ಬಾಗಲಕೋಟೆ: ನಗರದ ಕೋವಿಡ್ ಆಸ್ಪತ್ರೆಯಲ್ಲಿ ಸಹೋದರರಿಬ್ಬರು ಒಂದೇ ದಿನ ಪ್ರಾಣ ಬಿಟ್ಟ ಮನಕಲಕುವ ಘಟನೆ ಸಂಭವಿಸಿದೆ.
ಬಾಗಲಕೋಟೆಯಲ್ಲಿರುವ ಕೋವಿಡ್ ಆಸ್ಪತ್ರೆಗೆ ಜುಲೈ 13ರಂದು ಇಬ್ಬರು ಸಹೋದರರು ಕೊರೊನಾ ಸೋಂಕಿನಿಂದ ದಾಖಲಾಗಿದ್ದರು. ಇಬ್ಬರೂ ಕೆಮ್ಮು, ನೆಗಡಿ, ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ದಾಖಲಾದಾಗಿನಿಂದ ಸಹೋದರರಿಬ್ಬರೂ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದ್ರೆ ಇಂದು ಬೆಳಗ್ಗೆ9ಕ್ಕೆ 42 ವರ್ಷದ ಅಣ್ಣ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇದು ತಿಳಿಯುತ್ತಿದ್ದಂತೆ ಅಣ್ಣನ ಅಗಲಿಕೆಯಿಂದ ಆಘಾತಗೊಂಡ ತಮ್ಮನೂ ಕೂಡಾ 11.30ಕ್ಕೆ ಸಾವನ್ನಪ್ಪಿದ್ದಾನೆ. ಆತ್ಮೀಯರಾಗಿದ್ದ ಸಹೋದರರಿಬ್ಬರೂ ಒಂದೇ ದಿನ ಸಾವನ್ನಪ್ಪಿದ್ದು ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ.