ಬೆಂಗಳೂರಿನಲ್ಲಿ 3 SDPI ಕಚೇರಿಗಳ ಮೇಲೆ‌ CCB ದಾಳಿ, ದಾಖಲೆಗಳ ಪರಿಶೀಲನೆ

ಬೆಂಗಳೂರು: ನಗರದ ಮೂರು ಎಸ್​ಡಿಪಿಐ ಕಚೇರಿ ಮೇಲೆ‌ ಸಿಸಿಬಿ ದಾಳಿ ನಡೆಸಿದೆ. ಕೋರ್ಟ್​ನಿಂದ ವಾರೆಂಟ್ ಪಡೆದು ಡಿಜೆ ಹಳ್ಳಿ ಕೆಜಿ ಹಳ್ಳಿ ಹಾಗೂ ಹಲಸೂರು ಗೇಟ್ ಕಚೇರಿಗಳ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಿಸಿಬಿ ಸಂಘಟಿತ ಅಪರಾಧ ದಳ ಎಸಿಪಿ ಜಗ್ನನಾಥ ರೈ ನೇತೃತ್ವದಲ್ಲಿ ‌ದಾಳಿ ನಡೆದಿದ್ದು, ಹತ್ತಕ್ಕೂ ಹೆಚ್ಚು ಸಿಸಿಬಿ ಪೊಲೀಸರಿಂದ ಹಲಸೂರು ಗೇಟ್ ಠಾಣಾ ವ್ಯಾಪ್ತಿಯ ಕಬ್ಬನ್ ಪೇಟೆ ಮುಖ್ಯ ರಸ್ತೆಯಲ್ಲಿರುವ SDPI ಕಚೇರಿ ಮೇಲೆ ದಾಳಿ ನಡೆಸಿ ಲ್ಯಾಪ್ ಟ್ಯಾಪ್, ದಾಖಲೆಗಳ […]

ಬೆಂಗಳೂರಿನಲ್ಲಿ 3 SDPI ಕಚೇರಿಗಳ ಮೇಲೆ‌ CCB ದಾಳಿ, ದಾಖಲೆಗಳ ಪರಿಶೀಲನೆ

Updated on: Sep 01, 2020 | 2:23 PM

ಬೆಂಗಳೂರು: ನಗರದ ಮೂರು ಎಸ್​ಡಿಪಿಐ ಕಚೇರಿ ಮೇಲೆ‌ ಸಿಸಿಬಿ ದಾಳಿ ನಡೆಸಿದೆ. ಕೋರ್ಟ್​ನಿಂದ ವಾರೆಂಟ್ ಪಡೆದು ಡಿಜೆ ಹಳ್ಳಿ ಕೆಜಿ ಹಳ್ಳಿ ಹಾಗೂ ಹಲಸೂರು ಗೇಟ್ ಕಚೇರಿಗಳ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸಿಸಿಬಿ ಸಂಘಟಿತ ಅಪರಾಧ ದಳ ಎಸಿಪಿ ಜಗ್ನನಾಥ ರೈ ನೇತೃತ್ವದಲ್ಲಿ ‌ದಾಳಿ ನಡೆದಿದ್ದು, ಹತ್ತಕ್ಕೂ ಹೆಚ್ಚು ಸಿಸಿಬಿ ಪೊಲೀಸರಿಂದ ಹಲಸೂರು ಗೇಟ್ ಠಾಣಾ ವ್ಯಾಪ್ತಿಯ ಕಬ್ಬನ್ ಪೇಟೆ ಮುಖ್ಯ ರಸ್ತೆಯಲ್ಲಿರುವ SDPI ಕಚೇರಿ ಮೇಲೆ ದಾಳಿ ನಡೆಸಿ ಲ್ಯಾಪ್ ಟ್ಯಾಪ್, ದಾಖಲೆಗಳ ಪರಿಶೀಲನೆ ಮಾಡಲಾಗಿದೆ.

ದಾಳಿ ವೇಳೆ ಕಚೇರಿಯ ಇಬ್ಬರು ಸಿಬ್ಬಂದಿಗಳು ಮಾತ್ರ ಕಾರ್ಯ ನಿರ್ವ‌ಹಣೆ ಮಾಡುತ್ತಿದ್ರು. ಈ ಹಿಂದೆ SDPI ನಿಂದ ನಡೆದ ಸಭೆ, ಸಮಾರಂಭ, ಕಾರ್ಯಕ್ರಮಗಳ ದಾಖಲೆಗಳನ್ನೂ ಸಹ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ.

ಡಿಜೆ ಹಳ್ಳಿ ಪ್ರಕರಣ ಸಂಬಂಧ ಸಿಸಿಬಿ ದಾಳಿ:
ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ಸಂಬಂಧ ಮೂರು ಪ್ರಕರಣಗಳು ಸಿಸಿಬಿಗೆ ವರ್ಗಾವಣೆ ಆಗಿದ್ದವು. ಅದರ ಸಂಬಂಧ ಎಸಿಪಿಗಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಹೀಗಾಗಿ ತನಿಖೆ ಭಾಗವಾಗಿ ನ್ಯಾಯಾಲಯದಿಂದ ವಾರೆಂಟ್ ಪಡೆದು ಮೂರು ಎಸ್​ಡಿಪಿಐ ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ. ದಾಳಿ ಮುಂದುವರೆದಿದ್ದು ಈಗ ತನಿಖಾ ಹಂತದಲ್ಲಿದೆ. ತನಿಖೆಯ ವಿಚಾರಗಳನ್ನು ಹೇಳಲು ಸಾಧ್ಯವಿಲ್ಲ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.

Published On - 1:29 pm, Tue, 1 September 20