ಕೊರೊನಾ ಸಮಯದಲ್ಲಿ ಅಧಿಕಾರಿಗಳ ಸಮಯಪ್ರಜ್ಞೆಯಿಂದ ತಪ್ಪಿತು ಬಾಲ್ಯ ವಿವಾಹ
ದಾವಣಗೆರೆ: ಅಧಿಕಾರಿಗಳ ಸಮಯಪ್ರಜ್ಞೆಯಿಂದ ಹೊನ್ನಾಳಿ ತಾಲೂಕಿನ ರಾಂಪುರದಲ್ಲಿ ನಡೆಯಬೇಕಿದ್ದ ಬಾಲ್ಯ ವಿವಾಹ ತಪ್ಪಿದೆ. ಇಂದು ರಾಂಪುರದ ಯುವಕನ ಜೊತೆ ಶಿವಮೊಗ್ಗ ಜಿಲ್ಲೆಯ ಅಪ್ರಾಪ್ತ ಬಾಲಕಿಯ ಮದುವೆ ನಡೆಯಬೇಕಿತ್ತು. ಬಾಲ್ಯ ವಿವಾಹದ ಬಗ್ಗೆ ಖಚಿತ ಮಾಹಿತಿ ಪಡೆದು ಹೊನ್ನಾಳಿ ಸಿಡಿಪಿಒ ನೇತೃತ್ವದ ಬಾಲ್ಯ ವಿವಾಹ ತಂಡ ಹಾಗೂ ಶಿಕ್ಷಾರ್ಹ ಅಪರಾಧದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಾಲ್ಯ ವಿವಾಹದ ಬಗ್ಗೆ ಪೋಷಕರಿಗೆ ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟಿದ್ದಾರೆ. ಪೋಷಕರಿಂದ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡ ಅಧಿಕಾರಿಗಳು ಮದುವೆಯನ್ನು ನಿಲ್ಲಿಸಿದ್ದಾರೆ.
ದಾವಣಗೆರೆ: ಅಧಿಕಾರಿಗಳ ಸಮಯಪ್ರಜ್ಞೆಯಿಂದ ಹೊನ್ನಾಳಿ ತಾಲೂಕಿನ ರಾಂಪುರದಲ್ಲಿ ನಡೆಯಬೇಕಿದ್ದ ಬಾಲ್ಯ ವಿವಾಹ ತಪ್ಪಿದೆ. ಇಂದು ರಾಂಪುರದ ಯುವಕನ ಜೊತೆ ಶಿವಮೊಗ್ಗ ಜಿಲ್ಲೆಯ ಅಪ್ರಾಪ್ತ ಬಾಲಕಿಯ ಮದುವೆ ನಡೆಯಬೇಕಿತ್ತು.
ಬಾಲ್ಯ ವಿವಾಹದ ಬಗ್ಗೆ ಖಚಿತ ಮಾಹಿತಿ ಪಡೆದು ಹೊನ್ನಾಳಿ ಸಿಡಿಪಿಒ ನೇತೃತ್ವದ ಬಾಲ್ಯ ವಿವಾಹ ತಂಡ ಹಾಗೂ ಶಿಕ್ಷಾರ್ಹ ಅಪರಾಧದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಾಲ್ಯ ವಿವಾಹದ ಬಗ್ಗೆ ಪೋಷಕರಿಗೆ ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟಿದ್ದಾರೆ. ಪೋಷಕರಿಂದ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡ ಅಧಿಕಾರಿಗಳು ಮದುವೆಯನ್ನು ನಿಲ್ಲಿಸಿದ್ದಾರೆ.