
ಕೊರೊನಾ ಭೀತಿಯ ನಡುವೆಯೂ ಹಾವೇರಿ ನಗರದಲ್ಲಿ ಇಂದು ಗುರುವಾರದ ಸಂತೆ ಭರ್ಜರಿಯಾಗಿ ನಡೆದಿದೆ. ನಗರದ ಎಪಿಎಂಸಿ ಆವರಣದಲ್ಲಿರೋ ಜಾನುವಾರು ಮಾರುಕಟ್ಟೆಯಲ್ಲಿ ಈ ಜಾನುವಾರು ಸಂತೆ ನಡೀತಿದೆ.
ಮಾಸ್ಕ್ ಧರಿಸದೆ, ದೈಹಿಕ ಅಂತರವಿಲ್ಲದೆ ಜನದಟ್ಟಣೆಯಿಂದ ಕೂಡಿರೋ ಜಾನುವಾರು ಸಂತೆಯಲ್ಲಿ ಎತ್ತು, ಎಮ್ಮೆ, ಆಕಳು ಮತ್ತು ಕುರಿಗಳ ವ್ಯಾಪಾರ ಜೋರಾಗಿ ನಡೆದಿದೆ. ನಗರದಲ್ಲಿ ದೊಡ್ಡ ಪ್ರಮಾಣದ ಸಂತೆ ನಡೆಯುತ್ತಿದ್ರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಕೇಸುಗಳು ಹೆಚ್ಚುತ್ತಿದ್ರೂ ಜಿಲ್ಲಾಡಳಿತದಿಂದ ನಿರ್ಲಕ್ಷ್ಯ ಚಿಂತೆಗೀಡುಮಾಡಿದೆ.
Published On - 10:38 am, Thu, 2 July 20