You’ll All See 7 ವರ್ಷಗಳ ಸತತ ಪರಿಶ್ರಮದಿಂದ ಮೂಡಿದ 264 ಪುಟಗಳ ಪುಸ್ತಕ: ದಿವ್ಯಾಂಗನ ಸಾಧನೆಯನ್ನು ಒಮ್ಮೆ ‘ನೀವೂ ನೋಡಿ’!
ದಿವ್ಯಾಂಗ ಆದಿತ್ಯ ಆರ್ ಬೇಲೂರು ಅವರ 7 ವರ್ಷಗಳ ಸತತ ಪರಿಶ್ರಮದಿಂದ ರಚನೆಯಾದ ಪುಸ್ತಕವನ್ನು ಇಂದು ಬಿಡುಗಡೆ ಮಾಡಲಾಯಿತು. ಮೈಸೂರಿನ ರೇಸ್ ಕ್ಲಬ್ ಹೌಸ್‌ನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 264 ಪುಟಗಳನ್ನು ಹೊಂದಿರುವ ‘ಯೂ ವಿಲ್ ಆಲ್ ಸೀ’ ಎಂಬ ಶೀರ್ಷಿಕೆಯ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ, ರಂಗಿತರಂಗ ಖ್ಯಾತಿಯ ನಟಿ ರಾಧಿಕಾ ನಾರಾಯಣ್ ಸಹ ಉಪಸ್ಥಿತರಿದ್ದರು.ನಿರಂಜನ್ ನಿಕ್ಕಂ ಮತ್ತು ಡಾ ಪ್ಯಾಮಿಲಾ ಸನತ್ ಆದಿತ್ಯ ಅವರಿಗೆ ಪುಸ್ತಕ ಬರೆಯಲು ಸಹಕಾರ ನೀಡಿದ್ದಾರೆ. ಜೊತೆಗೆ, ಇಂದಿನ ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞ ಡಾ. ಮೋತಿ ಪುಸ್ತಕ ಬಿಡುಗಡೆ ಮಾಡಿದರು. ಪುಸ್ತಕ ವಾಸ್ತವ ಹಾಗೂ ಕಾಲ್ಪನಿಕ ವಿಚಾರಗಳನ್ನು ಒಳಗೊಂಡಿದೆ.

1 / 12

2 / 12

3 / 12

4 / 12

5 / 12

6 / 12

7 / 12

8 / 12

9 / 12

10 / 12

11 / 12

12 / 12