ಬೀದರ್: ಜಾನುವಾರು ರೈತರ ಜೀವನಾಡಿ. ಎಷ್ಟೋ ರೈತರು ಅದೇ ಜಾನುವಾರು ಸಾಕಾಣೆಯಿಂದ ಬದುಕು ಕಟ್ಟಿಕೊಂಡಿದ್ದಾರೆ. ಹೀಗಾಗಿ ಅದೇ ಅನ್ನದಾತರಿಗಾಗಿ ಪಶುಮೇಳ ಆಯೋಜನೆ ಮಾಡಲಾಗಿತ್ತು. ಆದ್ರೆ ಆ ಮೇಳಕ್ಕೆ ಬಂದವ್ರೆಲ್ಲಾ ಬೆರಗಾಗಿಗ್ರು. ಬಾಯ್ಮೇಲೆ ಬೆರಳಿಟ್ಟು ಅಚ್ಚರಿಯಿಂದ ನೋಡ್ತಿದ್ರು.
ನೊಣ ಕುಂತ್ರೆ ಜಾರುವಷ್ಟು ನುಣುಪು. ಮದಗಜವನ್ನೂ ಮೀರಿಸುವಂತ ಮೈಕಟ್ಟು. ಕೊಬ್ಬಿದ ಹೋರಿಯ ರಗಡ್ ಲುಕ್ಕು.. ಅಬ್ಬಬ್ಬಾ.. ಆ ದೇಹದ ಆಕಾರವೇನು. ಉದ್ದನೆಯ ಕೊಂಬೇನು. ನಿಜಕ್ಕೂ ಈ ರಾಸುಗಳನ್ನ ನೋಡ್ತಿದ್ರೆ ಆನೆಯನ್ನೇ ನೋಡಿದಂತೆ ಭಾಸವಾಗುತ್ತೆ.
ಪಶುಗಳನ್ನು ನೋಡಲು ಮುಗಿಬಿದ್ದ ಸಾರ್ವಜನಿಕರು:
ಇನ್ನು ಕಾಂಕ್ರೇಜ್, ಜಾಫ್ರಿಬಾದಿ ತಳಿಯ ಭಾರೀ ಗಾತ್ರದ ಎತ್ತುಗಳಂತೂ 800ಕ್ಕೂ ಹೆಚ್ಚು ಕೆಜಿ ತೂಗ್ತಿದ್ವು. ಗಾತ್ರದ ಜೊತೆಗೆ ಅಷ್ಟೇ ದೊಡ್ಡ ಕೊಂಬುಗಳನ್ನು ಹೊಂದಿದ್ದ, ವಿಶಿಷ್ಟ ಆಕಾರದ ತಲೆ ಹೊಂದಿದ್ದ ಕೆಲ ಪಶುಗಳು ಎಲ್ಲರ ಗಮನ ಸೆಳೆದ್ವು. ಇನ್ನು ಮೇಳಕ್ಕೆ ತರಲಾಗಿರುವ ಪಶುಗಳ ಆರೈಕೆಗಾಗಿ ಪ್ರತ್ಯೇಕ ಪರಿಚಾರಕರನ್ನು ನೇಮಿಸಲಾಗಿದೆ. ರಾಜ್ಯದ ನಾನಾ ಭಾಗದ ರೈತರಷ್ಟೇ ಅಲ್ಲದೆ ಅನೇಕ ಶಾಲೆಗಳ ಮಕ್ಕಳು ಪಶುಮೇಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಅಂತೂ ಮೇಳ ಅಂದ್ರೆನೆ ಅಲ್ಲೇನೋ ಸ್ಪೆಷಾಲಿಟಿ ಇರುತ್ತೆ. ಅದ್ರಲ್ಲೂ ಬೀದರ್ನಲ್ಲಿನ ಪಶುಮೇಳ ವಿಶೇಷತೆ ಜತೆಗೆ ಅಚ್ಚರಿಗೂ ಕಾರಣವಾಗಿದೆ. ಯಾಕಂದ್ರೆ ಅಲ್ಲಿರೋ ಒಂದೊಂದು ರಾಸು ಕೂಡ ಒಂದೊಂದು ರೀತಿಯಲ್ಲಿದ್ದು, ಎಲ್ಲರ ಹುಬ್ಬೇರಿಸ್ತಿವೆ.