FDA ಪ್ರಶ್ನೆ ಪತ್ರಿಕೆ ಸೋರಿಕೆ: ಕಿಂಗ್ ಪಿನ್ ಚಂದ್ರು ಸಿಸಿಬಿ ಪೊಲೀಸರಿಗೆ ಲಾಕ್ ಆಗಿದ್ದು ಹೇಗೆ? ಆ್ಯಕ್ಸಿಡೆಂಟ್​ ಹಿಂದಿನ ರೋಚಕ ಕಥೆ

| Updated By: Lakshmi Hegde

Updated on: Jan 24, 2021 | 2:41 PM

FDA ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್‌ ಮೇಲೆ ಸಿಸಿಬಿ ದಾಳಿ ನಡೆಸಿತ್ತು. ತಂದೆ-ತಾಯಿ ಜೊತೆ ಫ್ಲ್ಯಾಟ್​ನಲ್ಲಿ ವಾಸವಿದ್ದ ಲೀಕಾಸುರ ಚಂದ್ರುನನ್ನು ಪತ್ತೆ ಹಚ್ಚಿದ ರೋಚಕ ಕಥೆ ಹಾಗೂ ರಾಜ್ಯದಲ್ಲಿ ಹೇಗೆ ನಡೀತಿತ್ತು ಈ ಎಫ್​ಡಿಎ ಪೇಪರ್ ಲೀಕ್? ಎಂಬ ಮಾಹಿತಿ ಇಲ್ಲಿದೆ.

FDA ಪ್ರಶ್ನೆ ಪತ್ರಿಕೆ ಸೋರಿಕೆ: ಕಿಂಗ್ ಪಿನ್ ಚಂದ್ರು ಸಿಸಿಬಿ ಪೊಲೀಸರಿಗೆ ಲಾಕ್ ಆಗಿದ್ದು ಹೇಗೆ? ಆ್ಯಕ್ಸಿಡೆಂಟ್​  ಹಿಂದಿನ ರೋಚಕ ಕಥೆ
ಕೇಂದ್ರ ಅಪರಾಧ ವಿಭಾಗ
Follow us on

ಬೆಂಗಳೂರು: FDA ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್​ಗೆ ಸಂಬಂಧಿಸಿ ಈವರೆಗೆ 14 ಮಂದಿ ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಬಂಧಿತರಿಂದ 35 ಲಕ್ಷ ಹಣ ಜಪ್ತಿ ಮಾಡಲಾಗಿದೆ. ಆದ್ರೆ ಸಿಸಿಬಿ ಪೊಲೀಸರು ಕಿಂಗ್ ಪಿನ್ ಚಂದ್ರು ಮೂಲ ಜಾಲಾಡಿದ್ದೇ ರೋಚಕ. FDA ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್‌ ಮೇಲೆ ಸಿಸಿಬಿ ದಾಳಿ ನಡೆಸಿತ್ತು. ತಂದೆ-ತಾಯಿ ಜೊತೆ ಫ್ಲ್ಯಾಟ್​ನಲ್ಲಿ ವಾಸವಿದ್ದ ಲೀಕಾಸುರ ಚಂದ್ರುನನ್ನು ಪತ್ತೆ ಹಚ್ಚಿದ ರೋಚಕ ಕಥೆ ಹಾಗೂ ರಾಜ್ಯದಲ್ಲಿ ಹೇಗೆ ನಡೀತಿತ್ತು ಈ ಎಫ್​ಡಿಎ ಪೇಪರ್ ಲೀಕ್? ಎಂಬ ಮಾಹಿತಿ ಇಲ್ಲಿದೆ.

ಮೊದಲಿಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದರು. ಚಂದ್ರು ಮನೆ ಪತ್ತೆ ಮಾಡಿ ಮನೆಯಲ್ಲಿ ಅಡಗಿದ್ದ ಆತನನ್ನು ಹೊರಗೆ ಕರೆತರಲು ಮೆಗಾ ಪ್ಲ್ಯಾನ್ ಮಾಡಿದ್ರು. ಚಂದ್ರು ತನ್ನ ಮನೆಗೆ ಎಂಟ್ರಿ ಕೊಟ್ಟಿದ್ದನ್ನ ನೋಡಿ ಆತನ ಮನೆಗೆ ACP ವೇಣುಗೋಪಾಲ್ ನೇತೃತ್ವದ ತಂಡ ಹೋಗಿದೆ. ಆ್ಯಕ್ಸಿಡೆಂಟ್ ಕತೆ ಹೇಳಿ ಚಂದ್ರು ಮನೆಗೆ ನುಗ್ಗಿದ್ದಾರೆ. ಈ ವೇಳೆ ಮನೆ ಬಾಗಿಲು ತಟ್ಟಿದ ಪೊಲೀಸರಿಗೆ ಮೊದಲು ಸಿಕ್ಕಿದ್ದು ಚಂದ್ರು ತಾಯಿ. ಮೊದಲಿಗೆ ಚಂದ್ರು ತಾಯಿ ಪೊಲೀಸರನ್ನ ಯಾರು ನೀವು ಎಂದು ಕೇಳಿದ್ರು?

ಆಗ ಕಾರ್ಯಾಚರಣೆ ವೇಳೆ ಮಫ್ತಿಯಲ್ಲಿದ್ದ ಸಿಸಿಬಿ ಅಧಿಕಾರಿಗಳು, ಮಾರ್ಗಮಧ್ಯೆ ನಿಮ್ಮ ಮಗ ಗಾಡಿಗೆ ಗುದ್ದಿ ಬಂದಿದ್ದಾನೆ. ಗಾಡಿಗೆ ಡ್ಯಾಮೇಜ್ ಆಗಿದೆ ಎಲ್ಲಿ ಅವನು ಎಂದು ಕೇಳಿದ್ದಾರೆ. ಆತ ಇಲ್ಲ ಬೇಕಾದ್ರೆ ಹಣ ಕೊಡ್ತೀನಿ ಬಿಡಿ ಎಂದು ಚಂದ್ರು ತಾಯಿ ಉತ್ತರಿಸಿದ್ದಾರೆ. ಆಗ ಮನೆಯಲ್ಲೇ ಇದ್ದಾನೆ, ಚಂದ್ರ ಈಗಷ್ಟೇ ಮನೆಗೆ ಬಂದಿದ್ದಾನೆ ಎಂದು ಚಂದ್ರು ಇಲ್ಲವೆಂದು ವಾದ ಮಾಡ್ತಿದ್ದ ತಾಯಿಗೆ ಖಾಕಿ ತಿಳಿಸಿದೆ. ಆತ ಇಲ್ಲ ಅಂತಾ ತಾಯಿ ಹೇಳಿದ್ರೂ ಪೊಲೀಸರು ಬಾಗಿಲು ತೆರೆದು ಒಳಕ್ಕೆ ನುಗ್ಗಿದ್ದಾರೆ. ಈ ವೇಳೆ ಚಂದ್ರು ತಂದೆ ಅನಾರೋಗ್ಯದಿಂದಾಗಿ ಮನೆಯಲ್ಲಿದ್ರು.

ಪೊಲೀಸರು ಮನೆಯೊಳಗೆ ಎಂಟ್ರಿ ಕೊಟ್ಟಾಗ ಕಾದಿತ್ತು ಶಾಕ್!
ಪೊಲೀಸರು ಮನೆಯೊಳಕ್ಕೆ ಎಂಟ್ರಿ ಕೊಟ್ತಿದ್ದಂಗೆ ಪೊಲೀಸರಿಗೆ ಆರೋಪಿ ಚಂದ್ರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆ ಮುಂದಿಟ್ಕೊಂಡು ಕುಳಿತಿದ್ದ ಚಂದ್ರುನನ್ನು ಹಿಡಿದು ಪೊಲೀಸರು ಆ್ಯಕ್ಸಿಡೆಂಟ್​    ಮಾಡಿ ಹಾಗೆ ಬಂದಿದ್ದೀಯಾ ಅಂತಾ ಹೊರಗೆ ಕರೆತಂದಿದ್ದಾರೆ. ಬಳಿಕ ಕಿಂಗ್​ಪಿನ್ ಚಂದ್ರುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಕೈಯಿಂದ ಕೈಗೇ ಸಪ್ಲೈ ಆಗ್ತಿತ್ತು ಎಫ್​​ಡಿಎ ಉತ್ತರ ಪತ್ರಿಕೆ
ಚಂದ್ರು ಹ್ಯಾಂಡ್ ಟು ಹ್ಯಾಂಡ್ ಡೀಲಿಂಗ್ ಮಾಡ್ತಿದ್ದ. ನೇರವಾಗಿ ಭೇಟಿಯಾಗಿ ಉತ್ತರ ಪತ್ರಿಕೆ ನೀಡ್ತಿದ್ದ. ಅದು ಕೂಡ ಕೇವಲ ಪರಿಚಯಸ್ಥರಿಗೆ ಮಾತ್ರ. ಮೊದಲ ವ್ಯಕ್ತಿಗೆ ಉತ್ತರಪತ್ರಿಕೆ ನೀಡಿ ಬಳಿಕ ಆತನ ಸಮ್ಮುಖದಲ್ಲೇ ಉಳಿದವ್ರಿಗೆ ಹಂಚಿಕೆ ಮಾಡ್ತಿದ್ದ. ಆ ಮೊದಲ ವ್ಯಕ್ತಿಗೆ ಉತ್ತರ ಪತ್ರಿಕೆಯ ಜವಾಬ್ದಾರಿ ವಹಿಸುತ್ತಿದ್ದ. ಯಾವುದೇ ಕಾರಣಕ್ಕೂ ವಾಟ್ಸಾಪ್, ಆನ್​ಲೈನ್ ಮುಖಾಂತರ ಉತ್ತರ ಪತ್ರಿಕೆ ಹಂಚುತ್ತಿರಲಿಲ್ಲ. ಈ ರೀತಿ ಚಂದ್ರುನ ಡೀಲಿಂಗ್ ಆಗುತ್ತಿತ್ತು.

ಅಸಲಿಗೆ ಎಫ್​ಡಿಎ ಪ್ರಶ್ನೆಪತ್ರಿಕೆ ಲೀಕ್ ಆಗಿದ್ದು ಎಲ್ಲಿ?
2 ದಿನಗಳ ಹಿಂದೆಯೇ ಕಿಂಗ್​ಪಿನ್ ಚಂದ್ರುಗೆ ಪ್ರಶ್ನೆಪತ್ರಿಕೆ ಕೈಗೆ ಸಿಕ್ಕಿತ್ತು. ಬಳಿಕ ಸಂಪೂರ್ಣವಾಗಿ ಲಿಖಿತ ರೂಪದಲ್ಲಿ ಉತ್ತರಗಳನ್ನು ತಯಾರಿಸಿ ಅವುಗಳನ್ನು ಹಂಚಿದ್ದ. ಹಲವು ದಿನಗಳ ಹಿಂದೆಯೇ ಪ್ರಶ್ನೆಪತ್ರಿಕೆ ಸೋರಿಕೆಯಾದ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಆದ್ರೆ ಅದು ಯಾರ ಗಮನಕ್ಕೂ ಬಂದಿರಲಿಲ್ಲ. ಸದ್ಯ ಈಗ ಯಾರಿಂದ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಅನ್ನೋದೇ ಅನುಮಾನವಾಗಿದೆ.

KPSC ಸಿಬ್ಬಂದಿಯೇ ಆಗಿದ್ದಾರಾ ಮಾಸ್ಟರ್ ಮೈಂಡ್?
ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರು ನೀಡಿರುವ ಮಾಹಿತಿ ಮೇರೆಗೆ ಕೆಪಿಎಸ್​ಸಿ ಕಚೇರಿಯ ಇಬ್ಬರು ಸಿಬ್ಬಂದಿ ಮೇಲೆ ಸಿಸಿಬಿಗೆ ಅನುಮಾನ ವ್ಯಕ್ತವಾಗಿದೆ. ಆದ್ರೆ ಇಬ್ಬರು ಸಿಬ್ಬಂದಿ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ನಾಪತ್ತೆಯಾಗಿರುವ ಶಂಕಿತರ ಪತ್ತೆಗಾಗಿ ಸಿಸಿಬಿ ಬಲೆ ಬೀಸಿದೆ.

FDA ಪ್ರಶ್ನೆ ಪತ್ರಿಕೆ ಸೋರಿಕೆ: ವಾಣಿಜ್ಯ ತೆರಿಗೆ ಇನ್ಸ್​ಪೆಕ್ಟರ್​ ಭಾಗಿ, ಪೇಪರ್ ಪಡೆಯಲು ಬಂದಿದ್ದ ಐವರು ಅರೆಸ್ಟ್