KBK ರಾಜ್ಯಾಧ್ಯಕ್ಷನ ಮನೆ ಮುಂದೆ ಪುಡಿ ರೌಡಿಗಳ ದಾಂಧಲೆ
ಬೆಂಗಳೂರು: ರಾಜಗೋಪಾಲನಗರದ ಕಸ್ತೂರಿ ಬಡಾವಣೆಯಲ್ಲಿ ತಡರಾತ್ರಿ ಕರ್ನಾಟಕ ಬಹುಜನ ಕ್ರಾಂತಿದಳದ ರಾಜ್ಯಾಧ್ಯಕ್ಷ ಶ್ರೀನಿವಾಸ್ ಮನೆ ಮುಂದೆ ಲಾಂಗು, ಮಚ್ಚುಗಳಿಂದ ದುಷ್ಕರ್ಮಿಗಳು ದಾಂಧಲೆ ನಡೆಸಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಎರಡು ಕಾರುಗಳ ಮೇಲೆ ನಾಲ್ಕೈದು ದುಷ್ಕರ್ಮಿಗಳ ತಂಡ ದಾಳಿ ಮಾಡಿದೆ. ಮಧ್ಯರಾತ್ರಿ 1.30ರ ಸುಮಾರಿಗೆ ಕಾರಿನಲ್ಲಿ ಎಂಟ್ರಿ ಕೊಟ್ಟ 4-5 ದುಷ್ಕರ್ಮಿಗಳ ಗ್ಯಾಂಗ್ ಎರಡು ಕಾರುಗಳನ್ನು ಜಖಂಗೊಳಿಸಿದ್ದಾರೆ. ಕೆಬಿಕೆ ರಾಜ್ಯಾಧ್ಯಕ್ಷ ಶ್ರೀನಿವಾಸ್ ಮತ್ತು ಮಧುಕರ್ ಎಂಬುವರಿಗೆ ಸೇರಿದ ಕಾರುಗಳು. ಪುಡಿರೌಡಿಗಳ ಕೃತ್ಯಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ […]
ಬೆಂಗಳೂರು: ರಾಜಗೋಪಾಲನಗರದ ಕಸ್ತೂರಿ ಬಡಾವಣೆಯಲ್ಲಿ ತಡರಾತ್ರಿ ಕರ್ನಾಟಕ ಬಹುಜನ ಕ್ರಾಂತಿದಳದ ರಾಜ್ಯಾಧ್ಯಕ್ಷ ಶ್ರೀನಿವಾಸ್ ಮನೆ ಮುಂದೆ ಲಾಂಗು, ಮಚ್ಚುಗಳಿಂದ ದುಷ್ಕರ್ಮಿಗಳು ದಾಂಧಲೆ ನಡೆಸಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಎರಡು ಕಾರುಗಳ ಮೇಲೆ ನಾಲ್ಕೈದು ದುಷ್ಕರ್ಮಿಗಳ ತಂಡ ದಾಳಿ ಮಾಡಿದೆ.
ಮಧ್ಯರಾತ್ರಿ 1.30ರ ಸುಮಾರಿಗೆ ಕಾರಿನಲ್ಲಿ ಎಂಟ್ರಿ ಕೊಟ್ಟ 4-5 ದುಷ್ಕರ್ಮಿಗಳ ಗ್ಯಾಂಗ್ ಎರಡು ಕಾರುಗಳನ್ನು ಜಖಂಗೊಳಿಸಿದ್ದಾರೆ. ಕೆಬಿಕೆ ರಾಜ್ಯಾಧ್ಯಕ್ಷ ಶ್ರೀನಿವಾಸ್ ಮತ್ತು ಮಧುಕರ್ ಎಂಬುವರಿಗೆ ಸೇರಿದ ಕಾರುಗಳು. ಪುಡಿರೌಡಿಗಳ ಕೃತ್ಯಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ರಾಜಗೋಪಾಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
https://www.facebook.com/Tv9Kannada/videos/165080331504361/
Published On - 12:30 pm, Sun, 19 January 20