ಪತಿಯಿಂದಲೇ ಪತ್ನಿ ಕೊಲೆ: ಕಲ್ಲಿನಿಂದ ಜಜ್ಜಿ ಸಹಜ ಸಾವು ಎಂದು ಕಥೆ ಕಟ್ಟಿದ ದುಷ್ಕರ್ಮಿ ಕೃತ್ಯ ಬಯಲು
ಪತಿಯೇ ಪತ್ನಿಯ ಹತ್ಯೆಗೈದು ಪೊಲೀಸರಿಗೆ ಸುಳ್ಳು ಕಥೆ ಕಟ್ಟಿದ ಘಟನೆ ಮೈಸೂರು ಜಿಲ್ಲೆ ಹೆಚ್ಡಿ ಕೋಟೆ ತಾಲೂಕಿನ ಹೊನ್ನಮನ ಕಟ್ಟೆಯಲ್ಲಿ ನಡೆದಿದೆ
ಮೈಸೂರು: ಪತ್ನಿಯನ್ನು ಹತ್ಯೆಗೈದು ಸಹಜ ಸಾವಿನ ಕಥೆ ಕಟ್ಟಿದ್ದ ಆರೋಪಿ ನಯೀಂ ಪಾಷಾನನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ತಿಂಗಳ 13ನೇ ತಾರೀಕಿನಂದು ತನ್ನ ಪತ್ನಿ ಸಲ್ಮಾಳನ್ನು(26) ಹತ್ಯೆಗೈದಿದ್ದಾನೆ. ಮೈಸೂರು ಜಿಲ್ಲೆಯ ಹೆಚ್ಡಿ ಕೋಟೆ ತಾಲೂಕಿನ ಹೊನ್ನಮನ ಕಟ್ಟೆಯಲ್ಲಿ ದೃಷ್ಕೃತ್ಯ ನಡೆದಿದೆ.
ಸಲ್ಮಾಳನ್ನು ಹತ್ಯೆಗೈದು ಬೀಚನಹಳ್ಳಿ ಪೊಲೀಸ್ ಠಾಣೆಗೆ ನಯೀಂ ಪಾಷಾ ತೆರಳಿದ್ದಾನೆ. ಮನೆಯ ಗೋಡೆ ಕುಸಿದು ಮತ್ನಿ ಸಾವನ್ನಪ್ಪಿರುವುದಾಗಿ ದೂರು ನೀಡಿದ್ದಾನೆ. ಪೊಲೀಸ್ ಪರಿಶೀಲನೆಯಲ್ಲಿ ಪತ್ನಿಯ ಮರಣೋತ್ತರ ಪರೀಕ್ಷೆ ನಡೆಸುವುದು ಬೇಡವೆಂದು ನಯೀಂ ಒತ್ತಾಯಿಸಿದ್ದಾನೆ.
ಅಷ್ಟರಲ್ಲಿ ಪೊಲೀಸ್ ಠಾಣೆಗೆ ಅನಾಮಧೇಯ ಕರೆಯೊಂದು ಬಂದಿದೆ. ಈ ಕರೆಯ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಲು ಆರಂಭಿಸುತ್ತಾರೆ. ನಯೀಂ ಪಾಷಾನನ್ನು ತನಿಖೆಗೆ ಒಳಪಡಿಸಲಾಗುತ್ತದೆ.
ಪತ್ನಿ ಸಲ್ಮಾಳ ನಡತೆ ಸರಿ ಇಲ್ಲ ಎಂಬ ಅನುಮಾನದಿಂದ ಕಲ್ಲಿನಿಂದ ಜಜ್ಜಿ ಹತ್ಯೆಗೈದು, ಪತ್ನಿಯ ಶವದ ಮೇಲೆ ಗೋಡೆ ಬೀಳಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಪೊಲೀಸರು ನಿಯೀಂ ಪಾಷಾನನ್ನು ಬಂಧನಕ್ಕೆ ಒಳಪಡಿಸಿದ್ದಾರೆ.
ಪತ್ನಿ ಹತ್ಯೆ, ಪತಿಗೆ ಪ್ಯಾರಲಿಸಿಸ್, ಮನೆಯಲ್ಲಿ ಮತ್ತೂ ಒಂದು ಶವ: ಕೊಂದವರು ಯಾರು?
Published On - 9:12 am, Tue, 15 December 20