Karnataka 2nd PUC Exam 2021 Timetable: ದ್ವಿತೀಯ PUC ಪರೀಕ್ಷಾ ವೇಳಾಪಟ್ಟಿ ಪ್ರಕಟ: ಮೇ 24ರಿಂದ ಜೂನ್ 16ರವರೆಗೆ ಎಕ್ಸಾಂ

Karnataka 2nd PUC Exam 2021 Timetable: ದ್ವಿತೀಯ PUC ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದೆ. ಮೇ 24ರಿಂದ ಜೂನ್ 16ರವರೆಗೆ ಪರೀಕ್ಷೆ ನಡೆಯಲಿದೆ.

Karnataka 2nd PUC Exam 2021 Timetable: ದ್ವಿತೀಯ PUC ಪರೀಕ್ಷಾ ವೇಳಾಪಟ್ಟಿ ಪ್ರಕಟ: ಮೇ 24ರಿಂದ ಜೂನ್ 16ರವರೆಗೆ ಎಕ್ಸಾಂ
ಸಾಂದರ್ಭಿಕ ಚಿತ್ರ
Follow us
KUSHAL V
|

Updated on:Feb 12, 2021 | 8:36 PM

ಬೆಂಗಳೂರು: ದ್ವಿತೀಯ PUC ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದೆ. ಮೇ 24ರಿಂದ ಜೂನ್ 16ರವರೆಗೆ ಪರೀಕ್ಷೆ ನಡೆಯಲಿದೆ.

ಪರೀಕ್ಷಾ ವೇಳಾಪಟ್ಟಿ ವಿವರ ಹೀಗಿದೆ ಮೇ 24ರಂದು ಇತಿಹಾಸ ವಿಷಯದ ಪರೀಕ್ಷೆ ಮೇ 25ರಂದು ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ ಮೇ 26ರಂದು ಭೂಗೋಳ ಶಾಸ್ತ್ರ ವಿಷಯದ ಪರೀಕ್ಷೆ ಮೇ 27ರಂದು ಮನಃಶಾಸ್ತ್ರ, ಬೇಸಿಕ್ ಮ್ಯಾತ್ಸ್​ ಪರೀಕ್ಷೆ ಮೇ 28ರಂದು ತರ್ಕಶಾಸ್ತ್ರ ವಿಷಯದ ಪರೀಕ್ಷೆ ಮೇ 29ರಂದು ಹಿಂದಿ, ಮೇ 31ರಂದು ಇಂಗ್ಲಿಷ್​ ಪರೀಕ್ಷೆ ಜೂನ್ 1-ಮಾಹಿತಿ ತಂತ್ರಜ್ಞಾನ, ಹೆಲ್ತ್​ಕೇರ್, ವೆಲ್ನೆಸ್​ಬ್ಯೂಟಿ ಜೂನ್ 2ರಂದು ರಾಜ್ಯಶಾಸ್ತ್ರ, ಗಣಕ ವಿಜ್ಞಾನ ಪರೀಕ್ಷೆ ಜೂನ್ 3ರಂದು ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್​ ವಿಷಯ ಪರೀಕ್ಷೆ ಜೂನ್ 4ರಂದು ಅರ್ಥಶಾಸ್ತ್ರ, ಜೂನ್ 5ರಂದು ಗೃಹವಿಜ್ಞಾನ ಜೂನ್ 7ರಂದು ವ್ಯವಹಾರ ಅಧ್ಯಯನ, ಭೌತಶಾಸ್ತ್ರ ಪರೀಕ್ಷೆ ಜೂನ್ 8ರಂದು ಐಚ್ಛಿಕ ಕನ್ನಡ ವಿಷಯದ ಪರೀಕ್ಷೆ ಜೂನ್ 9ರಂದು ತಮಿಳು, ತೆಲುಗು, ಮಲಯಾಳಂ ಜೂನ್ 9ರಂದು ಮರಾಠಿ, ಅರೆಬಿಕ್, ಫ್ರೆಂಚ್​ ಪರೀಕ್ಷೆ ಜೂನ್ 10ರಂದು ಸಮಾಜ ಶಾಸ್ತ್ರ, ರಸಾಯನಶಾಸ್ತ್ರ ಜೂನ್ 11ರಂದು ಉರ್ದು, ಸಂಸ್ಕೃತ ವಿಷಯದ ಪರೀಕ್ಷೆ ಜೂನ್ 12ರಂದು ಸಂಖ್ಯಾಶಾಸ್ತ್ರ ವಿಷಯದ ಪರೀಕ್ಷೆ ಜೂನ್ 14ರಂದು ಲೆಕ್ಕಶಾಸ್ತ್ರ, ಗಣಿತ, ಶಿಕ್ಷಣ ಜೂನ್ 15ರಂದು ಭೂಗರ್ಭಶಾಸ್ತ್ರ ವಿಷಯದ ಪರೀಕ್ಷೆ ಜೂನ್ 16ರಂದು ಕನ್ನಡ ಭಾಷಾ ಪರೀಕ್ಷೆ

ಶೀಘ್ರದಲ್ಲೇ SSLC ಅಧಿಕೃತ ವೇಳಾಪಟ್ಟಿ ಪ್ರಕಟ ಇದಲ್ಲದೆ, ಶೀಘ್ರದಲ್ಲೇ SSLC ಅಧಿಕೃತ ವೇಳಾಪಟ್ಟಿ ಪ್ರಕಟವಾಗಲಿದೆ. ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಸಮಯವಿದೆ. ಅವಧಿ ಮುಗಿದ ಕೂಡಲೇ ಅಧಿಕೃತ ವೇಳಾಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್​ರಿಂದ ಮಾಹಿತಿ ಸಿಕ್ಕಿದೆ.

ಇನ್ನು, ಉಳಿದ ಶಾಲಾ ತರಗತಿಗಳ ಆರಂಭಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಫೆ.16ರಂದು ಸಭೆ ಕರೆದಿದ್ದಾರೆ. ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ಕೂಡ ಭಾಗಿಯಾಗಲಿದ್ದಾರೆ. ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್​ರಿಂದ ಮಾಹಿತಿ ಸುರೇಶ್ ಕುಮಾರ್-ಪ್ರಾಥಮಿಕ & ಪ್ರೌಢ ಶಿಕ್ಷಣ ಸಚಿವ

ಇದನ್ನೂ ಓದಿ: Agrahara Dasarahalli ಅಗ್ರಹಾರ ದಾಸರಹಳ್ಳಿ ಸ್ಲಂ ನಿವಾಸಿಗಳ ತೆರವು ವಿಚಾರ: ಮೂಲ ದಾಖಲೆ ಒದಗಿಸುವಂತೆ ಹೈಕೋರ್ಟ್ ಸೂಚನೆ

Published On - 6:32 pm, Fri, 12 February 21