ಲಾಕ್‌ಡೌನ್ ಮಧ್ಯೆಯೂ ಅದ್ಧೂರಿ ಜಾತ್ರೆ, ಅರ್ಚಕನ ವಿರುದ್ಧ ಕೇಸ್
ರಾಮನಗರ: ಕೊರೊನಾ ಲಾಕ್‌ಡೌನ್ ಮಧ್ಯೆಯೂ ಕೊಳಗೊಂಡನಹಳ್ಳಿಯಲ್ಲಿ ಅದ್ಧೂರಿಯಾಗಿ ಜಾತ್ರೆ ನಡೆಸಿದ ಹಿನ್ನೆಲೆಯಲ್ಲಿ ಮಾರಮ್ಮ ದೇವಸ್ಥಾನದ ಅರ್ಚಕನ ವಿರುದ್ಧ ಕೇಸ್ ದಾಖಲಾಗಿದೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕೊಳಗೊಂಡನಹಳ್ಳಿ ಗ್ರಾಮದಲ್ಲಿರುವ ಮಾರಮ್ಮ ದೇವಸ್ಥಾನದ ಜಾತ್ರೆಯನ್ನು ಮೇ 12 ರಂದು ಅದ್ಧೂರಿಯಾಗಿ ನೆರವೇರಿಸಲಾಗಿತ್ತು. ಹೀಗಾಗಿ ಲಾಕ್‌ಡೌನ್ ಇದ್ದರೂ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಜಾತ್ರೆ ಮಾಡಲಾಗಿದೆ ಎಂದು ಮಾರಮ್ಮ ದೇವಸ್ಥಾನದ ಅರ್ಚಕ ಚಿಕ್ಕಮಾರೇಗೌಡ ವಿರುದ್ಧ ಪ್ರಕರಣ ದಾಖಲಾಗಿದೆ. ಜಾತ್ರೆಯಲ್ಲಿ ಗ್ರಾಮದ ಜನರು ಅಂತರ ಮರೆತು, ಮಾಸ್ಕ್ ಧರಿಸದೇ ಭಾಗಿಯಾಗಿದ್ದರು. ಕೋಡಿಹಳ್ಳಿ ಪೊಲೀಸ್ […]
Follow us on
ರಾಮನಗರ: ಕೊರೊನಾ ಲಾಕ್‌ಡೌನ್ ಮಧ್ಯೆಯೂ ಕೊಳಗೊಂಡನಹಳ್ಳಿಯಲ್ಲಿ ಅದ್ಧೂರಿಯಾಗಿ ಜಾತ್ರೆ ನಡೆಸಿದ ಹಿನ್ನೆಲೆಯಲ್ಲಿ ಮಾರಮ್ಮ ದೇವಸ್ಥಾನದ ಅರ್ಚಕನ ವಿರುದ್ಧ ಕೇಸ್ ದಾಖಲಾಗಿದೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕೊಳಗೊಂಡನಹಳ್ಳಿ ಗ್ರಾಮದಲ್ಲಿರುವ ಮಾರಮ್ಮ ದೇವಸ್ಥಾನದ ಜಾತ್ರೆಯನ್ನು ಮೇ 12 ರಂದು ಅದ್ಧೂರಿಯಾಗಿ ನೆರವೇರಿಸಲಾಗಿತ್ತು. ಹೀಗಾಗಿ ಲಾಕ್‌ಡೌನ್ ಇದ್ದರೂ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಜಾತ್ರೆ ಮಾಡಲಾಗಿದೆ ಎಂದು ಮಾರಮ್ಮ ದೇವಸ್ಥಾನದ ಅರ್ಚಕ ಚಿಕ್ಕಮಾರೇಗೌಡ ವಿರುದ್ಧ ಪ್ರಕರಣ ದಾಖಲಾಗಿದೆ. ಜಾತ್ರೆಯಲ್ಲಿ ಗ್ರಾಮದ ಜನರು ಅಂತರ ಮರೆತು, ಮಾಸ್ಕ್ ಧರಿಸದೇ ಭಾಗಿಯಾಗಿದ್ದರು. ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.