‘ಇಂದ್ರಜಿತ್ ಮಾಡುತ್ತಿರುವುದು ಸರಿಯಾಗಿದೆ, ಈಗ್ಲೇ ಎಲ್ಲಾ ಕ್ಲೀನ್ ಆಗಲಿ’

‘ಇಂದ್ರಜಿತ್ ಮಾಡುತ್ತಿರುವುದು ಸರಿಯಾಗಿದೆ, ಈಗ್ಲೇ ಎಲ್ಲಾ ಕ್ಲೀನ್ ಆಗಲಿ’
ದುನಿಯಾ ವಿಜಯ್

ಬೆಂಗಳೂರು: ಹೊಸಬರಿಂದ ಕನ್ನಡ ಚಿತ್ರರಂಗಕ್ಕೆ ಕೆಟ್ಟ ಹೆಸರು ಬರುತ್ತಿದೆ. ಈ ರೀತಿ ಮಾಡುವುದಾದರೆ ನೀವು‌ ಚಿತ್ರರಂಗಕ್ಕೆ ಬರಬೇಡಿ ಎಂದು ನಟ ದುನಿಯಾ ವಿಜಯ್ ಖಾರವಾಗಿ ಹೇಳಿದ್ದಾರೆ.

ಚಿತ್ರರಂಗಕ್ಕೆ ಬಂದ್ರೆ ಡೆಡಿಕೇಷನ್​ನಿಂದ ಕೆಲಸ ಮಾಡಬೇಕು. ನಾವೆಲ್ಲಾ ಕಷ್ಟಪಟ್ಟು ಚಿತ್ರರಂಗಕ್ಕೆ ಬಂದಿದ್ದೀವಿ, ಬೆಳೆದಿದ್ದೀವಿ. ವರ್ಕ್​ಔಟ್ ಮಾಡೋರು ಡ್ರಗ್ಸ್ ತೆಗೆದುಕೊಳ್ತಾರೆಂಬುದು ಸುಳ್ಳು.

ಇಂದ್ರಜಿತ್ ಲಂಕೇಶ್ ಮಾಡುತ್ತಿರುವುದು ಸರಿಯಾಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ಎಲ್ಲಾ ಈಗಲೇ ಕ್ಲೀನ್ ಆಗಲಿ ಎಂದು ದುನಿಯಾ ವಿಜಯ್ ಹೇಳಿದ್ದಾರೆ.

ಇವತ್ತಿನ ಯುವಕರು ತುಂಬಾನೇ ಎಚ್ಚರಿಕೆಯಿಂದ ಇರಬೇಕು. ಇವರಿಗೆ ಕಷ್ಟ ಅಂದ್ರೆ ಗೊತ್ತಿರಲ್ಲ ಎಂದು ವಿಜಯ್​ ಯುವ ನಟರಿಗೆ ಎಚ್ಚರಿಕೆ ನೀಡಿದ್ದಾರೆ.

Click on your DTH Provider to Add TV9 Kannada