ವೀರಶೈವ ಲಿಂಗಾಯತ ಒಳಪಂಗಡಗಳನ್ನ OBCಗೆ ಸೇರಿಸಲು ಆಗ್ರಹ.. ಇಂದು ಸಭೆ ಸೇರಲಿರುವ 500ಕ್ಕೂ ಹೆಚ್ಚು ಶ್ರೀಗಳು..!
ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳನ್ನ ಒಬಿಸಿಗೆ ಸೇರಿಸಬೇಕು ಅನ್ನೋ ಕೂಗು ಎದ್ದಿದೆ. ಅಷ್ಟೇ ಅಲ್ಲ ಕೇಂದ್ರಕ್ಕೆ ಈ ಬಗ್ಗೆ ಶಿಫಾರಸ್ಸು ಮಾಡ್ಬೇಕು ಅಂತಾ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರೋಕೆ ದೊಡ್ಡ ದೊಡ್ಡ ಶ್ರೀಗಳೇ ಅಖಾಡಕ್ಕಿಳಿಯುತ್ತಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಮೀಸಲಾತಿಗಾಗಿ ಹಲವು ಸಮುದಾಯಗಳು ಹೋರಾಟ ಮಾಡ್ತಿವೆ. ದಿಕ್ಕಿಗೊಬ್ಬರು ನಿಂತು ತಮ್ಮ ಸಮುದಾಯಕ್ಕೆ ನ್ಯಾಯ ಬೇಕು ಅಂತಾ ದೊಡ್ಡ ಕೂಗು ಎಬ್ಬಿಸಿದ್ದಾರೆ. ಒಂದ್ಕಡೆ ಕುರುಬ ಸಮುದಾಯ ಎಸ್ಟಿ ಮೀಸಲಾತಿಗೆ ಆಗ್ರಹಿಸ್ತಾ ಇದ್ರೆ. ಮತ್ತೊಂದ್ಕಡೆ ವಾಲ್ಮೀಕಿ ಸಮುದಾಯ ಇರೋ ಮೀಸಲಾತಿಯನ್ನ ಹೆಚ್ಚಳ ಮಾಡಿ ಅಂತಿದೆ. ಪಂಚಮಸಾಲಿ ಸಮುದಾಯ 2A ಮೀಸಲಾತಿಗೆ ಆಗ್ರಹಿಸಿ ಬೆಂಗಳೂರಿಗೆ ದಂಡೆತ್ತಿ ಬರ್ತಿದೆ. ಅಲ್ದೆ, ರಾಜಧಾನಿ ಬೆಂಗಳೂರಿನಲ್ಲಿ ದೊಡ್ಡ ಸಮಾವೇಶ ನಡೆಸೋಕೆ ಜಾಗದ ಹುಡುಕಾಟ ನಡೆಸ್ತಿದೆ. ಸಮಾವೇಶ ನಡೆಸೋ ಜಾಗದ ವಿಚಾರದಲ್ಲಿ ಗೊಂದಲ ಎದ್ದಿದೆ. ಇದರ ನಡುವೆ ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳನ್ನ ಒಬಿಸಿಗೆ ಸೇರಿಸಬೇಕು ಅನ್ನೋ ಕೂಗು ಎದ್ದಿದೆ.
ಇಂದು ಬೆಂಗಳೂರಿನಲ್ಲಿ 500 ಕ್ಕೂ ಹೆಚ್ಚು ಶ್ರೀಗಳಿಂದ ಬೃಹತ್ ಮೀಟಿಂಗ್..! ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿ ಅಂತಾ ಸಮುದಾಯದ ಶ್ರೀಗಳು ಪಾದಯಾತ್ರೆ ನಡೆಸ್ತಿರೋವಾಗ್ಲೆ, ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳನ್ನ ಒಬಿಸಿಗೆ ಸೇರಿಸಬೇಕು ಅನ್ನೋ ಕೂಗು ಎದ್ದಿದೆ. ಅಷ್ಟೇ ಅಲ್ಲ ಕೇಂದ್ರಕ್ಕೆ ಈ ಬಗ್ಗೆ ಶಿಫಾರಸ್ಸು ಮಾಡ್ಬೇಕು ಅಂತಾ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರೋಕೆ ದೊಡ್ಡ ದೊಡ್ಡ ಶ್ರೀಗಳೇ ಅಖಾಡಕ್ಕಿಳಿಯುತ್ತಿದ್ದಾರೆ. ಇಂದು ಬೆಂಗಳೂರಿನ ವಿಜಯನಗರದಲ್ಲಿರೋ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ವೀರಶೈವ ಲಿಂಗಾಯತ ಮಠಾಧೀಶರ ಒಕ್ಕೂಟದ ಸಭೆ ನಡೆಯಲಿದೆ.
ಒಳಪಂಗಡ ಮೀಸಲಾತಿ ಹೋರಾಟ..! ವೀರಶೈವ ಲಿಂಗಾಯತ ಮಠಾಧೀಶರ ಒಕ್ಕೂಟದ ಸಭೆಯಲ್ಲಿ 500ಕ್ಕೂ ಹೆಚ್ಚು ಶ್ರೀಗಳು ಭಾಗಿಯಾಗಲಿದ್ದಾರೆ. ಉಜ್ಜಯಿನಿ ಜಗದ್ಗುರು, ಶ್ರೀಶೈಲ ಜಗದ್ಗುರುಗಳು ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದಲೂ ವೀರಶೈವ ಲಿಂಗಾಯತ ಸಮುದಾಯದ ಶ್ರೀಗಳು ಆಗಮಿಸೋ ಸಾಧ್ಯತೆ ಇದೆ. ಹೀಗೆ ಸಭೆ ನಡೆಸಿ ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳನ್ನ ಕೇಂದ್ರದಲ್ಲಿ ಒಬಿಸಿಗೆ ಸೇರಿಸಲು ರಾಜ್ಯ ಸರ್ಕಾರ, ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಮನವಿ ಮಾಡೋ ಉದ್ದೇಶ ಹೊಂದಿದ್ದಾರೆ.
ಮಠಾಧೀಶರ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಭಾಗಿ ಸಾಧ್ಯತೆ..! ಇಂದು ನಡೆಯೋ ವೀರಶೈವ ಲಿಂಗಾಯತ ಮಠಾಧೀಶರ ಸಭೆಯಲ್ಲಿ ಸಿಎಂ ಬಿಎಸ್ವೈ ಭಾಗಿಯಾಗೋ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವೇಳೆ ಸಿಎಂ ಸಭೆಯಲ್ಲಿ ಭಾಗಿಯಾದ್ರೆ, ಸಿಎಂ ಎದುರೇ ಈ ವಿಚಾರ ಪ್ರಸ್ತಾಪಿಸಲಿದ್ದಾರೆ. ಇಲ್ದೆ ಹೋದ್ರೆ, ಶ್ರೀಗಳ ನಿಯೋಗ ಸಿಎಂ ಬಿಎಸ್ವೈರನ್ನ ಪ್ರತ್ಯೇಕವಾಗಿ ಭೇಟಿ ಮಾಡಿ ಮನವಿ ಸಲ್ಲಿಸೋ ಸಾಧ್ಯತೆ ಇದೆ.
ಇಂದಿನ ಸಭೆ ಬಳಿಕ ಮುಂದಿನ ಹೋರಾಟದ ಚಿತ್ರಣ ಡಿಸೈಡ್..! ವೀರಶೈವ ಲಿಂಗಾಯತ ಸಮುದಾಯಲ್ಲಿ 100ಕ್ಕೂ ಹೆಚ್ಚು ಒಳಪಂಗಡಗಳು ಬರುತ್ವೆ. ಈ ಎಲ್ಲ ಒಳಪಂಗಡಗಳಿಗೆ ಒಬಿಸಿ ಕೆಟಗರಿ ಸಿಕ್ರೆ, ಕೇಂದ್ರದಲ್ಲಿ ಶೇಕಡಾ 27ರಷ್ಟು ಮೀಸಲಾತಿ ಸಿಕ್ಕಂತಾಗುತ್ತದೆ. ಇದು ಶಿಕ್ಷಣ ಮತ್ತು ಉದ್ಯೋಗಕ್ಕೆ ನೆರವಾಗಲಿದೆ. ಹೀಗಾಗಿ ಇಂದಿನ ಸಭೆಯಲ್ಲಿ ಶ್ರೀಗಳು ವೀರಶೈವ ಲಿಂಗಾಯತ ಸಮುದಾಯದ ಒಳಪಂಗಡಗಳನ್ನ ಒಬಿಸಿಗೆ ಸೇರಿಸೋ ವಿಚಾರವಾಗಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಸಭೆ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ. ಒಂದು ವೇಳೆ ಸಿಎಂ ಬಿಎಸ್ವೈರಿಂದ ಸೂಕ್ತ ರೆಸ್ಪಾನ್ಸ್ ಸಿಗದೇ ಇದ್ರೆ ಮುಂದಿನ ಹೋರಾಟದ ರೂಪರೇಷೆ ಸಿದ್ಧವಾಗಲಿದೆ.
ಇದನ್ನೂ ಓದಿ: ವೀರಶೈವ, ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಭರ್ಜರಿ ಗಿಫ್ಟ್: 500 ಕೋಟಿ ಅನುದಾನ ನೀಡಿದ ರಾಜ್ಯ ಸರ್ಕಾರ
Published On - 7:30 am, Sat, 13 February 21