ಬೆಂಗಳೂರು ಗ್ರಾಮಾಂತರ: ಶಿರಾ ಮತ್ತು ರಾಜರಾಜೇಶ್ವರಿನಗರದ ಉಪಚುನಾವಣೆ ಘೋಷಣೆ ಆಗುತ್ತಿದ್ದ ಬೆನ್ನಲ್ಲೇ ರಾಜ್ಯದಲ್ಲಿ ರೆಸಾರ್ಟ್ ರಾಜಕೀಯ ಪರ್ವ ಮತ್ತೆ ಶುರುವಾಗಲಿದೆ ಎಂದು ಹಲವರು ಮಾತನಾಡುತ್ತಿದ್ದಾರೆ.
ಕೋಡಗುರ್ಕಿಯ ಬಳಿಯಿರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್‌ಗೆ ಸಿಎಂ ಭೇಟಿ ನೀಡಿದ್ದು ಈಗಾಗಲೇ ರೆಸಾರ್ಟ್ನಲ್ಲಿ 7 ವಿಲ್ಲಾಗಳು ಬುಕ್ಕಿಂಗ್ ಆಗಿದೆ ಎಂದು ಹೇಳಲಾಗಿದೆ. ಹಾಗಾಗಿ, ಸಿಎಂ ಭೇಟಿ ತೀವ್ರ ಕುತೂಹಲ ಕೆರಳಿಸಿದೆ. ರಾಜ್ಯದಲ್ಲಿ ಮತ್ತೆ ರೆಸಾರ್ಟ್ ರಾಜಕೀಯ ಶುರುವಾಗುತ್ತಾ ಅಥವಾ ಉಪ ಚುನಾವಣೆ ಹಿನ್ನೆಲೆಯಲ್ಲಿ ವಿಶ್ರಾಂತಿಗೆಂದು ಸಿಎಂ ರೆಸಾರ್ಟ್‌ಗೆ ಆಗಮಸಿದ್ರಾ ಅನ್ನೋ ಶಂಕೆ ವ್ಯಕ್ತವಾಗಿದೆ.