ಷಕ್ಕೆ ಸೇರುವದಿಲ್ಲ. ಏನು ಬೇಕಾದರೂ ಆಗಲಿ ಎಂದು ವಿರೋಧದ ನಡುವೆಯೂ ಬಿಜೆಪಿ ಪಕ್ಷ ಸೇರಿದ್ದೇನೆ. ಜನತಾದಳದವನಾಗಿದ್ದರೂ ಸಂಘ ಪರಿವಾರ ಹಾಗೂ ಬಿಜೆಪಿ ಪಕ್ಷದ ಬಗ್ಗೆ ಗೌರವ ಇದೆ ಎಂದು ಹೆಳಿದ್ದಾರೆ.

ಇದನ್ನೂ ಓದಿ: ಆರ್​ಎಸ್​ಎಸ್ ಹಿನ್ನಲೆ ಉಳ್ಳವರು ಪಕ್ಷಕ್ಕೆ ದುಡಿಯೋದು ಸ್ವಲ್ಪ ಕಡಿಮೆ: ಸಂಸದ ರಮೇಶ್ ಜೀಗಜಿಣಗಿ ಹೇಳಿಕೆ

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:15 pm, Sun, 5 June 22