ಅವಧಿ ಮೀರಿದ ಚಾಕೋಲೇಟ್ ತಿಂದು ಬಾಲಕ ಅಸ್ವಸ್ಥ.. ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ದಾಖಲು

|

Updated on: Feb 13, 2021 | 9:59 AM

ಳೆದ ರಾತ್ರಿ ಎಕ್ಸಪೈರ್ ಆಗಿರುವ ಚಾಕಲೇಟ್ ಸೇವಿಸಿ ಬಾಲಕ ಅಸ್ವಸ್ಥನಾಗಿದ್ದಾನೆ. ಕೆಜಿಎಫ್ ನಗರದ ಸಲ್ಡಾನ ವೃತ್ತದಲ್ಲಿರುವ ಜೆ.ಎಸ್.ಮೆಡಿಕಲ್ ಶಾಪ್ ನಲ್ಲಿ ಚಾಕಲೇಟ್ ಖರೀದಿ ಮಾಡಲಾಗಿದೆ. ನಂತರ ಚಾಕಲೇಟ್ ಸೇವಿಸುತ್ತಿದ್ದಂತೆ ಬಾಲಕ ವಾಂತಿ ಮಾಡಿಕೊಂಡು ಅಸ್ವಸ್ಥನಾಗಿದ್ದಾನೆ.

ಅವಧಿ ಮೀರಿದ ಚಾಕೋಲೇಟ್ ತಿಂದು ಬಾಲಕ ಅಸ್ವಸ್ಥ.. ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ದಾಖಲು
ಲಚ್ಚನ್ ಅಸ್ವಸ್ಥ ಬಾಲಕ
Follow us on

ಕೋಲಾರ: ಅವಧಿ ಮೀರಿದ ಚಾಕಲೇಟ್ ಸೇವಿಸಿ ಬಾಲಕ ಅಸ್ವಸ್ಥಗೊಂಡಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಎಸ್ ಟಿ ಬ್ಲಾಕ್​ನಲ್ಲಿ ನಡೆದಿದೆ.

ಸಿಲಂಬರಸನ್ ಎಂಬುವವರ ಮಗ ಲಚ್ಚನ್ (6ವರ್ಷ) ಅಸ್ವಸ್ಥ ಬಾಲಕನಾಗಿದ್ದಾನೆ. ಕಳೆದ ರಾತ್ರಿ ಎಕ್ಸಪೈರ್ ಆಗಿರುವ ಚಾಕಲೇಟ್ ಸೇವಿಸಿ ಬಾಲಕ ಅಸ್ವಸ್ಥನಾಗಿದ್ದಾನೆ. ಕೆಜಿಎಫ್ ನಗರದ ಸಲ್ಡಾನ ವೃತ್ತದಲ್ಲಿರುವ ಜೆ.ಎಸ್.ಮೆಡಿಕಲ್ ಶಾಪ್​ನಲ್ಲಿ ಚಾಕಲೇಟ್ ಖರೀದಿ ಮಾಡಲಾಗಿದೆ. ನಂತರ ಚಾಕಲೇಟ್ ಸೇವಿಸುತ್ತಿದ್ದಂತೆ ಬಾಲಕ ವಾಂತಿ ಮಾಡಿಕೊಂಡು ಅಸ್ವಸ್ಥನಾಗಿದ್ದಾನೆ.

ಅಸ್ವಸ್ಥ ಬಾಲಕನನ್ನ ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅವಧಿ ಮೀರಿದ ಚಾಕಲೇಟ್ ಮಾರಿದ ಮೆಡಿಕಲ್ ಸ್ಟೋರ್ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.