
ಬೆಂಗಳೂರು: ಮುನಿರತ್ನರನ್ನು 50-60ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು. ಯಾವುದೇ ಕಾರಣಕ್ಕೂ ಶೇಕಡಾ 70ಕ್ಕಿಂತ ಕಡಿಮೆ ಮತದಾನ ಆಗಬಾರದು ಎಂದು ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಪ್ರಚಾರದ ವೇಳೆ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಇಲ್ಲಿ ಮನೆಯಿಲ್ಲದವರಿಗೆ ಮನೆ ಕಟ್ಟಿಕೊಡುವ ಜವಾಬ್ದಾರಿ ನನ್ನ ಹಾಗೂ ಮುನಿರತ್ನ ಮೇಲಿದೆ. ಮುನಿರತ್ನರನ್ನು ಮಂತ್ರಿಮಾಡಲು ನೀವೆಲ್ಲ ಅವಕಾಶ ನೀಡಿ. ಹಿಂದೂ ಮುಸ್ಲಿಮರೆಂದು ನಾನೆಂದೂ ಭೇದಭಾವ ಮಾಡಿಲ್ಲ. ಮುನಿರತ್ನ ನಾಯ್ಡುರವರ ಕೆಲಸ ಏನೆಂದು ಎಲ್ಲರಿಗೂ ಗೊತ್ತಿದೆ ಎಂದು ಚುನಾವಣಾ ಪ್ರಚಾರದಲ್ಲಿ ಸಿಎಂ ಯಡಿಯೂರಪ್ಪ ಹೇಳಿದರು.
ಸಿಎಂ ಯಡಿಯೂರಪ್ಪ ಇಂದು ಮುನಿರತ್ನ ಪರ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದರು. ಇದೇ ವೇಳೆ, ಸಚಿವರಾದ ಆರ್.ಅಶೋಕ್, ಎಸ್.ಟಿ.ಸೋಮಶೇಖರ್ ಹಾಗೂ ಭೈರತಿ ಬಸವರಾಜ್ ಸೇರಿದಂತೆ ಹಲವರು ಮುಖ್ಯಮಂತ್ರಿಗಳಿಗೆ ಸಾಥ್ ನೀಡಿದರು.