ಗದಗ: ಕಾಂಗ್ರೆಸ್ ನಾಯಕರ ವಿರುದ್ಧ ಅವಹೇಳನಕಾರಿ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಪಂಚಾಕ್ಷರಿ ಮೇಲೆ ‘ಕೈ’ ಕಾರ್ಯಕರ್ತ ಕಾರ್ತಿಕ್ ಗುಜಮಾಗಡಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಾಂಗ್ರೆಸ್ ಕಾರ್ಯಕರ್ತ ಕಾರ್ತಿಕ ಗುಜಮಾಗಡಿ ಯುವಮೋರ್ಚಾ ಕಾರ್ಯದರ್ಶಿ ಪಂಚಾಕ್ಷರಿ ಹಲ್ಲೆ ನಡೆಸಿದ್ದಾರಂತೆ. ಕಾರ್ತಿಕ ಕಡೆಯವರು ಗದಗ ನಗರದ ರಾಚೋಟೇಶ್ವರ ನಗರದಲ್ಲಿರುವ ಪಂಚಾಕ್ಷರಿ ಮನೆಗೆ ನುಗ್ಗಿ ಮನೆಯಿಂದ ಆತನನ್ನು ಹೊರ ಎಳೆದುಕೊಂಡು ಬಂದು ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಘಟನೆ ನಡೆಯುತ್ತಿದ್ದಂತೆ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಗದಗ ಶಹರ ಪೊಲೀಸ್ ಠಾಣೆಯಲ್ಲಿ ರಾತ್ರೋರಾತ್ರಿ ಜಮಾವಣೆಗೊಂಡಿದ್ದಾರೆ. ಬಳಿಕ ಪೊಲೀಸರಿಗೆ ದೂರು ನೀಡಿ. ಆರೋಪಿಯನ್ನ ಬಂಧಿಸುವಂತೆ ಆಗ್ರಹಿಸಿದ್ದಾರೆ. ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪೋಸ್ಟ್ನಿಂದಾಗಿ ಇಷ್ಟೆಲ್ಲಾ ಅವಾಂತರಗಳು ಸಂಭವಿಸಿವೆ.
ಜೈಲು ಸಿಬ್ಬಂದಿ ಮೇಲೆ ಅಧೀಕ್ಷಕನಿಂದ ಹಲ್ಲೆ, ಬೆದರಿಕೆ ಆರೋಪ.. ದೂರು-ಪ್ರತಿ ದೂರು ಸಮರ