Pogaru Audio Release: ‘ಪೊಗರು’ ಆಡಿಯೋ ಲಾಂಚ್ಗೆ ಬರಲಿದ್ದಾರೆ ಸಿದ್ದರಾಮಯ್ಯ; ದಾವಣಗೆರೆಯಲ್ಲಿ ಅದ್ದೂರಿ ಸಮಾರಂಭಕ್ಕೆ ಸಿದ್ದರಾಮಯ್ಯಗೆ ಆಹ್ವಾನ
Siddaramaiah: ಸ್ಯಾಂಡಲ್ವುಡ್ನ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ಆದ ಧ್ರುವ ಸರ್ಜಾ ನಟನೆಯ ಪೊಗರು ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಫೆ.14ರಂದು ದಾವಣಗೆರೆಯಲ್ಲಿ ‘ಪೊಗರು’ ಸಿನಿಮಾದ ಆಡಿಯೋ ಲಾಂಚ್ ಸಮಾರಂಭವನ್ನು ಆಯೋಜಿಸಲಾಗಿದೆ.
ಬೆಂಗಳೂರು: ಸ್ಯಾಂಡಲ್ವುಡ್ನ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ಆದ ಧ್ರುವ ಸರ್ಜಾ ನಟನೆಯ ಪೊಗರು ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಫೆ.14ರಂದು ದಾವಣಗೆರೆಯಲ್ಲಿ ‘ಪೊಗರು’ ಸಿನಿಮಾದ ಆಡಿಯೋ ಲಾಂಚ್ ಸಮಾರಂಭವನ್ನು ಆಯೋಜಿಸಲಾಗಿದೆ.
ಈ ನಡುವೆ, ಪೊಗರು ಆಡಿಯೋ ಲಾಂಚ್ ಸಮಾರಂಭಕ್ಕೆ ಚಿತ್ರತಂಡ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಆಹ್ವಾನ ನೀಡಿದೆ. ನಟ ಧ್ರುವ ಸರ್ಜಾ ಹಾಗೂ ಚಿತ್ರದ ನಿರ್ದೇಶಕ ನಂದಕಿಶೋರ್ ಸಿದ್ದರಾಮಯ್ಯನವರನ್ನು ಇಂದು ಭೇಟಿಯಾಗಿ ಸಮಾರಂಭಕ್ಕೆ ಆಹ್ವಾನ ನೀಡಿದರು. ಈ ವೇಳೆ, ಶಾಸಕ ಬೈರತಿ ಸುರೇಶ್ ಮತ್ತು ನಟ ಪ್ರಥಮ್ ಸಹ ಉಪಸ್ಥಿತರಿದ್ದರು.
ಅಂದ ಹಾಗೆ,ಚಿತ್ರತಂಡವು ಹಲವು ರಾಜಕಾರಣಿಗಳು ಮತ್ತು ಕಲಾವಿದರನ್ನು ಸಮಾರಂಭಕ್ಕೆ ಆಹ್ವಾನಿಸಿದೆ. ಪ್ರೇಮಿಗಳ ದಿನದಂದೇ ಬೆಣ್ಣೆನಗರಿಯಲ್ಲಿ ಆಡಿಯೋ ರಿಲೀಸ್ ಕಾರ್ಯಕ್ರಮ ನಡೆಯಲಿದೆ.
ಪೊಗರು ಚಿತ್ರದ ನಾಯಕನಟ ಧ್ರುವಸರ್ಜಾ, ನಿರ್ದೇಶಕ ನಂದ ಕಿಶೋರ್ ಅವರು ಇಂದು ನನ್ನನ್ನು ಭೇಟಿ ಮಾಡಿ, ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಆಹ್ವಾನಿಸಿದರು. ಈ ವೇಳೆ ಶಾಸಕ ಬೈರತಿ ಸುರೇಶ್, ನಟ ಪ್ರಥಮ್ ಜೊತೆಗಿದ್ದರು. pic.twitter.com/Pr8WAbMmix
— Siddaramaiah (@siddaramaiah) February 12, 2021
ಇದನ್ನೂ ಓದಿ: You’ll All See 7 ವರ್ಷಗಳ ಸತತ ಪರಿಶ್ರಮದಿಂದ ಮೂಡಿದ 264 ಪುಟಗಳ ಪುಸ್ತಕ: ದಿವ್ಯಾಂಗನ ಸಾಧನೆಯನ್ನು ಒಮ್ಮೆ ‘ನೀವೂ ನೋಡಿ’!
Published On - 11:38 pm, Fri, 12 February 21