AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತತ ನಾಲ್ಕು ದಿನ ಸಾರಿಗೆ ನೌಕರರ ಮುಷ್ಕರ: ನಷ್ಟ ಆಗಿದ್ದು ಎಷ್ಟು ಕೋಟಿ ಗೊತ್ತಾ?

ಸಾರಿಗೆ ನೌಕರರ ನಾಲ್ಕು ದಿನಗಳ ಕಾಲ ನಡೆದ ಮುಷ್ಕರದಿಂದ ಸರಕಾರ ಒಟ್ಟು 58 ಕೋಟಿ ನಷ್ಟ ಭರಿಸಬೇಕಾಗಿದೆ.

ಸತತ ನಾಲ್ಕು ದಿನ ಸಾರಿಗೆ ನೌಕರರ ಮುಷ್ಕರ: ನಷ್ಟ ಆಗಿದ್ದು ಎಷ್ಟು ಕೋಟಿ ಗೊತ್ತಾ?
ಸಾಂದರ್ಭಿಕ ಚಿತ್ರ
shruti hegde
|

Updated on: Dec 15, 2020 | 8:28 AM

Share

ಬೆಂಗಳೂರು: ರಾಜ್ಯದೆಲ್ಲೆಡೆ ಸಾರಿಗೆ ನೌಕರರ ಮುಷ್ಕರದಿಂದ ಬಸ್​ ಸಂಚಾರ ಸ್ಥಗಿತಗೊಂಡಿತ್ತು. ಮುಷ್ಕರದ 4ದಿನದಲ್ಲಿ ಸರಕಾರ ಬರೋಬ್ಬರಿ ಒಟ್ಟು 58 ಕೋಟಿ ನಷ್ಟ ಅನುಭವಿಸಿದೆ. ಹಾಗಾದ್ರೆ ಪ್ರತ್ಯೇಕವಾಗಿ  KSRTC, BMTC, NEKRTC ಹಾಗೂ NWKRTC ಬಸ್ಸಗಳಿಂದ ಎಷ್ಟು ನಷ್ಟ ಸರಕಾರ ಭರಿಸಿತು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

KSRTC: ನಾಲ್ಕು ನಿಗಮದಿಂದ 1.5 ಲಕ್ಷದ 30 ಸಾವಿರ ನೌಕರರಿದ್ದಾರೆ. KSRTC ಬಸ್ಸುಗಳ ಸಂಖ್ಯೆ ಒಟ್ಟು 6 ಸಾವಿರ. ಸುಮಾರು 7 ಕೋಟಿ ರೂ. ಪ್ರತಿದಿನ ಕಲೆಕ್ಷನ್ ಇದೆ. ಮುಷ್ಕರದ ಸಮಯದಲ್ಲಿ ಸಾಕಷ್ಟು ‌ಬಸ್ಸುಗಳು ಸಂಚಾರ ಮಾಡಿದನ್ನು ಹೊರತುಪಡಿಸಿ, 4 ದಿನದ ಸಾರಿಗೆ ನೌಕರರ ಮುಷ್ಕರದಿಂದ ಅಂದಾಜು 20 ಕೋಟಿ ನಷ್ಟ ಉಂಟಾಗಿದೆ.

BMTC: ಪ್ರತಿದಿನ 4,900 ರಿಂದ 5,000 BMTC ಬಸ್​ಗಳು ಸಂಚಾರ ಮಾಡುತ್ತವೆ. ದಿನಕ್ಕೆ ಒಟ್ಟು 2 ಕೋಟಿ 10 ಲಕ್ಷ ರೂ.ಆದಾಯಗಳಿಸುತ್ತವೆ. 4 ದಿನದ ಮುಷ್ಕರದಿಂದ ಅಂದಾಜು 7 ಕೋಟಿ ನಷ್ಟ ಉಂಟಾಗಿದೆ.

NEKRTC: ಪ್ರತಿದಿನ ಸಂಖ್ಯೆ ಒಟ್ಟು  3,775 NEKRTC ಬಸ್​ಗಳು  ಸಂಚಾರ ಮಾಡುತ್ತವೆ. ದಿನಕ್ಕೆ ಸುಮಾರು 4 ಕೋಟಿ ಆದಾಯಗಳಿಸುತ್ತದೆ. ಮುಷ್ಕರದಿಂದಾಗಿ ಒಟ್ಟು 12 ಕೋಟಿ ನಷ್ಟ ಉಂಟಾಗಿದೆ.

NWKRTC: ಪ್ರತಿದಿನ  ಒಟ್ಟು 3,402 NWKRTC  ಬಸ್ಸುಗಳು ಸಂಚಾರ ಮಾಡುತ್ತವೆ . ಒಟ್ಟು 4 ಕೋಟಿ 20ಲಕ್ಷ ರೂ. ಆದಾಯಗಳಿಸುತ್ತದೆ. ನೌಕರರ ಮುಷ್ಕರದಿಂದ ಒಟ್ಟು 14 ಕೋಟಿ 50ಲಕ್ಷ ರೂ. ನಷ್ಟ ಉಂಟಾಗಿದೆ.

ಮುಷ್ಕರದ ಸಮಯದಲ್ಲಿ, ಶುಕ್ರವಾರ, ಶನಿವಾರ ಹಾಗೂ ಭಾನುವಾರ ನಾಲ್ಕು ನಿಗಮಗಳಿಂದ ನೂರಾರು ಬಸ್ಸುಗಳು ಮಾತ್ರ ಸಂಚಾರ ಮಾಡಿದ್ದವು. ಮುಷ್ಕರದ ಕೊನೆಯ ದಿನ ಅಂದರೆ, ನಿನ್ನೆ ಸಂಜೆ ನಾಲ್ಕು ನಿಗಮದಿಂದ ಸುಮಾರು ಶೇ.40 ರಷ್ಟು ಬಸ್ಸುಗಳು ಸಂಚಾರ ಆರಂಭ ಮಾಡಿವೆ.