Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಾಪ್ ಸಿಂಹ ಸಹೋದರನ ವಿರುದ್ಧ ಕಾಂಗ್ರೆಸ್ ಮಾಡಿರುವ ಆರೋಪ ರಾಜಕೀಯ ಪ್ರೇರಿತ: ಬಿವೈ ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ಪ್ರತಾಪ್ ಸಿಂಹ ಸಹೋದರನ ವಿರುದ್ಧ ಕಾಂಗ್ರೆಸ್ ಮಾಡಿರುವ ಆರೋಪ ರಾಜಕೀಯ ಪ್ರೇರಿತ: ಬಿವೈ ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 01, 2024 | 4:17 PM

ಬಸನಗೌಡ ಪಾಟೀಲ್ ಯತ್ನಾಳ್ ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಬೃಹತ್ ಭ್ರಷ್ಟಾಚಾರ ನಡೆದಿದೆ ಅಂತ ಮಾಡುತ್ತಿರುವ ಆರೋಪಗಳಿಗೆ ವಿಜಯೇಂದ್ರ ಆಗಲೀ ಅಥವಾ ಆಗ ಮುಖ್ಯಮಂತ್ರಿಗಳಾಗಿದ್ದ ಬಿಎಸ್ ಯಡಿಯೂರಪ್ಪನವರಾಗಲೀ ಪ್ರತಿಕ್ರಿಯೆ ನೀಡಲು ನಿರಾಕರಿಸುತ್ತಿದ್ದಾರೆ. ದಾವಣಗೆರೆಯಲ್ಲೂ ವಿಜಯೇಂದ್ರ ಅದನ್ನೇ ಮಾಡಿದರು, ಯತ್ನಾಳ್ ಅನ್ನುತ್ತಿದ್ದಂತೆಯೇ ನಿಂತ ಸ್ಥಳದಿಂದ ಕಾಲ್ಕೀಳಿದರು.

ದಾವಣಗೆರೆ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಬರ ಅಧ್ಯಯನಕ್ಕಾಗಿ ಇಂದು ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದು, ದಾವಣಗೆರೆ ತಾಲ್ಲೂಕಿನ ಜಮಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಮೈಸೂರು ಸಂಸದ ಪ್ರತಾಪ್ ಸಿಂಹ (MP Pratap Simha) ಸಹೋದರ ವಿಕ್ರಮ ಸಿಂಹನನ್ನು (Vikram Simha) ಸುಖಾಸುಮ್ಮನೆ ಕಾಡುಗಳ್ಳನಂತೆ ಬಿಂಬಿಸುವ ಪ್ರಯತ್ನ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷದ ಹತಾಶೆ ತೋರಿಸುತ್ತದೆ ಎಂದ ಹೇಳಿದ ವಿಜಯೇಂದ್ರ ಇದು ರಾಜಕೀಯ ಪ್ರೇರಿತವಲ್ಲದೆ ಮತ್ತೇನೂ ಅಲ್ಲ ಎನ್ನುತ್ತಾರೆ. ಅವರ ಹೇಳಿಕೆಯಲ್ಲಿನ ವೈರುದ್ಧ್ಯಗಳನ್ನು ಗಮನಿಸಿ. ಮಾತಿಗಾರಂಭಿಸುತ್ತಲೇ ವಿಜಯೇಂದ್ರ ಎಲ್ಲೋ ಒಂದು ಕಡೆ ಅನ್ನುತ್ತಾರೆ ಮತ್ತು ಈ ಪದಪುಂಜವನ್ನು ನಾಲ್ಕೈದು ಬಾರಿ ಬಳಸುತ್ತಾರೆ. ಮಾತಾಡುವಾಗ ಎಲ್ಲೋ ಒಂದು ಕಡೆ ಅಂತ ಪದೇಪದೆ ಹೇಳಿದರೆ ಹೇಳುವ ಮಾತಿನ ಬಗ್ಗೆ ಖಾತ್ರಿ ಇಲ್ಲ ಅನ್ನೋದು ಸ್ಪಷ್ಟವಾಗುತ್ತದೆ. ಹಾಗೆ ನೋಡಿದರೆ, ವಿಕ್ರಮ ಸಿಂಹನ ವಿರುದ್ಧ ಪ್ರಕರಣ ದಾಖಲಾಗಿರುವುದು ಒಬ್ಬ ಸಾಮಾಜಿಕ ಕಾರ್ಯಕರ್ತ ಮತ್ತು ಒಬ್ಬ ತಹಸೀಲ್ದಾರ್ ದೂರು ದಾಖಲಿಸಿದ ಬಳಿಕ ಅನ್ನೋದು ಬೆಳಕಿಗೆ ಬಂದಿದೆ. ಆದರೂ ವಿಜಯೇಂದ್ರ ಮತ್ತು ರಾಜ್ಯ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ