ಬಾಲಿವುಡ್​ನ ಖ್ಯಾತ ನೃತ್ಯ ಸಂಯೋಜಕ ರೆಮೋ ಡಿಸೋಜಾಗೆ ಹೃದಯಾಘಾತ

ರೆಮೋ ಹೃದಯಾಘಾತದ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು, ಅಭಿಮಾನಿ ಬಳಗ ಶಾಕ್​ಗೆ ಒಳಗಾಗಿದೆ. ಅಲ್ಲದೆ, ಅವರು ಬೇಗ ಗುಣಮುಖರಾಗಲಿ ಎಂದು ಅನೇಕರು ಪ್ರಾರ್ಥನೆ ಮಾಡಿದ್ದಾರೆ.

ಬಾಲಿವುಡ್​ನ ಖ್ಯಾತ ನೃತ್ಯ ಸಂಯೋಜಕ ರೆಮೋ ಡಿಸೋಜಾಗೆ ಹೃದಯಾಘಾತ
ರೆಮೊ ಡಿಸೋಜಾ
Edited By:

Updated on: Dec 11, 2020 | 10:25 PM

ಮುಂಬೈ: ಬಾಲಿವುಡ್​ನ ಖ್ಯಾತ ನೃತ್ಯ ಸಂಯೋಜಕ ಹಾಗೂ ನಿರ್ದೇಶಕ ರೆಮೋ ಡಿಸೋಜಾ ಅವರಿಗೆ ಇಂದು ಮಧ್ಯಾಹ್ನ ಹೃದಯಾಘಾತವಾಗಿದ್ದು, ಮುಂಬೈನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ರೆಮೋ ಅವರನ್ನು ತುರ್ತು ನಿಗಾ ಘಟಕದಲ್ಲಿ ಇಡಲಾಗಿದ್ದು, ವೈದ್ಯರು ಅವರನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ.

ರೆಮೋ ಅವರ ಹೃದಯ ನಾಳದಲ್ಲಿ ರಕ್ತ ಬ್ಲಾಕ್​ ಆಗಿತ್ತು. ಹೀಗಾಗಿ ಹೃದಯಾಘಾತ ಸಂಭವಿಸಿದೆ. ಅವರನ್ನು ವೈದ್ಯರು ಪರೀಕ್ಷೆ ಮಾಡುತ್ತಿದ್ದಾರೆ. ಸದ್ಯ ಅವರ ಸ್ಥಿತಿ ಸಮತೋಲನಕ್ಕೆ ಬಂದಿದೆ ಎಂದು ಅವರ ಆಪ್ತ ಮೂಲಗಳು ಪಿಟಿಐಗೆ ತಿಳಿಸಿವೆ.

ರೆಮೋ ಹೃದಯಾಘಾತದ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು, ಅಭಿಮಾನಿ ಬಳಗ ಶಾಕ್​ಗೆ ಒಳಗಾಗಿದೆ. ಅಲ್ಲದೆ, ಅವರು ಬೇಗ ಗುಣಮುಖರಾಗಲಿ ಎಂದು ಅನೇಕರು ಪ್ರಾರ್ಥನೆ ಮಾಡಿದ್ದಾರೆ.

ಬಾಲಿವುಡ್​ನ ಖ್ಯಾತ ನೃತ್ಯ ಸಂಯೋಜಕರ ಸಾಲಿನಲ್ಲಿ ರೆಮೋ ಮೊದಲಿಗೆ ನಿಲ್ಲುತ್ತಾರೆ. ಕಿಕ್​, ಜಿರೋ, ಬಾಜಿರಾವ್​ ಮಸ್ತಾನಿ, ಭಜರಂಗಿ ಭಾಯಿಜಾನ್​ ಮತ್ತು ಯೇ ಜವಾನಿ ಹೇ ದಿವಾನಿಯಂಥ ಹಿಟ್​ ಚಿತ್ರಗಳಲ್ಲಿ ಇವರು ಕೆಲಸ ಮಾಡಿದ್ದಾರೆ.

ಇನ್ನು, ಡಾನ್ಸ್​ ಇಂಡಿಯಾ ಡಾನ್ಸ್​ ರಿಯಾಲಿಟಿ ಶೋಗೆ ಇವರು ಜಡ್ಜ್​​ ಕೂಡ ಹೌದು. ಸಾಕಷ್ಟು ಹಿಟ್​ ಹಾಡುಗಳಿಗೆ ಇವರೇ ನೃತ್ಯ ಸಂಯೋಜನೆ ಮಾಡಿದ್ದಾರೆ.

ಮತ್ತೊಬ್ಬ ಡ್ರಗ್ ಸಪ್ಲೈಯರ್​ ಅರೆಸ್ಟ್​.. ಬಾಲಿವುಡ್​ ಗಣ್ಯರಿಗೆ ನಡುಕ ಶುರು