ನಾಳೆ ಹಸೆಮಣೆ ಏರಬೇಕಿದ್ದ ವರನ ಮೇಲೆ ಭಾವನಿಂದಲೇ ಹಲ್ಲೆ!

ಮೈಸೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ನಾಳೆ ಹಸೆಮಣೆ ಏರಬೇಕಿದ್ದ ವರನ ಮೇಲೆ ತಡರಾತ್ರಿ ಮಾರಕಾಸ್ತ್ರಗಳಿಂದ ಭಾವನೇ ಹಲ್ಲೆ ಮಾಡಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಯರಹಳ್ಳಿ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೊಳಗಾದ ಮನು ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ನಾಳೆ ಯರಹಳ್ಳಿ ಗ್ರಾಮದ ನಿವಾಸಿ ಮನು ಎಂಬುವನ ಮದುವೆ ನಡೆಯಬೇಕಿತ್ತು. ತಡರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಭಾವ ಕೆಂಡಗಣ್ಣನೇ ಭಾಮೈದುನ ಮನು ಮೇಲೆ ಹಲ್ಲೆ ಮಾಡಿದ್ದಾನೆ. ಮನು ಕುತ್ತಿಗೆಗೆ ಮಚ್ಚಿನಿಂದ ಹಲ್ಲೆ ಮಾಡಿದ್ದು, ಮನು ತಾಯಿ […]

ನಾಳೆ ಹಸೆಮಣೆ ಏರಬೇಕಿದ್ದ ವರನ ಮೇಲೆ ಭಾವನಿಂದಲೇ ಹಲ್ಲೆ!

Updated on: Jan 29, 2020 | 11:31 AM

ಮೈಸೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ನಾಳೆ ಹಸೆಮಣೆ ಏರಬೇಕಿದ್ದ ವರನ ಮೇಲೆ ತಡರಾತ್ರಿ ಮಾರಕಾಸ್ತ್ರಗಳಿಂದ ಭಾವನೇ ಹಲ್ಲೆ ಮಾಡಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಯರಹಳ್ಳಿ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೊಳಗಾದ ಮನು ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ನಾಳೆ ಯರಹಳ್ಳಿ ಗ್ರಾಮದ ನಿವಾಸಿ ಮನು ಎಂಬುವನ ಮದುವೆ ನಡೆಯಬೇಕಿತ್ತು. ತಡರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಭಾವ ಕೆಂಡಗಣ್ಣನೇ ಭಾಮೈದುನ ಮನು ಮೇಲೆ ಹಲ್ಲೆ ಮಾಡಿದ್ದಾನೆ. ಮನು ಕುತ್ತಿಗೆಗೆ ಮಚ್ಚಿನಿಂದ ಹಲ್ಲೆ ಮಾಡಿದ್ದು, ಮನು ತಾಯಿ ಹೇಮಾವತಿಯ ಎರಡೂ ಕೈಗಳನ್ನು ಕತ್ತರಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಇಬ್ಬರೂ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆ ಸಂಬಂಧ ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಕೆಂಡಗಣ್ಣನನ್ನು ಪೊಲೀಸರು ಬಂಧಿಸಿದ್ದಾರೆ. ನಾಳೆ ನಡೆಯಬೇಕಿದ್ದ ವಿವಾಹ ಕಾರ್ಯಕ್ರಮ ಸ್ಥಗಿತಗೊಂಡಿದೆ.

Published On - 10:30 am, Wed, 29 January 20