ಬುದ್ಧಿವಾದ ಹೇಳಿದಕ್ಕೆ ಪುಡಿ ಪುಂಡರಿಂದ ಮಹಿಳೆಯರ ಮೇಲೆ ಅಟ್ಯಾಕ್, ಆಸ್ಪತ್ರೆಗೆ ದಾಖಲು

ಹುಬ್ಬಳ್ಳಿಯಲ್ಲಿ ಪುಂಡರ ಅಟ್ಟಹಾಸ ಮುಂದುವರೆದಿದೆ. ಗಾಂಜಾ, ಮದ್ಯ ಸೇವಿಸಬೇಡಿ ಎಂದಿದ್ದಕ್ಕೆ ಅವಾಚ್ಯವಾಗಿ ಬೈದು ಮಹಿಳೆಯರ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ಹೆಗ್ಗೆರಿಯ ಮಾರುತಿ ಕಾಲೋನಿಯಲ್ಲಿ ನಡೆದಿದೆ.

ಬುದ್ಧಿವಾದ ಹೇಳಿದಕ್ಕೆ ಪುಡಿ ಪುಂಡರಿಂದ ಮಹಿಳೆಯರ ಮೇಲೆ ಅಟ್ಯಾಕ್, ಆಸ್ಪತ್ರೆಗೆ ದಾಖಲು
ಪುಂಡರಿಂದ ಮಹಿಳೆಯರ ಮೇಲೆ ಅಟ್ಯಾಕ್
Follow us
ಆಯೇಷಾ ಬಾನು
|

Updated on: Dec 15, 2020 | 9:37 AM

ಹುಬ್ಬಳ್ಳಿ: ಜಿಲ್ಲೆಯಲ್ಲಿ ಪುಂಡರ ಅಟ್ಟಹಾಸ ಮುಂದುವರೆದಿದೆ. ಗಾಂಜಾ, ಮದ್ಯ ಸೇವಿಸಬೇಡಿ ಎಂದಿದ್ದಕ್ಕೆ ಅವಾಚ್ಯವಾಗಿ ಬೈದು ಮಹಿಳೆಯರ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ಹೆಗ್ಗೆರಿಯ ಮಾರುತಿ ಕಾಲೋನಿಯಲ್ಲಿ ನಡೆದಿದೆ. ರಾಜೇಶ್ವರಿ ಕಿರಿಸುರ್, ಪುಂಡರಿಂದ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ.

ತಡ ರಾತ್ರಿ ಕುಡಿದ ಅಮಲಿನಲ್ಲಿ ರಸ್ತೆ ಮಧ್ಯೆ ಹೋಗುತ್ತಿದ್ದ ಪುಂಡರಿಗೆ, ರಾಜೇಶ್ವರಿ ಸೇರಿದಂತೆ ಜೊತೆಯಲ್ಲಿದ್ದ ಮಹಿಳೆಯರು ಕಾಲೋನಿಯಲ್ಲಿ ಗಾಂಜಾ, ಮದ್ಯ ಸೇವಿಸಬೇಡಿ ಎಂದು ಬುದ್ಧಿವಾದ ಹೇಳಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ಪುಂಡರು ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಮೇಲೆ ರಕ್ತ ಬರುವಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಈ ವೇಳೆ ರಾಜೇಶ್ವರಿ ಕಿರಿಸುರ್‌ಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಪ್ರಕರಣ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಸಚಿನ್ ಹೆಬ್ಬಳ್ಳಿ ಮತ್ತು ರಾಜೇಶ್ ಎಂಬುವವರ ವಿರುದ್ಧ ದೂರು ದಾಖಲಾಗಿದೆ. ಪೊಲೀಸರು ಪುಂಡರ ಅಟ್ಟಹಾಸಕ್ಕೆ ತಕ್ಕ ಶಾಸ್ತಿ ಮಾಡಲು ತನಿಖೆಗೆ ಮುಂದಾಗಿದ್ದಾರೆ.

ಪತಿಯಿಂದಲೇ ಪತ್ನಿ ಕೊಲೆ: ಕಲ್ಲಿನಿಂದ ಜಜ್ಜಿ ಸಹಜ ಸಾವು ಎಂದು ಕಥೆ ಕಟ್ಟಿದ ದುಷ್ಕರ್ಮಿ ಕೃತ್ಯ ಬಯಲು