ಪಾರ್ಕಿಂಗ್ ವಿಚಾರಕ್ಕೆ ಟ್ರಾಫಿಕ್ ಪೇದೆ ಬಿಎಂಟಿಸಿ ಡ್ರೈವರ್ ನಡುವೆ ಜಟಾಪಟಿ

|

Updated on: Oct 19, 2019 | 4:50 PM

ಬೆಂಗಳೂರು: ನಡು ರೋಡ್​​ನಲ್ಲಿ ಬಿಎಂಟಿಸಿ ಡ್ರೈವರ್ ಮತ್ತು ಟ್ರಾಫಿಕ್ ಪೊಲೀಸ್​ ಪೇದೆ ಮಧ್ಯೆ ಜಟಾಪಟಿ ನಡೆದು ಬಸ್​ ಪ್ರಯಾಣಿಕರು ಮತ್ತು ಇತರೆ ವಾಹನ ಸವಾರರು ಪರದಾಡಿದ ಪ್ರಸಂಗ ನಡೆದಿದೆ.  ಸಿಲ್ಕ್ ಬೋರ್ಡ್ ನಲ್ಲಿ ಬಿಎಂಟಿಸಿ ಬಸ್ ಪಾರ್ಕಿಂಗ್ ಮಾಡೋ ವಿಚಾರದಲ್ಲಿ ಟ್ರಾಫಿಕ್ ಪೊಲೀಸ್ ಮತ್ತು ಬಿಎಂಟಿಸಿ ಡ್ರೈವರ್ ನಡುವಣ ಈ ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು ದುರದೃಷ್ಟಕರ. ಜನ ರಸ್ತೆಯಲ್ಲಿ ಓಡಾಡುತ್ತಿದ್ರೂ ಬಸ್ಸಿನ ಸ್ಟೇರಿಂಗ್ ಹಿಡಿದು ಎಳೆದಾಡಿದ ಟ್ರಾಫಿಕ್ ಪೊಲೀಸ್ ಒಂದು ಕಡೆಯಾದ್ರೆ ಸ್ಟೇರಿಂಗ್ […]

ಪಾರ್ಕಿಂಗ್ ವಿಚಾರಕ್ಕೆ ಟ್ರಾಫಿಕ್ ಪೇದೆ ಬಿಎಂಟಿಸಿ ಡ್ರೈವರ್ ನಡುವೆ ಜಟಾಪಟಿ
Follow us on

ಬೆಂಗಳೂರು: ನಡು ರೋಡ್​​ನಲ್ಲಿ ಬಿಎಂಟಿಸಿ ಡ್ರೈವರ್ ಮತ್ತು ಟ್ರಾಫಿಕ್ ಪೊಲೀಸ್​ ಪೇದೆ ಮಧ್ಯೆ ಜಟಾಪಟಿ ನಡೆದು ಬಸ್​ ಪ್ರಯಾಣಿಕರು ಮತ್ತು ಇತರೆ ವಾಹನ ಸವಾರರು ಪರದಾಡಿದ ಪ್ರಸಂಗ ನಡೆದಿದೆ.  ಸಿಲ್ಕ್ ಬೋರ್ಡ್ ನಲ್ಲಿ ಬಿಎಂಟಿಸಿ ಬಸ್ ಪಾರ್ಕಿಂಗ್ ಮಾಡೋ ವಿಚಾರದಲ್ಲಿ ಟ್ರಾಫಿಕ್ ಪೊಲೀಸ್ ಮತ್ತು ಬಿಎಂಟಿಸಿ ಡ್ರೈವರ್ ನಡುವಣ ಈ ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು ದುರದೃಷ್ಟಕರ.

ಜನ ರಸ್ತೆಯಲ್ಲಿ ಓಡಾಡುತ್ತಿದ್ರೂ ಬಸ್ಸಿನ ಸ್ಟೇರಿಂಗ್ ಹಿಡಿದು ಎಳೆದಾಡಿದ ಟ್ರಾಫಿಕ್ ಪೊಲೀಸ್ ಒಂದು ಕಡೆಯಾದ್ರೆ ಸ್ಟೇರಿಂಗ್ ಮುಟ್ಟಬೇಡಿ ಅಂತಾ ಡ್ರೈವರ್ ಗಲಾಟೆ ಮಾಡತೊಡಗಿದ. ಈ ನಡುವೆ ಟ್ರಾಫಿಕ್ ಪೊಲೀಸ್ ಡ್ರೈವರ್ ಫೋನ್ ಕಿತ್ಕೊಂಡು ಹೋದ ಘಟನೆಯೂ ನಡೆದಿದೆ. ಅದೂ ಸಾಲದು ಅಂತಾ ಟ್ರಾಫಿಕ್ ಪೊಲೀಸ್ ಪೇದೆ, ಬಸ್ ಕೀಯನ್ನೇ ಎತ್ತಿಕೊಂಡು ಹೋದರು.


Published On - 4:46 pm, Sat, 19 October 19