Sampath Raj ಪರಪ್ಪನ ಅಗ್ರಹಾರ ಜೈಲಿನಿಂದ ಸಂಪತ್ ರಾಜ್ ಬಿಡುಗಡೆ

ಪರಪ್ಪನ ಅಗ್ರಹಾರ ಜೈಲಿನಿಂದ ಸಂಪತ್ ರಾಜ್ ಬಿಡುಗಡೆಯಾಗಿದ್ದಾರೆ. ಷರತ್ತುಬದ್ಧ ಜಾಮೀನಿನ ಮೇಲೆ ಸಂಪತ್ ರಾಜ್​ ಹೊರಬಂದಿದ್ದಾರೆ.

Sampath Raj ಪರಪ್ಪನ ಅಗ್ರಹಾರ ಜೈಲಿನಿಂದ ಸಂಪತ್ ರಾಜ್ ಬಿಡುಗಡೆ
Follow us
KUSHAL V
|

Updated on:Feb 12, 2021 | 9:52 PM

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಿಂದ ಸಂಪತ್ ರಾಜ್ ಬಿಡುಗಡೆಯಾಗಿದ್ದಾರೆ. ಷರತ್ತುಬದ್ಧ ಜಾಮೀನಿನ ಮೇಲೆ ಸಂಪತ್ ರಾಜ್​ ಹೊರಬಂದಿದ್ದಾರೆ.DJ ಹಳ್ಳಿ ಹಾಗೂ KG ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗಲಭೆ ಕೇಸ್ ಮತ್ತು ಶಾಸಕರ ಮನೆಗೆ ಬೆಂಕಿ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಆರ್.ಸಂಪತ್ ರಾಜ್​ಗೆ ಹೈಕೋರ್ಟ್ ಜಾಮೀನು ನೀಡಿದೆ.

ಮಾಜಿ ಮೇಯರ್​ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಬರೋಬ್ಬರಿ 86 ದಿನಗಳ ಬಳಿಕ ಮಾಜಿ ಮೇಯರ್​ಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಇಂದು ಜೈಲಿನಿಂದ ಬಿಡುಗಡೆಯಾದ ಸಂಪತ್​ ರಾಜ್​ರನ್ನು ನೋಡಲು ಪರಪ್ಪನ ಅಗ್ರಹಾರ ಕಾರಾಗೃಹದ ಬಳಿ ನೂರಾರು ಬೆಂಬಲಿಗರು ಜಮಾಯಿಸಿದರು. ತಮ್ಮ ನೆಚ್ಚಿನ ನಾಯಕನಿಗೆ ಹೂವಿನ ಹಾರ ಹಾಕಿ ಸ್ವಾಗತ ಕೋರಿದರು.

‘ನನಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆಯಿದೆ’ ನನಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆಯಿದೆ. ಆ ನಂಬಿಕೆಯಿಂದಲೇ ನಾನು‌ ಇವತ್ತು ಬಿಡುಗಡೆಯಾಗಿದ್ದೆನೆ ಎಂದು ಈ ಸಂದರ್ಭದಲ್ಲಿ ಮಾಜಿ ಮೇಯರ್​ ಸಂಪತ್​ ರಾಜ್​ ಹೇಳಿದರು.

ಮುಂದೆ ನಾನು ಈ ಆರೋಪಗಳಿಂದ‌ ಮುಕ್ತವಾಗುವ ವಿಶ್ವಾಸ ಇದೆ. ರಾಜಕೀಯ‌ ಷಡ್ಯಂತ್ರದ ಬಗ್ಗೆ ನಾನೇನು ಮಾತನಾಡುವುದಿಲ್ಲ. ಪ್ರಕರಣ ನ್ಯಾಯಾಲಯದಲ್ಲಿದೆ. ನಾನು ನಮ್ಮ ರಾಜಕೀಯ ನಾಯಕರನ್ನು ಭೇಟಿಯಾಗುವ ಬಗ್ಗೆ ಮುಂದಿನ ರಾಜಕೀಯದ ಬಗ್ಗೆ ಮುಂದೆ ತಿಳಿಸುತ್ತೆನೆ. ಸದ್ಯಕ್ಕೆ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ನಾನೇನು ಹೆಚ್ಚಾಗಿ ಮಾತನಾಡುವುದಿಲ್ಲ ಎಂದು ಹೇಳಿದರು.

‘ಸಂಪತ್ ರಾಜ್​ನ ಉಚ್ಛಾಟನೆ ಮಾಡುವಂತೆ ಅಧ್ಯಕ್ಷರಿಗೆ ಮನವಿ ಮಾಡ್ತಾನೇ ಇದ್ದೀನಿ’ ಮಾಜಿ ಮೇಯರ್ ಸಂಪತ್ ರಾಜ್​ಗೆ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ತಪ್ಪಿತಸ್ಥರಿಗೆ ಪಕ್ಷದಿಂದಲೂ ಕ್ರಮ ಆಗಬೇಕು. ಕೆಲವು ನಾಯಕರು ಅವರ ಪರ ಇದ್ದಾರೆ. ನಮ್ಮನ್ನ ಜೀವಂತ ಸುಡಲು ಬಂದವರ ಜೊತೆ ನಾವು ಗುರುತಿಸಿಕೊಳ್ಳಲು ಆಗುತ್ತಾ? ಸಂಪತ್ ರಾಜ್​ನ ಉಚ್ಛಾಟನೆ ಮಾಡುವಂತೆ ಅಧ್ಯಕ್ಷರಿಗೆ ಮನವಿ ಮಾಡ್ತಾನೇ ಇದ್ದೀನಿ. ಆದರೆ, ಯಾಕೋ ಅವ್ರನ್ನ ಉಚ್ಛಾಟನೆ ಮಾಡೋ ಮನಸ್ಸು ಮಾಡ್ತಿಲ್ಲ ಎಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹೇಳಿದರು.

ಸಿದ್ದರಾಮಯ್ಯ ಹಾಗೂ ಜಮೀರ್ ಅಹ್ಮದ್​ ನನ್ನ ಪರ ಇದ್ದಾರೆ. ಸಂಪತ್ ರಾಜ್​ರಿಂದ ಮತ್ತೆ ನನಗೆ ಥ್ರೆಟ್ ಇದೆ. ಹೊರಗೆ ಬಂದ ಮೇಲೆ ನಮಗೆ ಏನೋ ಮಾಡೇ ಮಾಡ್ತಾರೆ. ಮುಂದೆ ಏನೇ ಸಮಸ್ಯೆ ಆದ್ರೂ ಅದಕ್ಕೆ ಸಂಪತ್ ರಾಜ್ ಕಾರಣ. ಈ ಬಗ್ಗೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆಯುತ್ತೇನೆ ಎಂದು ಶಾಸಕ ಅಖಂಡ‌ ಶ್ರೀನಿವಾಸ್ ಮೂರ್ತಿ ಹೇಳಿದರು.

ನಾನೊಬ್ಬ ಶಾಸಕ,ನನಗೇ ಈ ರೀತಿಯಾಗಿದೆ. ಅವರಿಗೆ ಶಿಕ್ಷೆಯಾಗಬೇಕು,ಇವತ್ತಿಗೂ ಆಗಿಲ್ಲ. ನ್ಯಾಯಾಲಯದ ಜಾಮೀನಿನ ಬಗ್ಗೆ ಮಾತನಾಡಲ್ಲ ಅದನ್ನ ನಾನು ಒಪ್ಪುತ್ತೇನೆ. ಆದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ನಾನು ದೇವರನ್ನ ನಂಬಿದ್ದೇನೆ. ಆ ದೇವರು ಶಿಕ್ಷೆಯನ್ನ ಕೊಡಬೇಕು.ನಾನು ‌ಹೋರಾಟ ಮುಂದುವರಿಸುತ್ತೇನೆ ಎಂದು ಹೇಳಿದರು. ನಾನು‌ ವಲಸೆ ಬಂದಿರಬಹುದು. ಆದರೆ, ಅತಿ ಹೆಚ್ಚಿನ ಮತಗಳಿಂದ ಗೆದ್ದವನು ಎಂದು ಸಹ ಹೇಳಿದರು. SAMPATH RAJ RELEASE 2

ಮಾಜಿ ಮೇಯರ್​ಗೆ ಹೂವಿನ ಹಾರ ಹಾಕಿ ಸಂಭ್ರಮಿಸಿದ ಬೆಂಬಲಿಗರು

ಸಂಪತ್​ ರಾಜ್​ಗೆ ಸ್ವಾಗತ ಕೋರಿದ ಬೆಂಬಲಿಗರು

ಇದನ್ನೂ ಓದಿ: Accident ಅರಕು ಘಾಟ್​​ ರಸ್ತೆಯಲ್ಲಿ.. ಖಾಸಗಿ ಬಸ್​​ ಕಂದಕಕ್ಕೆ ಉರುಳಿ 8 ಪ್ರಯಾಣಿಕರು ಸಾವು

Published On - 8:53 pm, Fri, 12 February 21