ಜೈಲು ಸಿಬ್ಬಂದಿ ಮೇಲೆ ಅಧೀಕ್ಷಕನಿಂದ ಹಲ್ಲೆ, ಬೆದರಿಕೆ ಆರೋಪ.. ದೂರು-ಪ್ರತಿ ದೂರು ಸಮರ

ಜೈಲು ಅಧೀಕ್ಷಕ ಟಿ.ಬಿ.ಭಜಂತ್ರಿ ತಮ್ಮ ಕಚೇರಿಗೆ ಕರೆಸಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಹಾವೇರಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಜೈಲು ವೀಕ್ಷಕ ಪುಂಡಲೀಕ ಪವಾರ ಆರೋಪಿಸಿದ್ದಾನೆ. ಇಬ್ಬರ ನಡುವೆ ದೂರು ಪ್ರತಿ ದೂರು ದಾಖಲಾಗಿದೆ.

ಜೈಲು ಸಿಬ್ಬಂದಿ ಮೇಲೆ ಅಧೀಕ್ಷಕನಿಂದ ಹಲ್ಲೆ, ಬೆದರಿಕೆ ಆರೋಪ.. ದೂರು-ಪ್ರತಿ ದೂರು ಸಮರ
ಜೈಲು ಸಿಬ್ಬಂದಿ ಮೇಲೆ ಅಧೀಕ್ಷಕನಿಂದ ಹಲ್ಲೆ, ಬೆದರಿಕೆ
Follow us
ಆಯೇಷಾ ಬಾನು
|

Updated on:Dec 15, 2020 | 7:43 AM

ಹಾವೇರಿ: ಜೈಲು ಸಿಬ್ಬಂದಿ ಮೇಲೆ ಅಧೀಕ್ಷಕನಿಂದ ಹಲ್ಲೆ, ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಹಾವೇರಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಜೈಲು ವೀಕ್ಷಕ ಪುಂಡಲೀಕ ಪವಾರ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಲಾಗಿದೆ ಎಂಬ ಆರೋಪವಿದೆ.

ಜೈಲು ಅಧೀಕ್ಷಕ ಟಿ.ಬಿ.ಭಜಂತ್ರಿ ತಮ್ಮ ಕಚೇರಿಗೆ ಕರೆಸಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಜೈಲಿನಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಮೇಲಧಿಕಾರಿಗೆ ಮಾಹಿತಿ ನೀಡ್ತಿದ್ದೀಯಾ ಎಂದು ಮುಖ, ಮೂಗಿಗೆ ಗುದ್ದಿದ್ದಾರೆ. ವಿಚಾರಣಾಧೀನ ಕೈದಿ ವಿನಾಯಕನನ್ನು ಕರೆಸಿಕೊಂಡು ಬೆದರಿಕೆ ಹಾಕಿದ್ದು, ಈತನನ್ನು ಕೊಲೆ ಮಾಡು, ಬಂದಿದ್ದು ನೋಡಿಕೊಳ್ತೇನೆಂದು ಧಮ್ಕಿ ಹಾಕಿದ್ದಾರೆ ಎಂದು ಜೈಲು ವೀಕ್ಷಕ ಪುಂಡಲೀಕ ಪವಾರ ಆರೋಪಿಸಿದ್ದಾರೆ.

ಹಾವೇರಿ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಜೈಲು ಅಧೀಕ್ಷಕ ಭಜಂತ್ರಿ, ವಿನಾಯಕನ ವಿರುದ್ಧ ದೂರು ದಾಖಲಾಗಿದೆ. ಹಾಗೂ ಟಿ.ಬಿ.ಭಜಂತ್ರಿಯಿಂದ ಧಾರವಾಡ ಜಿಲ್ಲಾ ಕೇಂದ್ರ ಕಾರಾಗೃಹದ ಅಧೀಕ್ಷಕ ಎಂ.ಮರಿಗೌಡ, ಹಾವೇರಿ ಜೈಲು ವೀಕ್ಷಕ ಪುಂಡಲೀಕ ಪವಾರನ ವಿರುದ್ಧ ಪ್ರತಿ ದೂರು ದಾಖಲಾಗಿದೆ. ಜೈಲು ಸಿಬ್ಬಂದಿ ಪುಂಡಲೀಕ, ನೇಮಿಸಿದ ಸ್ಥಳ ಬಿಟ್ಟು ಬೇರೆಡೆ ಕೈದಿಗಳಿಗೆ ತಯಾರಿಸಿದ್ದ ಊಟ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ದಗಳನ್ನು ಬಳಸಿ ಜಾತಿ ನಿಂದನೆ ಮಾಡಿದ್ದಾನೆ ಎಂದು ಆರೋಪಿಸಿ ಜೈಲು ಸಿಬ್ಬಂದಿ ಪುಂಡಲೀಕ ವಿರುದ್ಧ ಜೈಲರ್​ ಭಜಂತ್ರಿ ಆರೋಪಿಸಿದ್ದಾರೆ.

ಕರ್ತವ್ಯದ ವೇಳೆ ತಮ್ಮ ಮೇಲೆಯೇ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ. ಪುಂಡಲೀಕ ಪವಾರಗೆ ಎಂ.ಮರಿಗೌಡ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಹಾವೇರಿ ಸೆಂಟ್ರಲ್ ಜೈಲು ಅಧೀಕ್ಷಕ ಭಜಂತ್ರಿಯಿಂದ ಪ್ರತಿ ದೂರು ದಾಖಲಾಗಿದೆ. ಈ ರೀತಿ ವೀಕ್ಷಕ ಪುಂಡಲೀಕ ಪವಾರ ಮತ್ತು ಜೈಲು ಅಧೀಕ್ಷಕ ಭಜಂತ್ರಿ ನಡುವೆ ದೂರು-ಪ್ರತಿ ದೂರಿನ ಸಮರ ಶುರುವಾಗಿದೆ.

ಸಾಮಾನ್ಯ ಜನರು ವಿಮಾನ ಹತ್ತಬೇಕೆಂಬ ಕನಸಿಗಾಗಿ ಶ್ರಮಿಸಿದ್ದ ಏರೊಸ್ಪೇಸ್ ವಿಜ್ಞಾನಿ ರೊದ್ದಂ ನರಸಿಂಹ ನಿಧನ

Published On - 7:42 am, Tue, 15 December 20

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ