7 ಬಾರಿಯ ಸಂಸದ ಕೆ.ಹೆಚ್. ಮುನಿಯಪ್ಪ ರಾಜ್ಯ ರಾಜಕಾರಣಕ್ಕೆ? ಕ್ಷೇತ್ರ ಯಾವುದು?
ಕೋಲಾರ: ನಿರಂತರವಾಗಿ 1991ರಿಂದ ಕಾಂಗ್ರೆಸ್ ಪಕ್ಷದ ವತಿಯಿಂದ ಲೋಕಸಭೆಗೆ ಆಯ್ಕೆಯಾಗುತ್ತಾ ಬಂದಿರುವ ಅದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎದುರು ಪರಾಜಯಗೊಂಡ ಕೆ.ಹೆಚ್. ಮುನಿಯಪ್ಪ ಇದೀಗ ರಾಜ್ಯ ರಾಜಕಾರಣಕ್ಕೆ ಬರಲು ಒಲವು ತೋರಿದ್ದಾರೆ ಎನ್ನುತ್ತಿವೆ ಪಕ್ಷದ ಮೂಲಗಳು. ಕ್ಷೇತ್ರ ಯಾವುದು, ಡಿಕೆಶಿ ಮಾಸ್ಟರ್ ಪ್ಲ್ಯಾನ್ ಏನು? ಕೇಂದ್ರದ ಮಾಜಿ ಸಚಿವ, 72 ವರ್ಷದ ಕೆ.ಎಚ್. ಮುನಿಯಪ್ಪ ರಾಜ್ಯ ರಾಜಕಾರಣದತ್ತ ಮರಳಲು ಕೆಪಿಸಿಸಿ ಅಧ್ಯಕ್ಷ್ಯ ಡಿಕೆ ಶಿವಕುಮಾರ್ ಒತ್ತಾಯ ಕಾರಣ ಎನ್ನಲಾಗಿದೆ. ಮುಳಬಾಗಿಲು ಕ್ಷೇತ್ರದಿಂದ ಕಣಕ್ಕಿಳಿಯುವ ಇಂಗಿತ […]
Follow us on
ಕೋಲಾರ: ನಿರಂತರವಾಗಿ 1991ರಿಂದ ಕಾಂಗ್ರೆಸ್ ಪಕ್ಷದ ವತಿಯಿಂದ ಲೋಕಸಭೆಗೆ ಆಯ್ಕೆಯಾಗುತ್ತಾ ಬಂದಿರುವ ಅದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎದುರು ಪರಾಜಯಗೊಂಡ ಕೆ.ಹೆಚ್. ಮುನಿಯಪ್ಪ ಇದೀಗ ರಾಜ್ಯ ರಾಜಕಾರಣಕ್ಕೆ ಬರಲು ಒಲವು ತೋರಿದ್ದಾರೆ ಎನ್ನುತ್ತಿವೆ ಪಕ್ಷದ ಮೂಲಗಳು.
ಕ್ಷೇತ್ರ ಯಾವುದು, ಡಿಕೆಶಿ ಮಾಸ್ಟರ್ ಪ್ಲ್ಯಾನ್ ಏನು? ಕೇಂದ್ರದ ಮಾಜಿ ಸಚಿವ, 72 ವರ್ಷದ ಕೆ.ಎಚ್. ಮುನಿಯಪ್ಪ ರಾಜ್ಯ ರಾಜಕಾರಣದತ್ತ ಮರಳಲು ಕೆಪಿಸಿಸಿ ಅಧ್ಯಕ್ಷ್ಯ ಡಿಕೆ ಶಿವಕುಮಾರ್ ಒತ್ತಾಯ ಕಾರಣ ಎನ್ನಲಾಗಿದೆ.
ಮುಳಬಾಗಿಲು ಕ್ಷೇತ್ರದಿಂದ ಕಣಕ್ಕಿಳಿಯುವ ಇಂಗಿತ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಡಿಕೆಶಿ ಮಾಸ್ಟರ್ ಪ್ಲಾನ್ ಹೊಂದಿದ್ದಾರೆ. ಈ ಹಿನ್ನೆಲೆ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕೆ.ಎಚ್.ಮುನಿಯಪ್ಪರಿಗೆ ಡಿಕೆಶಿ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ಹಾಗಾಗಿ ಹೈಕಮಾಂಡ್ ಒಪ್ಪಿಗೆ ಕೊಟ್ಟರೆ ಸ್ಪರ್ಧಿಸಲು ಸಿದ್ದ ಎಂದು ಕೆ.ಎಚ್. ಮುನಿಯಪ್ಪ ಇಂಗಿತ ವ್ಯಕ್ತಪಡಿಸಿದ್ದಾರೆ. ಹಾಗೇನಾದರೂ ಕಣಕ್ಕೆ ಇಳಿಯುವುದೇ ಆದ್ರೆ ಅದು ಜಿಲ್ಲೆಯ ಮುಳಬಾಗಿಲು ಕ್ಷೇತ್ರದಿಂದ ಎಂದೂ ಕೆ.ಎಚ್. ಮುನಿಯಪ್ಪ ಸೂಚ್ಯವಾಗಿ ಹೇಳಿದ್ದಾರೆ.