High Command turns troubleshooter: 25 ಕಾಂಗ್ರೆಸ್ ಶಾಸಕರನ್ನು ದೆಹಲಿಗೆ ಕರೆಸುವ ಬದಲು ಖರ್ಗೆ ಮತ್ತು ರಾಹುಲ್ ಬೆಂಗಳೂರಿಗೆ ಬರಲಾಗದೆ?

|

Updated on: Jul 29, 2023 | 12:02 PM

ಹಿರಿಯ ನಾಯಕರಾದ ಬಿಎಲ್ ಶಂಕರ್, ಬಿಕೆ ಹರಿಪ್ರಸಾದ್, ಆರ್ ವಿ ದೇಶಪಾಂಡೆ ಮತ್ತು ಬಸವರಾಜ ರಾಯರೆಡ್ಡಿ ಸೇರಿದಂತೆ ಒಟ್ಟು 25 ಶಾಸಕರು ಮತ್ತು ಕಾಂಗ್ರೆಸ್ ಧುರೀಣರನ್ನು ಹೈಕಮಾಂಡ್ ಆಗಸ್ಟ್ 2 ರಂದು ದೆಹಲಿಗೆ ಬರುವಂತೆ ಹೇಳಿದೆ.

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 5 ವರ್ಷಗಳ ನಂತರ ಅಧಿಕಾರಕ್ಕೆ ಬಂದಿದೆ ಆದರೆ ಚುಕ್ಕಾಣಿ ಹಿಡಿದ ಎರಡೇ ತಿಂಗಳಲ್ಲಿ ಪಕ್ಷದ ಆಂತರಿಕ ವಲಯದಲ್ಲಿ ಅಸಮಾಧಾನ, ಅಪಸ್ವರಗಳು ತಲೆಯೆತ್ತಿವೆ. ಜುಲೈ 27 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ನಡೆದ ಶಾಸಕಾಂಗ ಪಕ್ಷ ಸಭೆಯಲ್ಲಿ ಈ ವಿಷಯ ಬಹಿರಂಗಗೊಂಡಿದೆ. ಅಸಮಾಧಾನಗೊಂಡಿರುವ ನಾಯಕರ ಪ್ರಮುಖ ದೂರೆಂದರೆ, ಕೆಲ ಸಚಿವರು ತಮ್ಮನ್ನು ಕಡೆಗಣಿಸುತ್ತಿರುವುದು. ಇದೇ ಹಿನ್ನೆಲೆಯಲ್ಲಿ ಹೈಕಮಾಂಡ್ ಮಧ್ಯಪ್ರವೇಶಿಸುವ ಪರಿಸ್ಥಿತಿ ತಲೆದೋರಿದೆ. ಹಿರಿಯ ನಾಯಕರಾದ ಬಿಎಲ್ ಶಂಕರ್ (BL Shankar), ಬಿಕೆ ಹರಿಪ್ರಸಾದ್ (BK Hariprasad), ಆರ್ ವಿ ದೇಶಪಾಂಡೆ (RV Deshpande) ಮತ್ತು ಬಸವರಾಜ ರಾಯರೆಡ್ಡಿ (Basavaraj Rayareddy) ಸೇರಿದಂತೆ ಒಟ್ಟು 25 ಶಾಸಕರು ಮತ್ತು ಕಾಂಗ್ರೆಸ್ ಧುರೀಣರನ್ನು ಹೈಕಮಾಂಡ್ ಆಗಸ್ಟ್ 2 ರಂದು ದೆಹಲಿಗೆ ಬರುವಂತೆ ಹೇಳಿದೆ. 25 ಜನರನ್ನು ದೆಹಲಿಗೆ ಕರೆಸುವ ಬದಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಬೆಂಗಳೂರಿಗೆ ಬಂದಿದ್ದರೆ ಚೆನ್ನಾಗಿರುತ್ತಿರುಲಿಲ್ಲವೇ ಅಂತ ಕನ್ನಡಿಗರು ಕೇಳುತ್ತಿದ್ದಾರೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ