
ಮಡಿಕೇರಿ: ಕೊಡಗು ಜಿಲ್ಲೆ ತಲಕಾವೇರಿಯಲ್ಲಿ ಬ್ರಹ್ಮಗಿರಿಬೆಟ್ಟ ಕುಸಿತ ಘಟನೆಗೆ ಸಂಬಂಧಪಟ್ಟಂತೆ ಸ್ಥಳೀಯರಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಅರ್ಚಕ ನಾರಾಯಣ ಆಚಾರ್ ಮನೆಯಲ್ಲಿ ಅಪಾರ ಪ್ರಮಾಣದ ನಾಣ್ಯಗಳು ಪತ್ತೆಯಾಗಿರುವುದೇ ಇದಕ್ಕೆ ಕಾರಣವಾಗಿದೆ.
ಬ್ರಹ್ಮಕುಂಡಿಕೆಗೆ ಹಾಕುತ್ತಿದ್ದ ನಾಣ್ಯಗಳನ್ನು ಕೊಂಡೊಯ್ಯುತ್ತಿದ್ದರಾ ಆಚಾರ್ ಎಂಬ ಅನುಮಾನ ಈಗ ಎದುರಾಗಿದೆ. ಅರ್ಚಕ ನಾರಾಯಣ ಆಚಾರ್ ಮನೆಯ 1 ಕೋಣೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ನಾಣ್ಯಗಳು ಮತ್ತು ಚಿನ್ನ, ನಗದು ಇತ್ತು ಎಂಬ ಮಾಹಿತಿ ಸಿಕ್ಕಿದೆ. ಅಚಾರ್ ಮನೆಯಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳು, 100 ಎಕರೆ ಕಾಫಿ ತೋಟದ ಬಗ್ಗೆ ಈಗ ಸ್ಥಳೀಯರಲ್ಲಿ ಗುಸು ಗುಸು ಚರ್ಚೆ ಶುರುವಾಗಿದೆ.