ಚಿಕ್ಕಬಳ್ಳಾಪುರ: ತಂದೆ ಸೇರಿ ಮೂವರು ಮಕ್ಕಳಿಗೂ ಆವರಿಸಿದ ದೃಷ್ಟಿ ದೋಷ; ಕುಟುಂಬ ಪೋಷಣೆ ಮಾಡಲು ಪತ್ನಿಯ ಪರದಾಟ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 30, 2023 | 7:45 PM

ಅವರದ್ದು ಬಡ ಕುಟುಂಬ, ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತಿದ್ದರು. ತಂದೆ ಹುಟ್ಟಿನಿಂದ ದೃಷ್ಟಿ ದೋಷ ಹೊಂದಿದ್ದರು. ಆದರೆ, ಇದೀಗ ತಂದೆಯಲ್ಲಿದ್ದ ದೃಷ್ಟಿ ದೋಷವು ಮೂವರು ಮಕ್ಕಳಿಗೂ ವ್ಯಾಪಿಸಿದ್ದು, ಇಡೀ ಕುಟುಂಬಕ್ಕೆ ಅಂದಕಾರದ ಕಾರ್ಮೋಡ ಆವರಸಿದೆ. 

ಚಿಕ್ಕಬಳ್ಳಾಪುರ: ತಂದೆ ಸೇರಿ ಮೂವರು ಮಕ್ಕಳಿಗೂ ಆವರಿಸಿದ ದೃಷ್ಟಿ ದೋಷ; ಕುಟುಂಬ ಪೋಷಣೆ ಮಾಡಲು ಪತ್ನಿಯ ಪರದಾಟ
ದೃಷ್ಟಿ ದೋಷದಿಂದ ಬಳಲುತ್ತಿರುವ ಕುಟುಂಬ
Follow us on

ಚಿಕ್ಕಬಳ್ಳಾಪುರ, ನ.30: ಚಿಕ್ಕಬಳ್ಳಾಪುರ(Chikkaballapur) ನಗರದ ಹನ್ನೊಂದನೇ ವಾರ್ಡಿನಲ್ಲಿ ಮೆಹಬೂಬ್ ಪಾಷ ಎಂಬುವವರ ಕುಟುಂಬವಿದ್ದು, ತಮ್ಮ 12 ವರ್ಷದ ವಯಸ್ಸಿನಲ್ಲಿಯೇ ಮೆಹಬೂಬ್ ಪಾಷ ಅವರು ದೃಷ್ಟಿ ದೋಷ ಹೊಂದಿದ್ದರು. ಎಲ್ಲಾ ಆಸ್ಪತ್ರೆಗಳು ಸುತ್ತಾಡಿ ಎಷ್ಟೇ ಖರ್ಚು ಮಾಡಿದರೂ ದೃಷ್ಟಿ ಮರುಕಳಿಸಲಿಲ್ಲ. ವಿವಾಹವಾಗಿ ಮೂರು ಮಕ್ಕಳಿಗೂ ಜನ್ಮ ನೀಡಿದ್ದರು. ದಿನ ಕಳೆದಂತೆ ಪೂರ್ತಿ ದೃಷ್ಟಿ ಕಳೆದುಕೊಂಡುಬಿಟ್ಟರು.ಇದಾದ ಮೇಲೆ ಅವರ ಪತ್ನಿ ಹೇಗೋ ಕಷ್ಟಪಟ್ಟು ಸಂಸಾರದ ನೊಗವನ್ನು ತಾವೇ ಹೂರುತ್ತಿದ್ದರು. ಇದೀಗ ಶಾಲೆಯಲ್ಲಿ ವಿದ್ಯಾಭ್ಯಾಸದ ಸಮಯದಲ್ಲಿ ತಮ್ಮ ಮೂರು ಮಕ್ಕಳಿಗೂ ದೃಷ್ಟಿ ಇಲ್ಲವೆಂದು ಕೇಳಿ ಇಡೀ ಕುಟುಂಬಕ್ಕೆ ಶಾಕ್ ಆಗಿದ್ದು, ಮುಂದಿನ ಜೀವನ ಹೇಗೆ ಎಂದು ದಾರಿ ಕಾಣದೆ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.

ಮೂವರು ಮಕ್ಕಳಿಗೂ ಆವರಿಸಿದ ದೃಷ್ಟಿ ದೋಷ

ಇನ್ನು ತನ್ನ ಪತಿ ಮೆಹಬೂಬ್ ಪಾಷ ಸೇರಿದಂತೆ ಹತ್ತು ವರ್ಷ ವಯಸ್ಸಿನ ಪಾತೀಮಾ, ಎಂಟು ವರ್ಷದ ಚೋಟಿನಾ, ನಾಲ್ಕು ವರ್ಷದ ಮೊಹಮದ್ ಸೆಹಾನ್, ಎಂಬ ಮೂವರು ಮಕ್ಕಳಿಗೂ ದೃಷ್ಟಿ ದೋಷ ಆವರಿಸಿದೆ. ಇವರಿಗೆ ಚಿಕಿತ್ಸೆ ಕೊಡಿಸುವ ಶಕ್ತಿಯೂ ಇಲ್ಲ. ಮೊತ್ತೊಂದು ಕಡೆ ಕುಟುಂಬದ ಪೋಷಣೆ ಮಾಡಲು ದಾರಿ ಇಲ್ಲದೆ ಇಡೀ ಕುಟುಂಬ ಶೋಕ ಸಾಗರದಲ್ಲಿದೆ. ಇದನ್ನು ಗಮನಿಸಿದ ಚಿಕ್ಕಬಳ್ಳಾಪುರದ ಕೆಲವು ಸಮಾಜ ಸೇವಕರು ಸೇರಿ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ್ದಾರೆ.

ಇದನ್ನೂ ಓದಿ:ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಬಳಿಕ ನಿರ್ಲಕ್ಷ್ಯ: ಬೆಡ್​ ಸಿಗದೆ ಆಸ್ಪತ್ರೆ ಮೆಟ್ಟಿಲಿನ ಮೇಲೆ ಮಲಗಿದ ಮಹಿಳೆಯರ ಪರದಾಟ

ಕುಟುಂಬ ನಿರ್ವಹಣೆಗಾಗಿ ಪರದಾಟ

ಗಂಡನ ದೃಷ್ಟಿ ದೋಷದ ನಡುವೆ ಮಕ್ಕಳ ಭವಿಷ್ಯದ ಕನಸು ಕಂಡಿದ್ದ ಆ ಮಹಿಳೆಗೆ ಇದೀಗ ಬರ ಸಿಡಿಲು ಬಡಿದಂತಾಗಿದೆ. ಈ ಬಡ ಕುಟುಂಬಕ್ಕೆ ಕುರುಡುತನ ಶಾಪವಾಗಿ ಕಾಡುತ್ತಿದೆ. ಇದರಿಂದ ಕುಟುಂಬ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಈ ಕುಟುಂಬಕ್ಕೆ ಇದೀಗ ಸಾರ್ವಜನಿಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸಹಾಯ ಹಸ್ತ ಚಾಚಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:45 pm, Thu, 30 November 23