18ನೇ ವಯಸ್ಸಿನಲ್ಲಿ ಬರಸಿಡಿಲಂತೆ ಬಂದ ಕಾಯಿಲೆ: ಎದೆಗುಂದದೆ ಎಲ್ಲರಿಗೂ ಸ್ಪೂರ್ತಿಯಾಗುವ ಪುಸ್ತಕ ಬರೆದ ವಿಶೇಷ ಚೇತನ..!
ಆದಿತ್ಯ ವಿಶೇಷ ಚೇತನ. 18 ವರ್ಷದವರಾಗಿದ್ದಾಗ ಅವರಿಗೆ ಬಂದ ಅಪರೂಪದ ಕಾಯಿಲೆ ಅವರ ಕಾಲು,ಕೈ, ಸ್ವಾಧೀನ ಕಳೆದುಕೊಳ್ಳುವಂತೆ ಮಾಡಿತು. ಇದರಿಂದ ಆದಿತ್ಯ ಸಾಕಷ್ಟು ಕುಗ್ಗಿ ಹೋದರು. ಆದ್ರೆ ಎದೆಗುಂದಲಿಲ್ಲ. ಎಲ್ಲರಿಗೂ ಸ್ಪೂರ್ತಿಯಾಗಿ ಬದುಕಬೇಕೆಂದು ನಿರ್ಣಯಿಸಿದರು. ಅದರ ಫಲವೇ ಅವರ ಯೂ ಆಲ್ ಸೀ ಪುಸ್ತಕ.
ಮೈಸೂರು:ಆತ 17 ವರ್ಷ ವಯಸ್ಸಿನವರೆಗೂ ಎಲ್ಲರಂತೆಯೇ ಇದ್ದ. 18ನೇ ವಯಸ್ಸಿನಲ್ಲಿ ಬರಸಿಡಿಲಂತೆ ಬಂದ ಕಾಯಿಲೆ ಆತನನ್ನು ವಿಶೇಷ ಚೇತನನನ್ನಾಗಿಸಿತು. ಯುವಕ ವಿಚಲಿತನಾದರೂ ಎದೆಗುಂದಲಿಲ್ಲ. ಇದೀಗ ನೂರಾರು ಜನರಿಗೆ ಸ್ಫೂರ್ತಿಯಾಗುವಂತಹ ಸಾಧನೆ ಮಾಡಿದ್ದಾನೆ. ಹೌದು ಮೈಸೂರಿನ ಜಯಲಕ್ಷ್ಮಿಪುರಂ ನಿವಾಸಿ ಕಿಶನ್ ಬೇಲೂರು ಹಾಗೂ ಸಂಗೀತಾ ಬೇಲೂರು ಅವರ ಪುತ್ರ ಆದಿತ್ಯ ಆರ್. ಬೇಲೂರು ಬರೆದಿರುವ ‘ಯೂ ಆಲ್ ಸೀ’ ಹೆಸರಿನ ಪುಸ್ತಕ ಬಿಡುಗಡೆ ಸಮಾರಂಭ ಮೈಸೂರಿನ ರೇಸ್ ಕ್ಲಬ್ ಹೌಸ್‌ನಲ್ಲಿ ಸಂತಸ ಸಡಗರದಿಂದ ನೆರವೇರಿತು.
ಸ್ವಾಧೀನ ಕಳೆದುಕೊಳ್ಳುವಂತೆ ಮಾಡಿತು.. ಅಂದ್ಹಾಗೆ ಆದಿತ್ಯ ವಿಶೇಷ ಚೇತನ. 18 ವರ್ಷದವರಾಗಿದ್ದಾಗ ಅವರಿಗೆ ಬಂದ ಅಪರೂಪದ ಕಾಯಿಲೆ ಅವರ ಕಾಲು,ಕೈ, ಸ್ವಾಧೀನ ಕಳೆದುಕೊಳ್ಳುವಂತೆ ಮಾಡಿತು. ಇದರಿಂದ ಆದಿತ್ಯ ಸಾಕಷ್ಟು ಕುಗ್ಗಿ ಹೋದರು. ಆದ್ರೆ ಎದೆಗುಂದಲಿಲ್ಲ. ಎಲ್ಲರಿಗೂ ಸ್ಪೂರ್ತಿಯಾಗಿ ಬದುಕಬೇಕೆಂದು ನಿರ್ಣಯಿಸಿದರು. ಅದರ ಫಲವೇ ಅವರ ಯೂ ಆಲ್ ಸೀ ಪುಸ್ತಕ.
ಡಿಪ್ಲೋಮೋ ಮ್ಯಾನೆಂಜ್‌ಮೆಂಟ್ ಕೋರ್ಸ್ ಮಾಡಿರುವ ಆದಿತ್ಯ ಕಳೆದ 7 ವರ್ಷದಿಂದ ತಾವೇ ಕುಳಿತು ಈ ಪುಸ್ತಕ ಬರೆದಿದ್ದಾರೆ. 264 ಪುಟಗಳ ಈ ಪುಸ್ತಕ ವಾಸ್ತವ ಬದುಕು ಹಾಗೂ ಕಾಲ್ಪನಿಕ ವಿಚಾರವನ್ನು ಒಳಗೊಂಡಿದೆ. ಈ ಪುಸ್ತಕ ಬರೆಯಲು ಆದಿತ್ಯ ಅವರ ತಂದೆ ತಾಯಿ ಸಹಕರಿಸಿದ್ದಾರೆ. ಜೊತೆಗೆ ಮೈಸೂರಿನ ನಿರಂಜನ್ ನಿಕ್ಕಂ, ಡಾ ಪ್ಯಾಮಿಲಾ ಸನತ್ ದಂಪತಿ ಕೈ ಜೋಡಿಸಿದ್ದಾರೆ. ಇದರ ಫಲವಾಗಿ ಅದ್ಬುತ ಪುಸ್ತಕವೊಂದು ಲೋಕಾರ್ಪಣೆಗೊಂಡಿದೆ.
ಈ ಪುಸ್ತಕ ಎಲ್ಲರಿಗೂ ಸ್ಪೂರ್ತಿಯಾಗಲಿದೆ.. ಈ ಪುಸ್ತಕ ಎಲ್ಲರ ಬದುಕಿನಲ್ಲೂ ಸಮಸ್ಯೆಗಳಿವೆ ಅದಕ್ಕೆ ಪರಿಹಾರವೂ ಇದೆ ಅನ್ನೋ ಪಾಸಿಟಿವ್ ಅಂಶವನ್ನು ಒಳಗೊಂಡಿದೆ. ಆದ್ದರಿಂದ ಈ ಪುಸ್ತಕ ಎಲ್ಲರಿಗೂ ಸ್ಪೂರ್ತಿಯಾಗಲಿದೆ. ಒಟ್ಟಾರೆ ತಮ್ಮ ನೋವನ್ನು ಮರೆ ಮಾಚಿ ಎಲ್ಲರಿಗೂ ಸ್ಪೂರ್ತಿಯಾಗಬೇಕೆಂಬ ಅವರ ಚಿಂತನೆ ನಿಜಕ್ಕೂ ಶ್ಲಾಘನೀಯ.
Published On - 8:22 am, Sat, 13 February 21