
ಬೆಂಗಳೂರು: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ, ಡ್ರಗ್ ಮಾಫಿಯಾದ ತನಿಖೆಯನ್ನ ಸಿಸಿಬಿ ಪೊಲೀಸರು ಚುರುಕುಗೊಳಿಸಿದ್ದಾರೆ. ನಶೆ ಜಾಲದಲ್ಲಿ ಸಿಲುಕಿರೋ ನಟಿಮಣಿಯರು ತಿಂಗಳಾದ್ರೂ ಬೇಲ್ ಸಿಗದೇ ಕಂಬಿ ಹಿಂದೆ ಪರದಾಡ್ತಿದ್ದಾರೆ. ಈ ಮಧ್ಯೆ ಬೇಲ್ಗೆ ಒತ್ತಾಯಿಸಿ ತನಿಖಾಧಿಕಾರಿಗಳಿಗೆ ಅನಾಮಧೇಯ ಬೆದರಿಕೆ ಪತ್ರ ಬಂದಿದೆ.
ಉಗ್ರ ಸಂಘಟನೆ ಹೆಸರಿನಲ್ಲಿ ನ್ಯಾಯಾಧೀಶರಿಗೆ ಪತ್ರ..!
ಬೆಂಗಳೂರಿನಲ್ಲಿ ಕೊರೊನಾ ಅಬ್ಬರಕ್ಕಿಂತಾ ಕಳೆದ ಎರಡ್ಮೂರು ತಿಂಗಳಿಂದ ಹೆಚ್ಚು ಸದ್ದು ಮಾಡ್ತಿರೋದು ದೇವರಜೀವನಹಳ್ಳಿ, ಕಾಡುಗೊಂಡನಹಳ್ಳಿಯಲ್ಲಿ ಪುಂಡರು ಪೊಲೀಸ್ ಸ್ಟೇಷನ್ಗಳ ಮೇಲೆ ನಡೆಸಿದ ದಾಳಿ ಮತ್ತು ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ಕೇಸ್. ಎರಡೂ ಪ್ರಕರಣಗಳನ್ನ ಸಿಸಿಬಿ ಪೊಲೀಸರು ಗಂಭೀರವಾಗಿ ತೆಗೆದುಕೊಂಡು ತುಂಬಾ ಸೀರಿಯಸ್ ಆಗಿ ವಿಚಾರಣೆ ನಡೆಸ್ತಿದ್ದಾರೆ. ಇದರ ನಡುವೆ ನಿನ್ನೆ ಬಂದ ಅನಾಮಿಕ ಬಾಂಬ್ ಬೆದರಿಕೆ ಪತ್ರ, ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಜೊತೆಗೆ ಬಾಂಬ್ ಇಟ್ಟಿದ್ದೇವೆ ಅಂತಾ ಪತ್ರದಲ್ಲಿ ಹೇಳಿದ್ದ ಸಿಟಿ ಸಿವಿಲ್ ಕೋರ್ಟ್ನಲ್ಲಿ ಸಿಕ್ಕ ವೈರ್ ಮತ್ತು ಡಿಟೋನೇಟರ್ ಭಾರಿ ಆತಂಕಕ್ಕೆ ಕಾರಣವಾಗಿದೆ.
ಬಾಂಬ್ ಬೆದರಿಕೆ ಪತ್ರ!
ಶ್ರೀ…
ಸೀನಪ್ಪ, ಜಡ್ಜ್
33ನೇ ಸಿಟಿ ಸಿವಿಲ್ ಸೆಷನ್ಸ್ ಕೋರ್ಟ್
ಬೆಂಗಳೂರು.
ನ್ಯಾಯಾಧೀಶರೇ, ನೀವುಗಳು ಗಮನವಿಟ್ಟು ಕೇಳಿ..
1. ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಹಾಗೂ ಡ್ರಗ್ಸ್ ಕೇಸಿನಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳಿಗೆ ಜಾಮೀನು ಕೊಡಬೇಕು. ಕೇಸ್ನಲ್ಲಿರುವ ಎಲ್ಲರನ್ನೂ ವಜಾ ಮಾಡಬೇಕು.
2. ಕೊಲೆ, ಸುಲಿಗೆ, ಡಕಾಯಿತಿ ಕೇಸ್ಗಳಿಗೆ ಜಾಮೀನು ಕೊಡಬೇಕು ಮತ್ತು ಕೇಸ್ಗಳನ್ನ ವಜಾ ಮಾಡಬೇಕು. ನಿಮಗೆ ಹಣ ಬೇಕೆ..? ನಿಮಗೆ ಏನು ಬೇಕು ಕೇಳಿ… ಇದರ ವಿರುದ್ಧ ನೀವು ಹೋದರೆ ನಿಮ್ಮ ಕಾರ್ಗೆ ಬಾಂಬ್ ಇಟ್ಟು ನಿಮ್ಮನ್ನ ಬ್ಲಾಸ್ಟ್ ಮಾಡುತ್ತೇವೆ.
3. ನಗರ ಕಮಿಷನರ್ ಕಮಲ್ ಪಂತ್ಗೂ ಈ ಪತ್ರ ಕಳಿಸಿದ್ದೇವೆ.
4. ಸಿಸಿಬಿ ಆಯುಕ್ತರು, ಕೇಂದ್ರ ಅಪರಾಧ ವಿಭಾಗ, ಸಂದೀಪ್ ಪಾಟೀಲ್, ಜಂಟಿ ಆಯುಕ್ತರು ಬೆಂಗಳೂರು, ಇವರಿಗೂ ಸಹ ಕಳಿಸಿರುತ್ತೇವೆ.
ಮೊಹಮ್ಮದ್ ಜೈಷ್ ಉಗ್ರ ಸಂಘಟನೆ ಪಾಕಿಸ್ತಾನದ ಎಚ್ಚರಿಕೆ.
ಈ ರೀತಿ ಪತ್ರ ಬರೆಯಲಾಗಿದೆ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಘಟನೆಗೂ ಮೊಹಮ್ಮದ್ ಜೈಷ್ ಸಂಘಟನೆಗೂ ಸಂಬಂಧ ಇರಬಹುದು ಅಂದುಕೊಂಡ್ರೂ.. ಸ್ಯಾಂಡಲ್ವುಡ್ ಡ್ರಗ್ಸ್ ಜಾಲಕ್ಕೂ.. ನಟಿಯರಾದ ಸಂಜನಾ, ರಾಗಿಣಿಗೂ ಇವರಿಗೆ ಯಾವ ಸಂಬಂಧವಿದೆ? ಕೊಲೆ, ಸುಲಿಗೆ, ಡಕಾಯಿತಿ ಕೇಸ್ಗಳ ಆರೋಪಿಗಳಿಗೂ ಜಾಮೀನು ನೀಡಿ ಅಂತಾ ಒತ್ತಾಯಿಸೋಕೆ ಇವಱರು ಅನ್ನೋ ಪ್ರಶ್ನೆ ಈಗ ಉದ್ಭವವಾಗಿದೆ. ಕೇವಲ ಜಡ್ಜ್ ಸೀನಪ್ಪರಿಗೆ ಮಾತ್ರವೇ ಅಲ್ದೆ, ಪೊಲೀಸ್ ಕಮಿಷನರ್ ಕಮಲ್ ಪಂತ್, ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ಇವರು ಪತ್ರ ಕಳಿಸಿದ್ದಾರೆ ಅಂದ್ರೆ, ಇದರ ಹಿಂದೆ ಷಡ್ಯಂತ್ರವಿದ್ಯಾ ಅಥವಾ ಯಾರೋ ಮಾನಸಿಕ ಅಸ್ವಸ್ಥ ಈ ಪತ್ರ ಬರೆದಿದ್ದಾನಾ ಅನ್ನೋ ಅನುಮಾನ ಈಗ ಶುರುವಾಗಿದೆ.
ಅನಾಮಿಕ ಬೆದರಿಕೆ ಪತ್ರದಲ್ಲಿರುವ ಅಂಶಗಳನ್ನ ನೋಡುತ್ತಿದ್ರೆ, ಇದರ ಹಿಂದೆ ಷಡ್ಯಂತ್ರ ಇರೋ ಸಾಧ್ಯತೆ ಬಹಳ ಕಡಿಮೆ ಇದೆ. ಆದ್ರೆ, ಕೋರ್ಟ್ನಲ್ಲಿ ಸಿಕ್ಕಿರೋ ವೈರ್ ಮತ್ತು ಡಿಟೋನೇಟರ್ ಬೇರೆಯದ್ದೇ ಅನುಮಾನಗಳನ್ನ ಹುಟ್ಟು ಹಾಕ್ತಿದೆ. ಹೀಗಾಗಿ ಪೊಲೀಸರು ಈ ಪತ್ರ ಮತ್ತು ಕೋರ್ಟ್ನಲ್ಲಿ ಸಿಕ್ಕಿರೋ ವಸ್ತುಗಳ ಬಗ್ಗೆ ಡಿಟೇಲ್ ಆಗಿ ತನಿಖೆ ನಡೆಸಿದ್ರೆ, ಇದರ ಹಿಂದಿನ ಸತ್ಯ ಹೊರಬರಲಿದೆ ಅನ್ನೋದು ಸುಳ್ಳಲ್ಲ.