‘ಮದಲೂರು ಕೆರೆಗೆ 6 ತಿಂಗಳಲ್ಲಿ ನೀರು ಹರಿಸುತ್ತಾರಂತಾ? ಅಲ್ಲಿವರೆಗೂ BSY ಇರ್ತಾರೋ ಇಲ್ವೋ ಗೊತ್ತಿಲ್ಲ’
ತುಮಕೂರು: ಹಿಂದೆ ಶಿರಾಗೆ ಹೆಣ್ಣು ಮಕ್ಕಳನ್ನು ಕೊಡಲು ಹೆದರುತ್ತಿದ್ದರು. ಶಿರಾದಲ್ಲಿ ಕುಡಿಯುವ ನೀರಿಲ್ಲ ಎಂದು ಭಯ ಪಡುತ್ತಿದ್ದರು ಎಂದು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಹೇಳಿಕೆ ಕೊಟ್ಟರು. 151 ಬ್ಯಾರೇಜ್ ಕಟ್ಟಿಸಿ ಟಿ.ಬಿ.ಜಯಚಂದ್ರ ನೀರು ತಂದಿದ್ದಾರೆ. ಶಿರಾ ಕ್ಷೇತ್ರಕ್ಕೆ ಜಯಚಂದ್ರರಂತಹ ಮುತ್ಸದ್ಧಿಯ ಅಗತ್ಯವಿದೆ. ಶಿರಾದಲ್ಲಿ ಸಾರ್ವಜನಿಕವಾಗಿ ಹಣ, ಹೆಂಡ ಹಂಚಲಾಗುತ್ತಿದೆ. ಆದ್ರೂ ಚುನಾವಣಾ ಆಯೋಗ ಈವರೆಗೆ ಕ್ರಮಕೈಗೊಂಡಿಲ್ಲ ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಕಿಡಿಕಾರಿದರು. ‘ತುಮಕೂರಿಗೆ ಬಿಜೆಪಿಯ ಕೊಡುಗೆ ಏನು?’ […]

ತುಮಕೂರು: ಹಿಂದೆ ಶಿರಾಗೆ ಹೆಣ್ಣು ಮಕ್ಕಳನ್ನು ಕೊಡಲು ಹೆದರುತ್ತಿದ್ದರು. ಶಿರಾದಲ್ಲಿ ಕುಡಿಯುವ ನೀರಿಲ್ಲ ಎಂದು ಭಯ ಪಡುತ್ತಿದ್ದರು ಎಂದು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಹೇಳಿಕೆ ಕೊಟ್ಟರು.
151 ಬ್ಯಾರೇಜ್ ಕಟ್ಟಿಸಿ ಟಿ.ಬಿ.ಜಯಚಂದ್ರ ನೀರು ತಂದಿದ್ದಾರೆ. ಶಿರಾ ಕ್ಷೇತ್ರಕ್ಕೆ ಜಯಚಂದ್ರರಂತಹ ಮುತ್ಸದ್ಧಿಯ ಅಗತ್ಯವಿದೆ. ಶಿರಾದಲ್ಲಿ ಸಾರ್ವಜನಿಕವಾಗಿ ಹಣ, ಹೆಂಡ ಹಂಚಲಾಗುತ್ತಿದೆ. ಆದ್ರೂ ಚುನಾವಣಾ ಆಯೋಗ ಈವರೆಗೆ ಕ್ರಮಕೈಗೊಂಡಿಲ್ಲ ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಕಿಡಿಕಾರಿದರು.
‘ತುಮಕೂರಿಗೆ ಬಿಜೆಪಿಯ ಕೊಡುಗೆ ಏನು?’
ಅಪ್ಪರ್ ಭದ್ರಾ, ಹೇಮಾವತಿ, ಎತ್ತಿನಹೊಳೆ.. ಈ ಮೂರು ಯೋಜನೆಗಳನ್ನು ತಂದಿದ್ದೇ ಕಾಂಗ್ರೆಸ್ ಪಕ್ಷ. ತುಮಕೂರಿಂದ ಪಾವಗಡಕ್ಕೆ ನೀರು ಬಿಡುವಾಗಲೂ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿತ್ತು. ಬಿಜೆಪಿ ಮತ್ತು ಜೆಡಿಎಸ್ ಆಡಳಿತ ಇದ್ದಾಗ ಇಂಥ ದೊಡ್ಡ ಯೋಜನೆಗಳನ್ನು ಮಾಡಿದ್ದಾರಾ? ಇಲ್ಲ. ತುಮಕೂರಿಗೆ ಬಿಜೆಪಿಯ ಕೊಡುಗೆ ಏನು? ಎಂದು ಪ್ರಶ್ನಿಸಿದರು.
ನನಗೆ ಸಿಎಂ ಯಡಿಯೂರಪ್ಪರ ಹಿರಿತನದ ಬಗ್ಗೆ ಗೌರವವಿದೆ. ಮದಲೂರಿಗೆ ಬಂದು ಕೆರೆಗೆ ನೀರು ಹರಿಸುತ್ತೇನೆ ಅಂತಾರೆ ಯಡಿಯೂರಪ್ಪ. ಆದರೆ, ಅವರೇ ಆರು ತಿಂಗಳ ನಂತರ ಇರ್ತಾರೋ ಇಲ್ವೋ ನಮಗಂತೂ ಗೊತ್ತಿಲ್ಲ. ಅವರದ್ದೇ ಪಕ್ಷದ ಪರಿಸ್ಥಿತಿ ಸರಿಯಿಲ್ಲ ಎಂದು ಪರಮೇಶ್ವರ್ ಹೇಳಿದರು.
‘ಯಡಿಯೂರಪ್ಪ ಹೊಸದಾಗಿ ಮಾಡುವಂಥದ್ದು ಏನೂ ಇಲ್ಲ’ ಯಡಿಯೂರಪ್ಪ ಹೇಳೋ ಪ್ರಕಾರ ಇದು ಹೊಸ ಯೋಜನೆ ಅಲ್ಲವೇ ಅಲ್ಲ. ಟಿ.ಬಿ.ಜಯಚಂದ್ರರೇ ಈ ಕೆರೆಗೆ ನೀರು ಹರಿಸಿದ್ದು. ಅದಕ್ಕಾಗಿಯೇ ಜಯಚಂದ್ರ ಅಪ್ಪ ಅಮ್ಮ ಅಂತಾ ಹೇಳಿದ್ದು. ಯಡಿಯೂರಪ್ಪ ಹೊಸದಾಗಿ ಮಾಡುವಂಥದ್ದು ಏನೂ ಇಲ್ಲ. ನೀರು ಬಿಟ್ಟರೆ ತನ್ನಿಂದ ತಾನೇ ಕೆರೆ ತುಂಬಲಿದೆ. ಬಿಜೆಪಿಯವರು ಯಾವ ಧೈರ್ಯದಿಂದ, ಯಾವ ಮುಖ ಇಟ್ಟುಕೊಂಡು ಬಂದು ಕೆಲಸ ಮಾಡಿದ್ದೇವೆ ಅಂತಿದ್ದೀರಾ? ಶಿರಾ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು? ಎಂದು ಬಿಜೆಪಿಗೆ ಪರಮೇಶ್ವರ್ ನೇರವಾಗಿ ಪ್ರಶ್ನಿಸಿದರು.
Published On - 12:49 pm, Sat, 31 October 20



