Dr Rajkumar ಡಾ.ರಾಜ್ ಪ್ರತಿಮೆ ಸ್ಥಾಪಿಸಲು ಸಿದ್ಧವಾಗಿದ್ದ ಮಂಟಪ ಧ್ವಂಸ; ವರನಟನಿಗೆ ಅವಮಾನ ಮಾಡಿದ್ದಕ್ಕೆ ಸ್ಥಳೀಯರ ಆಕ್ರೋಶ
ಡಾ.ರಾಜ್ಕುಮಾರ್ ಅವರ ಪ್ರತಿಮೆ ಸ್ಥಾಪಿಸಲು ಸಿದ್ಧವಾಗಿದ್ದ ಮಂಟಪವನ್ನು ಕಿಡಿಗೇಡಿಗಳು ಧ್ವಂಸಗೊಳಸಿರುವ ಘಟನೆ ವಿದ್ಯಾರಣ್ಯಪುರದ ಇಂದಿರಾ ಕ್ಯಾಂಟೀನ್ ಬಳಿ ನಡೆದಿದೆ. ಅಣ್ಣಾವ್ರ ಪ್ರತಿಮೆಯನ್ನು ಪ್ರತಿಷ್ಠಾಪಿಸಬೇಕಿದ್ದ ಜಾಗವನ್ನು ಕಿಡಿಗೇಡಿಗಳು ಹಾಳು ಮಾಡಿದ್ದಕ್ಕೆ ಸ್ಥಳೀಯರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು: ಡಾ.ರಾಜ್ಕುಮಾರ್ ಅವರ ಪ್ರತಿಮೆ ಸ್ಥಾಪಿಸಲು ಸಿದ್ಧವಾಗಿದ್ದ ಮಂಟಪವನ್ನು ಕಿಡಿಗೇಡಿಗಳು ಧ್ವಂಸಗೊಳಸಿರುವ ಘಟನೆ ವಿದ್ಯಾರಣ್ಯಪುರದ ಇಂದಿರಾ ಕ್ಯಾಂಟೀನ್ ಬಳಿ ನಡೆದಿದೆ. ಅಣ್ಣಾವ್ರ ಪ್ರತಿಮೆಯನ್ನು ಪ್ರತಿಷ್ಠಾಪಿಸಬೇಕಿದ್ದ ಜಾಗವನ್ನು ಕಿಡಿಗೇಡಿಗಳು ಹಾಳು ಮಾಡಿದ್ದಕ್ಕೆ ಸ್ಥಳೀಯರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಡಾ.ರಾಜ್ಕುಮಾರ್ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಸ್ಥಳೀಯರು BBMPಯಿಂದ ಜಾಗ ಪಡೆದಿದ್ದರು. ಜೊತೆಗೆ, ಪುತ್ಥಳಿಯನ್ನು ಇಡುವ ಮಂಟಪದ ಕಾಮಗಾರಿಗೆ ಚಾಲನೆ ನೀಡಿದ್ದರು. ಡಾ.ರಾಜ್ ಪುತ್ಥಳಿ ಸ್ಥಾಪನೆಯ ಕಾಮಗಾರಿ ಕೆಲಸ ಸಹ ಬಹುತೇಕ ಮುಗಿದಿತ್ತು.
ಆದರೆ, ಇಂದು ಕೆಲ ಕಿಡಿಗೇಡಿಗಳು ಏಕಾಏಕಿ ಬಂದು ಮಂಟಪವನ್ನು ಧ್ವಂಸಗೊಳಿಸಿದ್ದಾರೆ. ತಮ್ಮ ನೆಚ್ಚಿನ ವರನಟನಿಗೆ ಅವಮಾನ ಮಾಡಿದ್ದಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ, ಕಿಡಿಗೇಡಿಗಳನ್ನು ಬಂಧಿಸುವಂತೆ ರಾಜ್ ಅಭಿಮಾನಿಗಳು ಆಗ್ರಹಿಸಿದ್ದಾರೆ.
Published On - 11:56 pm, Fri, 12 February 21