ಹಾವೇರಿ: PUBG ಗೇಮ್ ಆಡುವುದು ಬೇಡ ಎಂದು ತಂದೆ ಬೈದಿದಕ್ಕೆ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಸಂಗೂರ ಗ್ರಾಮದಲ್ಲಿ ನಡೆದಿದೆ.
ತೇಜಸ್ ಸಿಡ್ಲಾಪುರ (17) ಗೇಮ್ಗೆ ಬಲಿಯಾದ ಯುವಕನಾಗಿದ್ದಾನೆ. ಮೊಬೈಲ್‌ನಲ್ಲಿ ಇಂಟರ್ನೆಟ್ ಖಾಲಿ ಆಗಿದೆ. ಹೀಗಾಗಿ ಯುವಕನಿಗೆ PUBG ಗೇಮ್ ಸಾಧ್ಯವಾಗಿಲ್ಲ ಇದರಿಂದ ಯುವಕ ತನ್ನ ತಂದೆಯನ್ನು ಇಂಟರ್ನೆಟ್ ಹಾಕಿಸುವಂತೆ ಕೇಳಿದ್ದಾನೆ.
SSLC ಮುಗಿಸಿ ಕಾಲೇಜಿಗೆ ಸೇರಬೇಕಿದ್ದ ಯುವಕ
ಕೋಪಗೊಂಡ ತಂದೆ PUBG ಗೇಮ್ ಆಡುವುದನ್ನು ಬಿಡು ಎಂದು ಬೈದಿದ್ದಾರೆ. ತಂದೆಯ ಬೈಗುಳದಿಂದ ನೊಂದ ಯುವಕ ಅಗಸ್ಟ್ 31 ರಂದು ವಿಷ ಸೇವಿಸಿದ್ದಾನೆ. ಕೂಡಲೇ ಮನೆಯವರು ಯುವಕನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಿದ್ದಾರೆ.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಇಂದು ಸಾವನ್ನಪ್ಪಿದ್ದಾನೆ. SSLC ಮುಗಿಸಿ ಕಾಲೇಜಿಗೆ ಸೇರಬೇಕಿದ್ದ ಯುವಕ ಸಾವನ್ನಪ್ಪಿರುವುದು ಕುಟುಂಬಸ್ಥರಿಗೆ ಭಾರಿ ನೋವುಂಟು ಮಾಡಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.