ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ರಾಜೀನಾಮೆ ವಿಚಾರ ಎತ್ತಿದ್ರಾ ಶಾಸಕರು? ಇಲ್ಲಿದೆ ಸಭೆಯ ಇನ್​ಸೈಡ್​ ಮಾಹಿತಿ

ಶಾಸಕರ ಆಗ್ರಹದ ಮೇರೆಗೆ ನಿನ್ನೆ(ಜುಲೈ 27) ಕಾಂಗ್ರೆಸ್ ಸಭೆ ನಡೆಸಿದ್ದು, ಸಭೆಯಲ್ಲಿ ಶಾಸಕರು ರಾಜೀನಾಮೆ ವಿಚಾರ ಎತ್ತಿದ್ದಾರೆ ಎಂದು ತಿಳಿದುಬಂದಿದೆ. ಹಾಗಾದ್ರೆ, ಸಭೆಯಲ್ಲಿ ಯಾರು ಏನೆಲ್ಲ ಮಾತನಾಡಿದ್ದಾರೆ ಎನ್ನುವ ಇನ್​ಸೈಡ್ ಮಾಹಿತಿ ಇಲ್ಲಿದೆ.

ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ರಾಜೀನಾಮೆ ವಿಚಾರ ಎತ್ತಿದ್ರಾ ಶಾಸಕರು? ಇಲ್ಲಿದೆ ಸಭೆಯ ಇನ್​ಸೈಡ್​ ಮಾಹಿತಿ
ಕಾಂಗ್ರೆಸ್ ಶಾಸಕಾಂಗ ಸಭೆ
Follow us
Pramod Shastri G
| Updated By: ರಮೇಶ್ ಬಿ. ಜವಳಗೇರಾ

Updated on:Jul 28, 2023 | 10:46 AM

ಬೆಂಗಳೂರು, (ಜುಲೈ.28): ರಾಜ್ಯ ಕಾಂಗ್ರೆಸ್ (Congress) ಪಾಳಯದಲ್ಲಿ ಶಾಸಕ ಬಿ.ಆರ್.ಪಾಟೀಲ್ (BR Patil)  ಪತ್ರ ಬಾಂಬ್ ಕಂಪನ ಎಬ್ಬಿಸಿತ್ತು. ಸಚಿವರ ವಿರುದ್ಧವೇ ಆರೋಪ ಮಾಡಿ ಸಿಎಂಗೆ ಪತ್ರ ಬರೆಯಲಾಗಿತ್ತು. ಹಲವು ಶಾಸಕರ ಸಹಿಯುಳ್ಳ ಈ ಪತ್ರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಧಿಕಾರಿಗಳ ವರ್ಗಾವಣೆ ಮಾಡುತ್ತಿದ್ದಾರೆ. ಶಾಸಕರ ಮಾತಿಗೆ ಯಾವುದೇ ಬೆಲೆ ನೀಡುತ್ತಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯ (Siddaramaiah)) ಶಾಸಕಾಂಗ ಸಭೆ ಕರೆಯಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಈ ಲೆಟರ್‌ ಬಾಂಬ್‌ ಬೆನ್ನಲ್ಲೇ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿದ್ದು, ಸಭೆಯಲ್ಲಿ ಕೆಲವರು ಶಾಸಕರು ಅಸಮಾಧಾನ ತೋಡಿಕೊಂಡಿದ್ದಾರೆ. ಇನ್ನು ಬಹಿರಂಗವಾಗಿ ಪತ್ರ ಬರೆದಿದ್ದಕ್ಕೆ ಸಿದ್ದರಾಮಯ್ಯ ಫುಲ್ ಗರಂ ಆಗಿದ್ದಾರೆ ಎನ್ನಲಾಗಿದೆ. ಅಲ್ಲದೇ ಸಭೆಯಲ್ಲಿ ಶಾಸಕರು ರಾಜೀನಾಮೆ ವಿಚಾರ ಎತ್ತಿದ್ದಾರೆ ಎಂದು ತಿಳಿದುಬಂದಿದೆ. ಹಾಗಾದ್ರೆ, ಸಭೆಯಲ್ಲಿ ಯಾರು ಏನೆಲ್ಲ ಮಾತನಾಡಿದ್ದಾರೆ ಎನ್ನುವ ಇನ್​ಸೈಡ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Congress CLP Meeting: ಸುಳ್ಳುಗಳಿಗೆ ದಾಳವಾಗಬೇಡಿ; ಶಾಸಕಾಂಗ ಸಭೆಯಲ್ಲಿ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ಶಾಸಕ ಬಿ.ಆರ್.ಪಾಟೀಲ್​ಗೆ ಸಿಎಂ ಸಿದ್ದರಾಮಯ್ಯ ಕಿವಿಮಾತು

ಬಿ.ಆರ್.ಪಾಟೀಲ್ ಲೆಟರ್‌ ಹೆಡ್‌ನಲ್ಲಿ ಪತ್ರ ವೈರಲ್ ಆಗಿತ್ತು. ಹೀಗಾಗಿ ಸಿಎಂ ಸಿದ್ದರಾಮಯ್ಯ ಬಿ.ಆರ್.ಪಾಟೀಲ್ ನಡೆಗೆ ಗರಂ ಆದ್ರೂ ಎನ್ನಲಾಗಿದೆ. ಪತ್ರ ಬರೆಯೋ ಬದಲು ನೇರವಾಗಿ ಬಂದು ಮಾತನಾಡಿದ್ರೆ ಕೆಲ್ಸ ಆಗ್ತಿತ್ತು ಅಂತೇಳಿದ್ರು. ಈ ವೇಳೆ ಸ್ವಲ್ಪ ಕೋಪದಲ್ಲಿ ವೇದಿಕೆ ಮುಂದೆ ಬಂದು ಪ್ರತಿಕ್ರಿಯಿಸಿದ ಬಿ.ಆರ್.ಪಾಟೀಲ್, ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಡಿ.. ಸದುದ್ದೇಶದಿಂದ ಪತ್ರ ಬರೆದಿದ್ದೇನೆ, ಸಚಿವರು ನಮಗೆ ಗೌರವ ಕೊಡಬೇಕು ಅಂತೇಳಿದ್ರು. ಹೀಗಾದರೆ ಸರಿಯಲ್ಲ, ಅದಕ್ಕೆ ಪತ್ರ ಬರೆದಿದ್ದೇನೆ ಅಂತಂದ್ರು.. ಈ ವೇಳೆ ಶರಣಪ್ರಕಾಶ್ ಪಾಟೀಲ್ ಏನಿದೆಯೋ ಅದನ್ನಷ್ಟೇ ಹೇಳಿ ಎಂದು ಕುಳ್ಳಿರಿಸಿದ್ರು ಎನ್ನಲಾಗಿದೆ.

ರಾಜೀನಾಮೆ ವಿಚಾರ ಎತ್ತಿದ ಶಾಸಕರು

ಬಹಿರಂಗವಾಗಿ ಪತ್ರ ಬರೆದಿದ್ದಕ್ಕೆ ಸಿದ್ದರಾಮಯ್ಯ ತೀವ್ರ ಅಸಮಾಧಾನಗೊಂಡು, ನನಗೆ ವೈಯಕ್ತಿಕವಾಗಿ ಬಂದು ಭೇಟಿ ಮಾಡಿ ಸಮಸ್ಯೆ ಬಗೆ ಹರಿಸಿಕೊಳ್ಳಬಹುದಿತ್ತು. ಪತ್ರ ಬರೆಯುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ಸಿಎಂ ಮಾತಿನಿಂದ ಬೇಸರಗೊಂಡ ಬಿ ಆರ್ ಪಾಟೀಲ್, ಆಯ್ತು ಬಿಡಿ ನಾನು ರಾಜೀನಾಮೆ ಕೊಟ್ಟು ಬಿಡಡುತ್ತೇನೆ. ನನಗೆ ಏನು ಹೇಳುವುದಿಲ್ಲ. ನನ್ನನ್ನ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಡಿ. ನನ್ನ ಮಾತಿಗೆ ನಾನು ಬದ್ದ. ನಾನು ಸಂಪೂರ್ಣವಾಗಿ ಪತ್ರವನ್ನ ನೋಡಿ ಅರ್ಥೈಸಿಕೊಂಡು ಸಹಿ ಹಾಕಿದ್ದೇನೆ ಎಂದಿದ್ದಾರೆ. ಇನ್ನು ಬಿ.ಆರ್.ಪಾಟೀಲ್‌ಗೆ ಸಾಥ್ ನೀಡಿದ ಇಂಡಿ ಶಾಸಕ‌ ಯಶವಂತ ರಾಯಗೌಡ, ಬಿ.ಆರ್. ಪಾಟೀಲ್ ಅವರು ಹೇಳಿರುವುದರಲ್ಲಿ ಸತ್ಯ ಇದೆ. ಸಚಿವರ ಕಚೇರಿ ಮೊದಲು ಸರಿ ಇರಲಿ. ಮೊದಲು ಗೌರವ ಕೊಡುವುದನ್ನ ಕಲಿಯಲಿ. ನಾವ್ಯಾರು ಸುಮ್ಮನೆ ಶಾಸಕರಾಗಿಲ್ಲ. ಸರಿಯಾಗಿ ನೋಡಿಯೇ ಪತ್ರಕ್ಕೆ ನಾನೂ ಸಹಿ ಹಾಕಿದ್ದೇನೆ. ನಮಗೆ ಸ್ವಾಭಿಮಾನ ಗೌರವ ಇಲ್ಲವಾದಲ್ಲಿ ಶಾಸಕ ಸ್ಥಾನವೇ ಬೇಡ. ನಾವು ರಾಜೀನಾಮೆ ಕೊಡಲು ಸಿದ್ಧ ಎಂದು ಅತೃಪ್ತಿ ಹೊರಹಾಕಿದ್ದಾರೆ ಎನ್ನಲಾಗಿದೆ.

ಶಾಸಕ ಬಸವರಾಜ ರಾಯರೆಡ್ಡಿಗೆ ಸಿಎಂ ಹಿಗ್ಗಾಮುಗ್ಗಾ ತರಾಟೆ

ಅಸಮಾಧಾನಿತ ಶಾಸಕರು ಬಸವರಾಜ ರಾಯರೆಡ್ಡಿಯನ್ನು ತಮ್ಮ ತಂಡದಿಂದ ಮಾತನಾಡಲು ಮುಂದೆ ಬಿಟ್ಟಿದ್ರು. ಆದ್ರೆ ಸಿಎಂ ಸಿದ್ದರಾಮಯ್ಯ ಬಸವರಾಜ ರಾಯರೆಡ್ಡಿ ಫುಲ್ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.. ಸಿಎಂ ಕೋಪಕ್ಕೆ ಥಂಡಾ ಹೊಡೆದ ರಾಯರೆಡ್ಡಿ, ಸರ್ ಲೆಟರ್ ಬರೆದಿದ್ದು ನಾನಲ್ಲ. ಅವರು ಬರೆದಿರುವುದಕ್ಕೆ ನಾನು ಸಹಿ ಹಾಕಿರುವುದು ಅಷ್ಟೇ ಸರ್. ನಿಮ್ ಗಮನ ಸೆಳೆಯಲು ಈ ರೀತಿ ಮಾಡಿದ್ದು ಅಂತೇಳಿದ್ರಂತೆ. ಗಮನ ಸೆಳೆಯುವುದಿದ್ದರೆ ನೇರವಾಗಿ ಬಂದು ಮಾತನಾಡಬೇಕಿತ್ತು. ಇದೆಲ್ಲಾ ಯಾಕೆ ಮಾಡುತ್ತೀರಿ ಎಂದು ಮತ್ತೆ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡ್ರು ಎನ್ನಲಾಗಿದೆ.

ಸಭೆಯಿಂದ ಹೊರನಡೆದ ಅಸಮಾಧಾನಿತ ಶಾಸಕರು?

ಯಾವಾಗ ಬಸವರಾಜ ರಾಯರೆಡ್ಡಿಗೆ ಸಿಎಂ ಕ್ಲಾಸ್ ತೆಗೆದುಕೊಂಡರೋ ಅಸಮಾಧಾನಿಕ ಶಾಸಕರ ಟೀಂ ರಾಯರೆಡ್ಡಿ ತಮ್ಮ ಬಗ್ಗೆ ಸರಿಯಾಗಿ ಸಮರ್ಥನೆ ಮಾಡಿಕೊಳ್ಳಲಿಲ್ಲ ಎಂದು ಸಿಟ್ಟಾದರು ಎಂದು ತಿಳಿದಬಂದಿದೆ. ಇವರನ್ನ ನಂಬಿಕೊಂಡರೆ ಏನು ಮಾಡುವುದಕ್ಕೆ ಆಗುವುದಿಲ್ಲ ಎಂದು ಗೊಣಗುತ್ತಲೇ ಸಭೆಯಿಂದ ಒಬ್ಬೊಬ್ಬರಾಗಿ ಹೊರನಡೆದ್ರು. ಇನ್ನು ಇದಕ್ಕೂ ಮುನ್ನ ಸಿಎಂ ಮುಂದೆ ತಮ್ಮ ಸಮಸ್ಯೆ ಹೇಳಿಕೊಂಡ ಬಿ.ಆರ್.ಪಾಟೀಲ್, ನನ್ನ ಹಿರಿತನಕ್ಕೆ ಸಚಿವರು ಬೆಲೆ ಕೊಡುತ್ತಿಲ್ಲ. ಅಧಿಕಾರಿಗಳಿಂದ ಕೆಲಸ ಮಾಡಿಸೋಕೆ ಆಗುತ್ತಿಲ್ಲ ಎಂದು ಬೇಸರ ಹೊರಹಾಕಿದ್ದರಂತೆ. ನಂತರ ಸಭೆಯಿಂದ ವಾಕ್‌ಔಟ್ ಮಾಡಲು ಮುಂದಾಗುತ್ತಿದ್ದಂತೆ, ಕೆಲವರು ಬಿ.ಆರ್.ಪಾಟೀಲ್‌ರನ್ನು ಸಮಾಧಾನ ಪಡಿಸಿದ್ರು.

ವಿಜಯಾನಂದ ಕಾಶಪ್ಪನವರ್, ಸಂಗಮೇಶ್ ಸಹ ಅಪಸ್ವರ

ಸಭೆಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತು ಭದ್ರಾವತಿ ಶಾಸಕ ಸಂಗಮೇಶ್ ಕೂಡ ಅಪಸ್ವರ ಎತ್ತಿದ್ದಾರೆ. ಸಚಿವರು ತಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ಷೇಪ ಹೊರಹಾಕಿದ್ರು. ಶಾಸಕರ ಪತ್ರಕ್ಕೆ ಬೆಲೆ ಕೊಡಿ ನಾವು ಹೇಳಿದ ಅಧಿಕಾರಿಗಳನ್ನ ನಮಗೆ ಕೊಡಿ ಅಂತೇಳಿದ್ರು ಎನ್ನಲಾಗಿದೆ.

ಇನ್ನು ರಾಯಚೂರು ಜಿಲ್ಲಾ ಶಾಸಕರು, ಬೋಸರಾಜುಗೆ ಸಚಿವ ಸ್ಥಾನ ನೀಡಿದ್ದಕ್ಕೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ನಮ್ಮನ್ನು ಸೋಲಿಸಲು ಕೆಲಸ ಮಾಡಿದ ವ್ಯಕ್ತಿಗಳಿಗೆ ಮಣೆ ಹಾಕಲಾಗಿದೆ. ರಾಯಚೂರಿಗೆ ಸಂಬಂಧ ಇಲ್ಲದ ಕೆಲ ಬೆಂಗಳೂರಿನ ಶಾಸಕರು ನಮ್ಮ ಜಿಲ್ಲೆಯ ವ್ಯವಹಾರದಲ್ಲಿ ತಲೆ ಹಾಕುತ್ತಿದ್ದಾರೆ. ಇದೇ ರೀತಿ ಆದರೆ ಲೋಕಸಭೆ ಚುನಾವಣೆಯಲ್ಲಿ ನಾವು ಹೆಚ್ಚಿನದ್ದೇನನ್ನು ಮಾಡಲು ಆಗಲ್ಲ ಅಂತೇಳಿದ್ರು. ಈ ವೇಳೆ ಬೋಸರಾಜು ಮಂತ್ರಿ ಸ್ಥಾನದ ವಿಚಾರವಾಗಿ ಶೀಘ್ರದಲ್ಲೇ ತೀರ್ಮಾನ ಮಾಡುವುದಾಗಿ ಸಿಎಂ ಶಾಸಕರನ್ನು ಸಮಾಧಾನ ಪಡಿಸಲು ಯತ್ನಿಸಿದ್ರು ಎನ್ನಲಾಗಿದೆ.

ಅಸಮಾಧಾನ.. ಏನೂ ಇಲ್ಲ ಎಂದ ಸಿದ್ದರಾಮಯ್ಯ

ಇನ್ನು ಶಾಸಕಾಂಗ ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಶಾಸಕರು ಪತ್ರ ಕೊಟ್ಟಿದ್ರು. ನಾನೇ ಶಾಸಕಾಂಗ ಪಕ್ಷದ ಸಭೆಯನ್ನ ಮುಂದಕ್ಕೆ ಹಾಕಿದ್ದೆ. ಸಭೆಯಲ್ಲಿ ಶಾಸಕರು ವರ್ಗಾವಣೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅವರ ಕ್ಷೇತ್ರದ ಸಮಸ್ಯೆಗಳನ್ನು ಹೇಳಿದ್ದಾರೆ. ಯಾವ ಅಸಮಾಧಾನವೂ ಇಲ್ಲ ಅಂತೇಳಿದ್ರು. ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿ, ಎಲ್ಲಾ ಶಾಸಕರು ಖುಷಿಯಾಗಿ ಇದ್ದಾರೆ. ಯಾರೂ ದೂರು ಕೊಟ್ಟಿಲ್ಲ, ಸಭೆ ನಡೆಸಿ ಅಂತಾ ಹೇಳಿದ್ದಾರೆ ಅಷ್ಟೇ ಎಂದಿದ್ದಾರೆ.

ಏನೇ ಅಸಮಾಧಾನಗಳಿದ್ದರೂ ನೇರವಾಗಿ ನನಗೆ ಹೇಳಿ, ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಎಂದು ಶಾಸಕರಿಗೆ ಸಿದ್ದರಾಮಯ್ಯ ಕಿವಿ ಮಾತು ಹೇಳಿದ್ದಾರೆ. ಎನ್ನಲಾಗಿದೆ. ಒಟ್ಟಿನಲ್ಲಿ ಕೈ ಪಾಳಯದಲ್ಲಿ ಲೆಟರ್‌ ಬಾಂಬ್ ಅಸಮಾಧಾನದ ಕಿಡಿ ಹೊತ್ತಿಸಿರುವುದು ಸುಳ್ಳಲ್ಲ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 9:41 am, Fri, 28 July 23

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ