ಅಂತರ್ಜಾತಿ ವಿವಾಹ? ಕಲ್ಲು ಕಟ್ಟಿ, ಕೆರೆಗೆ ಎಸೆದು ಮಗಳನ್ನು ಕೊಂದವರು ಅರೆಸ್ಟ್

ಚಿಕ್ಕಬಳ್ಳಾಪುರ: ಹೆತ್ತ ಮಗಳ ಪ್ರಾಣಕ್ಕಿಂತ ತಮ್ಮ ಮಾನವೇ ಮುಖ್ಯ ಎಂದು ಆಕೆಯನ್ನ ಬರ್ಬರವಾಗಿ ಕೊಲೆ ಮಾಡಿದ್ದ ಕುಟುಂಬಸ್ಥರನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರು ನೆರೆಯ ಆಂಧ್ರದ ಅನಂತಪುರ ಜಿಲ್ಲೆಯ ಹಿಂದೂಪುರ ತಾಲೂಕಿನ ತುಮಕುಂಟೆ ಗ್ರಾಮದವರು ಎಂದು ತಿಳಿದುಬಂದಿದೆ. ಬೇರೆ ಜಾತಿಯ ಹುಡುಗನನ್ನ ಪ್ರೀತಿಸಿ ಆತನನ್ನೇ ವರಿಸುವ ಹಠವೇ 18 ವರ್ಷದ ಸಂಧ್ಯಾಳಿಗೆ ಮುಳುವಾಗಿಬಿಟ್ಟಿತು. ಅವಳ ಹಠವನ್ನು ಸಹಿಸದ ಆಕೆಯ ತಾಯಿ ರಾಮಾಂಜಿನಮ್ಮ, ಅಣ್ಣಾ ಅಶೋಕ್, ಅಕ್ಕ ನೇತ್ರಾವತಿ ಹಾಗೂ ಮಾವ ಬಾಲಕೃಷ್ಣ ಸಂಧ್ಯಾಳನ್ನ ಇದೇ ತಿಂಗಳ […]

ಅಂತರ್ಜಾತಿ ವಿವಾಹ? ಕಲ್ಲು ಕಟ್ಟಿ, ಕೆರೆಗೆ ಎಸೆದು ಮಗಳನ್ನು ಕೊಂದವರು ಅರೆಸ್ಟ್
Edited By:

Updated on: Jun 29, 2020 | 5:30 PM

ಚಿಕ್ಕಬಳ್ಳಾಪುರ: ಹೆತ್ತ ಮಗಳ ಪ್ರಾಣಕ್ಕಿಂತ ತಮ್ಮ ಮಾನವೇ ಮುಖ್ಯ ಎಂದು ಆಕೆಯನ್ನ ಬರ್ಬರವಾಗಿ ಕೊಲೆ ಮಾಡಿದ್ದ ಕುಟುಂಬಸ್ಥರನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರು ನೆರೆಯ ಆಂಧ್ರದ ಅನಂತಪುರ ಜಿಲ್ಲೆಯ ಹಿಂದೂಪುರ ತಾಲೂಕಿನ ತುಮಕುಂಟೆ ಗ್ರಾಮದವರು ಎಂದು ತಿಳಿದುಬಂದಿದೆ.

ಬೇರೆ ಜಾತಿಯ ಹುಡುಗನನ್ನ ಪ್ರೀತಿಸಿ ಆತನನ್ನೇ ವರಿಸುವ ಹಠವೇ 18 ವರ್ಷದ ಸಂಧ್ಯಾಳಿಗೆ ಮುಳುವಾಗಿಬಿಟ್ಟಿತು. ಅವಳ ಹಠವನ್ನು ಸಹಿಸದ ಆಕೆಯ ತಾಯಿ ರಾಮಾಂಜಿನಮ್ಮ, ಅಣ್ಣಾ ಅಶೋಕ್, ಅಕ್ಕ ನೇತ್ರಾವತಿ ಹಾಗೂ ಮಾವ ಬಾಲಕೃಷ್ಣ ಸಂಧ್ಯಾಳನ್ನ ಇದೇ ತಿಂಗಳ 24ರಂದು ಕತ್ತು ಹಿಸುಕಿ ಕೊಲೆ ಮಾಡಿದ್ದರು. ತದ ನಂತರ ಆಕೆಯ ಶವವನ್ನು ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹುಲಿಕುಂಟೆಯ ಕೆರೆಯಲ್ಲಿ ಬಿಸಾಡಿದ್ದರು.

ಇದನ್ನೂ ಓದಿ: ಛೇ! ಇದೆಂಥಾ ಕ್ರೌರ್ಯ.. ಮಹಿಳೆಯನ್ನ ಕೊಂದು ಕಲ್ಲು ಕಟ್ಟಿ ಕೆರೆಗೆ ಎಸೆದ ದುಷ್ಕರ್ಮಿಗಳು

ಜಿಗುಪ್ಸೆಯ ಸಂಗತಿಯೆಂದರೆ ಆಕೆಯ ಶವ ಯಾರಿಗೂ ಸಿಗಬಾರದೆಂದು ಕಾಲಿಗೆ ಕಲ್ಲು ಕಟ್ಟಿ ಕೆರೆಯಲ್ಲಿ ದೂಡಿದ್ದರು. ಇದೇ ತಿಂಗಳ 26ರಂದು ಶವ ಪತ್ತೆಯಾದ ಹಿನ್ನೆಲೆಯಲ್ಲಿ ಗೌರಿಬಿದನೂರು ಪೊಲೀಸರು ಪ್ರಕರಣವನ್ನ ಕೈಗೆತ್ತಿಕೊಂಡು ಸಂಧ್ಯಾಳ ಕುಟುಂಬಸ್ಥರನ್ನ ಬಂಧಿಸಿದ್ದಾರೆ.