ಕಾಯಕ ಯೋಗಿ ಡಾ.ಶಿವಕುಮಾರ ಸ್ವಾಮೀಜಿಗಳಿಗಿಂದು ಪ್ರಥಮ ಪುಣ್ಯಸ್ಮರಣೆ
ತುಮಕೂರು: ಶಿವಕುಮಾರ ಶ್ರೀಗಳೆಂದರೆ ಜ್ಞಾನದ ಬೆಳಕು.. ಭಕ್ತರನ್ನು ಸಂತೈಸುತ್ತಿದ್ದ ಭಗವಂತ.. ಅವರ ಒಂದೊಂದು ಕೆಲಸವು ಇತಿಹಾಸವೇ. ಹೀಗೆ ಕಾಯಕದ ಮೂಲಕವೇ ನಡೆದಾಡುವ ದೇವರು ಎಂದು ಖ್ಯಾತಿಗಳಿಸಿದ್ದ ಶಿವಕುಮಾರಸ್ವಾಮೀಜಿಯನ್ನ ಕಳೆದುಕೊಂಡು ಒಂದು ವರ್ಷ ಕಳೆದಿದ್ದು, ಇಂದು ಪುಣ್ಯಸ್ಮರಣೆ ಕಾರ್ಯಕ್ರಮ ನಡೆದಿದೆ. ಕಾಯಕ ಯೋಗಿ.. ಭಕ್ತರ ಪಾಲಿನ ಭಗವಂತ. ಅದೆಷ್ಟೋ ಜನರ ಬದುಕಿನ ದಾರಿ ದೀಪ… ಅರಿವಿನ ಜ್ಯೋತಿ ಬೆಳಗಿಸಿದ ಪರಮ ಗುರು. ಅದೆಷ್ಟೋ ಮಕ್ಕಳ ಭವಿಷ್ಯ ರೂಪಿದ ದೇವರು.. ಸಿದ್ಧಗಂಗಾ ಮಠದ ಶ್ರೀ ಶ್ರೀ ಶ್ರೀ ಡಾ.ಶಿವಕುಮಾರ ಸ್ವಾಮೀಜಿಗಳು […]
ತುಮಕೂರು: ಶಿವಕುಮಾರ ಶ್ರೀಗಳೆಂದರೆ ಜ್ಞಾನದ ಬೆಳಕು.. ಭಕ್ತರನ್ನು ಸಂತೈಸುತ್ತಿದ್ದ ಭಗವಂತ.. ಅವರ ಒಂದೊಂದು ಕೆಲಸವು ಇತಿಹಾಸವೇ. ಹೀಗೆ ಕಾಯಕದ ಮೂಲಕವೇ ನಡೆದಾಡುವ ದೇವರು ಎಂದು ಖ್ಯಾತಿಗಳಿಸಿದ್ದ ಶಿವಕುಮಾರಸ್ವಾಮೀಜಿಯನ್ನ ಕಳೆದುಕೊಂಡು ಒಂದು ವರ್ಷ ಕಳೆದಿದ್ದು, ಇಂದು ಪುಣ್ಯಸ್ಮರಣೆ ಕಾರ್ಯಕ್ರಮ ನಡೆದಿದೆ.
ಕಾಯಕ ಯೋಗಿ.. ಭಕ್ತರ ಪಾಲಿನ ಭಗವಂತ. ಅದೆಷ್ಟೋ ಜನರ ಬದುಕಿನ ದಾರಿ ದೀಪ… ಅರಿವಿನ ಜ್ಯೋತಿ ಬೆಳಗಿಸಿದ ಪರಮ ಗುರು. ಅದೆಷ್ಟೋ ಮಕ್ಕಳ ಭವಿಷ್ಯ ರೂಪಿದ ದೇವರು.. ಸಿದ್ಧಗಂಗಾ ಮಠದ ಶ್ರೀ ಶ್ರೀ ಶ್ರೀ ಡಾ.ಶಿವಕುಮಾರ ಸ್ವಾಮೀಜಿಗಳು ಲಿಂಗದೊಳಗೆ ಐಕ್ಯರಾಗಿ ಒಂದು ವರುಷ ಕಳೆದಿದೆ. ಶ್ರೀಗಳ ಮೊದಲ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಸಕಲ ತಯಾರಿ ನಡೆದಿದೆ.
ಇಂದು ಕಾಯಕ ಯೋಗಿ ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ! ಹೌದು. ಕಾಯಕ ಯೋಗಿ ಶಿವಕುಮಾರ ಶ್ರೀಗಳ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಸರ್ವ ತಯಾರಿ ನಡೆದಿದೆ. ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಎಲ್ಲಾ ತಯಾರಿ ನಡೆದಿದೆ. ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಪುಣ್ಯಸ್ಮರಣೆ ನಡೆಯುತ್ತಿದ್ದು, ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮಿಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಮಠಾಧೀಶರು, ಸಾಧು ಸಂತರು ಭಾಗವಹಿಸಲಿದ್ದಾರೆ.
ಇನ್ನೂ ಪುಣ್ಯಸ್ಮರಣೆಗೆ ಸುಮಾರು ಒಂದು ಲಕ್ಷ ಭಕ್ತರು ಆಗಮಿಸೋ ನಿರೀಕ್ಷೆ ಇದ್ದು, ಬರೋ ಎಲ್ಲಾ ಭಕ್ತರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಒಟ್ಟು 7 ಕಡೆ ದಾಸೋಹದ ವ್ಯವಸ್ಥೆ ಮಾಡಲಾಗಿದ್ದು, ಬೂಂದಿ, ಪಾಯಸ ಸೇರಿದಂತೆ ವಿವಿಧ ಖಾದ್ಯ ತಯಾರಾಗಿದೆ. ಸ್ವತಃ ಸಿದ್ದಲಿಂಗ ಸ್ವಾಮಿಜಿಗಳೇ ಎಲ್ಲಾ ಉಸ್ತುವಾರಿ ವಹಿಸಿಕೊಂಡು ಪರಿಶೀಲನೆ ನಡೆಸುತಿದ್ದಾರೆ. ಬೆಳಗ್ಗೆ 10.30 ಕ್ಕೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ. ಶ್ರೀಗಳ ಗದ್ದುಗೆ ಮೇಲೆ ಭಕ್ತರೊಬ್ಬರು ನೀಡಿದ್ದ 50 ಕೆಜಿ ಬೆಳ್ಳಿಯ ಪುತ್ಥಳಿ ಪ್ರತಿಷ್ಠಾಪನೆ ಕೂಡ ಆಗಲಿದೆ. ಜೊತೆಗೆ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅನ್ನದಾನ ಸೇವಾ ಟ್ರಸ್ಟ್ ನಿಂದ ಕಾರ್ಯಸೂಚಿ ಕೈಪಿಡಿ ಮತ್ತು ವೆಬ್ ಸೈಟ್ ಬಿಡುಗಡೆ ಆಗಲಿದೆ.
ಒಟ್ಟಾರೆ ಶಿವೈಕ್ಯ ಶ್ರೀಗಳ ಪ್ರಥಮ ಪುಣ್ಯಸ್ಮರಣೆಗೆ ಸಕಲ ತಯಾರಿ ನಡೆದಿದ್ದು,ಮಠಕ್ಕೆ ಭಕ್ತರ ದೇಣಿಗೆ ಸಹ ಅಪಾರವಾಗಿ ಹರಿದುಬಂದಿದೆ. ಶ್ರೀಗಳ ಅಭೂತಪೂರ್ವ ಪುಣ್ಯಸ್ಮರಣೆಗೆ ತ್ರಿವಿಧ ದಾಸೋಹದ ನೆಲ ಸಾಕ್ಷಿಯಾಗಲಿದೆ.