ಬೆಂಗಳೂರು: ನಗರದ ಮಹಾರಾಣಿ ಕಾಲೇಜು ಬಳಿಯ ಅಂಡರ್ ಪಾಸ್ನಲ್ಲಿ ಕಂಟೇನರ್ ಲಾರಿ ಸಿಲುಕಿ, ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮೈಸೂರ್ ಬ್ಯಾಂಕ್ ವೃತ್ತದಿಂದ ಚಾಲುಕ್ಯ ವೃತ್ತದತ್ತ ಈ ಭಾರೀ ವಾಹನ ಸಂಚರಿಸುತ್ತಿತ್ತು.
ಅಂಡರ್ ಪಾಸ್ಗಿಂತ ಕಂಟೇನರ್ ಲಾರಿಯೇ ಎತ್ತರವಿದ್ದ ಕಾರಣ ಕೆಲಕಾಲ ಅಲ್ಲಿಯೇ ಲಾರಿ ಸಿಲುಕಿತ್ತು. ಇದರಿಂದ ಪ್ಯಾಲೇಸ್ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿ, ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.
ಕೊನೆಗೆ ಕಂಟೇನರ್ ಲಾರಿಯ ಟೈರ್ಗಳಲ್ಲಿನ ಗಾಳಿಯನ್ನು ತೆಗೆದು ಲಾರಿಯನ್ನು ಅಲ್ಲಿಂದ ತೆರವು ಮಾಡಲಾಯಿತು. ಬಳಿಕ ವಾಹನ ಸಂಚಾರ ಸುಗಮಗೊಂಡಿತು.
Published On - 10:55 am, Sat, 18 January 20