ಡೇ ಪಾಸ್ ಕಡ್ಡಾಯ ರದ್ದು, ಇಂದಿನಿಂದ ಯಾರರೀ ಟಿಕೆಟ್ ಟಿಕೆಟ್!

| Updated By:

Updated on: May 26, 2020 | 2:39 PM

ಬೆಂಗಳೂರು: ರಾಜ್ಯದಲ್ಲಿ ಬಸ್​ ಸಂಚಾರ ಆರಂಭವಾದ ನಂತರ ಟಿಕೆಟ್​ಗಳ ಗೊಂದಲ ಹೆಚ್ಚಾಗಿತ್ತು. ಸ್ಪಲ್ಪ ದೂರ ಪ್ರಯಾಣಿಸಬೇಕಿದ್ದರು ದಿನದ ಪಾಸ್ ಖರೀದಿಸಬೇಕಿತ್ತು. ಇದರಿಂದ ಸಂಕಷ್ಟದಲ್ಲಿದ್ದ ಜನರಿಗೆ ನಷ್ಟ ಉಂಟಾಗುತ್ತಿತ್ತು. ಹೀಗಾಗಿ ಪಾಸ್ ದರ ಕಡಿತಗೊಳಿಸುವಂತೆ ಧ್ವನಿ ಎತ್ತಲಾಗಿತ್ತು. ನಂತರ ಪಾಸ್ ದರ ರೂ 50ಕ್ಕೆ ಇಳಿಸಲಾಯಿತು. ಈಗ ಅದೇ ವಿಚಾರಕ್ಕೆ ಸಂಬಂಧಿಸಿ BMTC ಡೈಲಿ ಪಾಸ್ ಕಡ್ಡಾಯ ರೂಲ್ಸ್ ರದ್ದುಪಡಿಸಲು ಮುಂದಾಗಿದೆ. ಪಾಸ್ ಬದಲಿಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ಬಿಎಂಟಿಸಿ ಸಿಬ್ಬಂದಿ ಮೊದಲಿನಂತೆ ಟಿಕೆಟ್ ನೀಡಲಿದ್ದಾರೆ. ಕಿ.ಮೀ. ಆಧಾರದ […]

ಡೇ ಪಾಸ್ ಕಡ್ಡಾಯ ರದ್ದು, ಇಂದಿನಿಂದ ಯಾರರೀ ಟಿಕೆಟ್  ಟಿಕೆಟ್!
Follow us on

ಬೆಂಗಳೂರು: ರಾಜ್ಯದಲ್ಲಿ ಬಸ್​ ಸಂಚಾರ ಆರಂಭವಾದ ನಂತರ ಟಿಕೆಟ್​ಗಳ ಗೊಂದಲ ಹೆಚ್ಚಾಗಿತ್ತು. ಸ್ಪಲ್ಪ ದೂರ ಪ್ರಯಾಣಿಸಬೇಕಿದ್ದರು ದಿನದ ಪಾಸ್ ಖರೀದಿಸಬೇಕಿತ್ತು. ಇದರಿಂದ ಸಂಕಷ್ಟದಲ್ಲಿದ್ದ ಜನರಿಗೆ ನಷ್ಟ ಉಂಟಾಗುತ್ತಿತ್ತು. ಹೀಗಾಗಿ ಪಾಸ್ ದರ ಕಡಿತಗೊಳಿಸುವಂತೆ ಧ್ವನಿ ಎತ್ತಲಾಗಿತ್ತು.

ನಂತರ ಪಾಸ್ ದರ ರೂ 50ಕ್ಕೆ ಇಳಿಸಲಾಯಿತು. ಈಗ ಅದೇ ವಿಚಾರಕ್ಕೆ ಸಂಬಂಧಿಸಿ BMTC ಡೈಲಿ ಪಾಸ್ ಕಡ್ಡಾಯ ರೂಲ್ಸ್ ರದ್ದುಪಡಿಸಲು ಮುಂದಾಗಿದೆ. ಪಾಸ್ ಬದಲಿಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ಬಿಎಂಟಿಸಿ ಸಿಬ್ಬಂದಿ ಮೊದಲಿನಂತೆ ಟಿಕೆಟ್ ನೀಡಲಿದ್ದಾರೆ. ಕಿ.ಮೀ. ಆಧಾರದ ಮೇಲೆ ಟಿಕೆಟ್ ವಿತರಿಸಲಿದ್ದಾರೆ.
2 ಕಿಲೋಮೀಟರ್‌ವರೆಗೆ 5 ರೂಪಾಯಿ ಟಿಕೆಟ್
3ರಿಂದ 4 ಕಿ.ಮೀ.ವರೆಗಿನ ಪ್ರಯಾಣಕ್ಕೆ 10 ರೂಪಾಯಿ
5ರಿಂದ 6 ಕಿ.ಮೀ.ವರೆಗಿನ ಪ್ರಯಾಣಕ್ಕೆ 15 ರೂಪಾಯಿ
7ರಿಂದ 14 ಕಿ.ಮೀ.ವರೆಗಿನ ಪ್ರಯಾಣಕ್ಕೆ 20 ರೂಪಾಯಿ
15ರಿಂದ 40 ಕಿ.ಮೀ.ವರೆಗಿನ ಪ್ರಯಾಣಕ್ಕೆ 25 ರೂಪಾಯಿ
40 ಕಿ.ಮೀ.ಗಿಂತ ಹೆಚ್ಚಿನ ಪ್ರಯಾಣಕ್ಕೆ 30 ರೂ. ಟಿಕೆಟ್
ಇದರ ಜತೆಗೆ BMTC ದಿನದ ಪಾಸ್ ಕೂಡ ಲಭ್ಯವಿರಲಿದೆ. ಟಿವಿ9ನಲ್ಲಿ ವರದಿ ಬಳಿಕ ಬಿಎಂಟಿಸಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ನಿಗದಿತ ದರ ನೀಡಿರುವುದು ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಚಿಲ್ಲರೆ ಸಮಸ್ಯೆ ದೂರ ಮಾಡಲು ಬಿಎಂಟಿಸಿ ಹೊಸ ರೂಲ್ಸ್:
ಬೆಂಗಳೂರಿನಲ್ಲಿ ಬಿಎಂಟಿಸಿ ಟಿಕೆಟ್ ದರದಲ್ಲಿ ಸ್ವಲ್ಪ ಏರಿಕೆಯಾಗಿದೆ. ಚಿಲ್ಲರೆ ಸಮಸ್ಯೆ ದೂರ ಮಾಡಲು ಬಿಎಂಟಿಸಿ ಟಿಕೆಟ್ ದರ ರೌಂಡ್ ಫಿಗರ್ ಮಾಡಿ ಟಿಕೆಟ್ ನೀಡಲಾಗುತ್ತಿದೆ ಎಂದು ಟಿವಿ9ಗೆ ಬಿಎಂಟಿಸಿ ಬಸ್ ನಿರ್ವಾಹಕನಿಂದ ಮಾಹಿತಿ ಸಿಕ್ಕಿದೆ.
17 ರೂಪಾಯಿ ಇದ್ದ ಟಿಕೆಟ್ ದರ 20 ರೂ.ಗೆ ಏರಿಕೆ
19 ರೂಪಾಯಿ ಇದ್ದ ಟಿಕೆಟ್ ದರ 20 ರೂ.ಗೆ ಏರಿಕೆ
20 ರೂಪಾಯಿ ಇದ್ದ ಟಿಕೆಟ್ ದರ 20 ರೂ. ಇದೆ
23 ರೂಪಾಯಿ ಇದ್ದ ಟಿಕೆಟ್ ದರ 25 ರೂ.ಗೆ ಏರಿಕೆ
ಚಿಲ್ಲರೆ ಸಮಸ್ಯೆಯಾಗದಂತೆ ಟಿಕೆಟ್ ದರ ಏರಿಕೆಯಾಗಿದೆ. ಆದರೆ ಎಂದಿನಂತೆ 70 ರೂಪಾಯಿಯ ದಿನದ ಪಾಸ್ ಇರಲಿದೆ.

ಟಿವಿ9 ಬಿಗ್ ಇಂಪ್ಯಾಕ್ಟ್:
ನಾಳೆ ಬೆಳಗ್ಗೆ 6 ಗಂಟೆಯಿಂದ ಬಿಎಂಟಿಸಿ ಬಸ್ ಸಂಚಾರ ಮಾಡಲು ಸಂಸ್ಥೆ ನಿರ್ಧರಿಸಿದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ರವರೆಗೆ ಬಸ್ ಸಂಚಾರ ಮಾಡಲು ಬಿಎಂಟಿಸಿ ಸಂಸ್ಥೆ ತೀರ್ಮಾನಿಸಿದೆ. ಬಸ್ ಸಂಚಾರಕ್ಕೆ ಜನರ ಆಗ್ರಹಿಸಿದ್ದರು. ಈ ಬಗ್ಗೆ ಟಿವಿ9 ನಿರಂತರ ವರದಿ ಪ್ರಸಾರ ಮಾಡಿತ್ತು. ಟಿವಿ9ನಲ್ಲಿ ನಿರಂತರ ವರದಿ ಬಳಿಕ ಸಾರಿಗೆ ಇಲಾಖೆ ಎಚ್ಚೆತ್ತಿದೆ.

Published On - 7:17 am, Tue, 26 May 20