ವಿಧಾನ ಪರಿಷತ್ ಸಭಾಪತಿ ಉತ್ತರ ತಿರಸ್ಕರಿಸಿದ ಅಯನೂರು ಮಂಜುನಾಥ್: ಹಕ್ಕುಚ್ಯುತಿಯ ಪ್ರಸ್ತಾವ
ತಮ್ಮ ವಿರುದ್ಧ ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ಮಂಡನೆ ಸೂಚನೆಯನ್ನು ವಿಧಾನ ಪರಿಷತ್ ಸಭಾಪತಿ ಕೆ.ಪ್ರತಾಪ್ಚಂದ್ರ ಶೆಟ್ಟಿ ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಪರಿಷತ್ ಸದಸ್ಯ ಅಯನೂರು ಮಂಜುನಾಥ್ ಸುದೀರ್ಘ ಪತ್ರ ಬರೆದಿದ್ದಾರೆ.
ಬೆಂಗಳೂರು: ತಮ್ಮ ವಿರುದ್ಧ ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ಮಂಡನೆ ಸೂಚನೆಯನ್ನು ವಿಧಾನ ಪರಿಷತ್ ಸಭಾಪತಿ ಕೆ.ಪ್ರತಾಪ್ಚಂದ್ರ ಶೆಟ್ಟಿ ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಪರಿಷತ್ ಸದಸ್ಯ ಅಯನೂರು ಮಂಜುನಾಥ್ ಸುದೀರ್ಘ ಪತ್ರ ಬರೆದಿದ್ದಾರೆ.
ವಿಧಾನ ಪರಿಷತ್ ಸದಸ್ಯರೊಬ್ಬರ ಗೊತ್ತುವಳಿಗೆ ಅಧಿಕಾರಿಗಳ ಮೂಲಕ ಪ್ರತಿಕ್ರಿಯಿಸಿರುವ ಸಭಾಪತಿಯಿಂದ ನನ್ನ ಹಕ್ಕುಚ್ಯುತಿಯಾಗಿದೆ, ಇದು ಸದಸ್ಯರಿಗೆ ಸಭಾಪತಿ ಮಾಡಿದ ಅವಮಾನ ಎಂದು ಮಂಜುನಾಥ್ ದೂರಿದ್ದಾರೆ.
ತಮ್ಮ ವಿರುದ್ಧದ ಆರೋಪಗಳಿಗೆ ಸದನದಲ್ಲಿ ಉತ್ತರ ನೀಡದೇ, ಕಡತಗಳಲ್ಲಿ ತೀರ್ಮಾನ ಕೈಗೊಂಡಿರುವುದು ಅಕ್ಷಮ್ಯ ಅಪರಾಧ ಮತ್ತು ಸಂವಿಧಾನ ವಿರೋಧಿ ಕ್ರಮ. ಸದನದಲ್ಲಿ ಇನ್ನೂ ಕಲಾಪಗಳು ಬಾಕಿಯಿದ್ದು, ಜಾನುವಾರುಗಳ ಹತ್ಯೆಗೆ ಸಂಬಂಧಿಸಿದ ಮಸೂದೆಯು ಪರ್ಯಾಲೋಚನೆಗೆ ಬಾಕಿಯಿರುವಾಗಲೇ ಸದನದ ಮುಂದೆ ಯಾವುದೇ ಕಲಾಪಗಳು ಬಾಕಿಯಿರುವುದಿಲ್ಲ ಎಂದು ಸಭಾಪತಿ ಘೋಷಿಸಿದ್ದಾರೆ. ಹೀಗೆ ಸುಳ್ಳು ಹೇಳುವ ಮೂಲಕ ತಮ್ಮ ಮೂಲ (ಕಾಂಗ್ರೆಸ್) ಮಾತೃಪಕ್ಷದ ಆಶಯಕ್ಕೆ ಅನುಗುಣವಾಗಿ ವರ್ತಿಸಿ, ಪಕ್ಷಪಾತ ಧೋರಣೆಯನ್ನು ಅನುಸರಿಸಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಸಭಾಪತಿ ಅಥವಾ ಉಪಸಭಾಪತಿಯನ್ನು ಪದದಿಂದ ತೆಗೆದು ಹಾಕುವ ನಿರ್ಣಯವು ಪರ್ಯಾಲೋಚನೆಯಲ್ಲಿರುವಾಗ ಸಂಬಂಧಿಸಿದ ಸಭಾಪತಿ ಅಥವಾ ಉಪಸಭಾಪತಿ ಸದನದಲ್ಲಿ ಹಾಜರಿದ್ದರೂ ಅಧ್ಯಕ್ಷತೆ ವಹಿಸತಕ್ಕದ್ದಲ್ಲ ಎಂದು ಸಂವಿಧಾನದ ಅನುಚ್ಛೇದಗಳು ಹೇಳುತ್ತವೆ. ಸಭಾಪತಿ ವಿರುದ್ಧ ಅವಿಶ್ವಾಸ ಮಂಡನೆಯಾಗಿರುವುದರಿಂದ ಅವರಿಗೆ ಹಿಂಬರಹ ನೀಡಲು ಅವಕಾಶ ಇರುವುದಿಲ್ಲ. ಅದನ್ನು ತಿರಸ್ಕರಿಸುತ್ತೇನೆ ಎಂದು ಅಯನೂರು ಮಂಜುನಾಥ್ ಹೇಳಿದ್ದಾರೆ.
ರಾಜಕೀಯ ತಂತ್ರ
ಮಂಗಳವಾರ (ಡಿ.15) ಆರಂಭವಾಗಲಿರುವ ವಿಧಾನ ಪರಿಷತ್ ಅಧಿವೇಶನದಲ್ಲಿ ಕಾಂಗ್ರೆಸ್ ಮೂಲದ ಸಭಾಪತಿಯಿಂದ ತಮ್ಮ ನಡೆಗೆ ತೊಂದರೆಯಾಗುವುದನ್ನು ತಪ್ಪಿಸಲು ಬಿಜೆಪಿ ಈ ತಂತ್ರಕ್ಕೆ ಮೊರೆಹೋಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಗೋಹತ್ಯೆ ತಡೆ ಕಾನೂನನ್ನು ಪರಿಷತ್ನಲ್ಲಿ ಮಂಡಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.
ಡಿ.15ರಂದು ಪರಿಷತ್ ಅಧಿವೇಶನ ಕರೆಯುವಂತೆ ವಿಧಾನ ಪರಿಷತ್ ಕಾರ್ಯದರ್ಶಿಗೆ ಸರ್ಕಾರ ಪತ್ರ