ಖಾಕಿಗಳ ‘ವ್ಯಾಪ್ತಿ’ ಕಿತ್ತಾಟದಲ್ಲಿ.. ಅನಾಥವಾಗಿಯೇ ಉಳಿದ ಶವ, ಯಾವೂರಲ್ಲಿ?

|

Updated on: Nov 22, 2020 | 5:10 PM

ದೊಡ್ಡಬಳ್ಳಾಪುರ: ತಾಲ್ಲೂಕಿನ ಅಪ್ಪಕಾರನಹಳ್ಳಿ ಬಳಿ ಟಾಟಾ ಏಸ್ ವಾಹನವನ್ನು ಅಡ್ಡಗಟ್ಟಿ ಚಾಲಕನನ್ನು ಕೊಲೆ ಮಾಡಲಾಗಿದೆ. ಭಾನುವಾರ ಮುಂಜಾನೆ ಕೊಲೆ ವಿಚಾರ ಬೆಳಕಿಗೆ ಬಂದಿದ್ದು, ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ನಡುವೆ, ಕೊಲೆಯಾದ ಸ್ಥಳವು ದೊಡ್ಡಬೆಳವಂಗಲ ಮತ್ತು ತ್ಯಾಮಗೊಂಡ್ಲು ಪೊಲೀಸ್ ಠಾಣೆಗಳ ಗಡಿಯಲ್ಲಿದ್ದು, ಯಾವ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂಬುದರ ಬಗ್ಗೆ ಪೊಲೀಸರೇ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ. ಹಾಗಾಗಿ, ಮಧ್ಯಾಹ್ನವಾದರೂ ಮೃತದೇಹ ಟಾಟಾಏಸ್ ವಾಹನದಲ್ಲಿಯೇ ಇತ್ತು. ಮೃತದೇಹ ನೋಡಲು ಜನರು ಮುಗಿಬಿದ್ದ ಕಾರಣ ಸಾಕ್ಷ್ಯನಾಶದ ಆತಂಕವೂ ವ್ಯಕ್ತವಾಯಿತು. […]

ಖಾಕಿಗಳ ‘ವ್ಯಾಪ್ತಿ’ ಕಿತ್ತಾಟದಲ್ಲಿ.. ಅನಾಥವಾಗಿಯೇ ಉಳಿದ ಶವ, ಯಾವೂರಲ್ಲಿ?
Follow us on

ದೊಡ್ಡಬಳ್ಳಾಪುರ: ತಾಲ್ಲೂಕಿನ ಅಪ್ಪಕಾರನಹಳ್ಳಿ ಬಳಿ ಟಾಟಾ ಏಸ್ ವಾಹನವನ್ನು ಅಡ್ಡಗಟ್ಟಿ ಚಾಲಕನನ್ನು ಕೊಲೆ ಮಾಡಲಾಗಿದೆ. ಭಾನುವಾರ ಮುಂಜಾನೆ ಕೊಲೆ ವಿಚಾರ ಬೆಳಕಿಗೆ ಬಂದಿದ್ದು, ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ನಡುವೆ, ಕೊಲೆಯಾದ ಸ್ಥಳವು ದೊಡ್ಡಬೆಳವಂಗಲ ಮತ್ತು ತ್ಯಾಮಗೊಂಡ್ಲು ಪೊಲೀಸ್ ಠಾಣೆಗಳ ಗಡಿಯಲ್ಲಿದ್ದು, ಯಾವ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂಬುದರ ಬಗ್ಗೆ ಪೊಲೀಸರೇ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ.

ಹಾಗಾಗಿ, ಮಧ್ಯಾಹ್ನವಾದರೂ ಮೃತದೇಹ ಟಾಟಾಏಸ್ ವಾಹನದಲ್ಲಿಯೇ ಇತ್ತು. ಮೃತದೇಹ ನೋಡಲು ಜನರು ಮುಗಿಬಿದ್ದ ಕಾರಣ ಸಾಕ್ಷ್ಯನಾಶದ ಆತಂಕವೂ ವ್ಯಕ್ತವಾಯಿತು. ಈ ಮಧ್ಯೆ, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಗಡಿ ನಿರ್ಣಯ ಮಾಡಿಕೊಡಲಿ ಎಂದು ಪೊಲೀಸರು ಕಾದುಕುಳಿತಿದ್ದಾರೆ. ಪೊಲೀಸರ ಧೋರಣೆಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೊಲೆಯಾದ ಸ್ಥಳ ಯಾವ ಪೊಲೀಸ್ ಠಾಣೆಗೆ ಬರುತ್ತದೆ ಎಂಬ ಕಿತ್ತಾಟದಲ್ಲಿ ಎರಡೂ ಠಾಣೆಗಳ ಪೊಲೀಸರು ಕಾಲಹರಣ ಮಾಡುತ್ತಿರುವುದು ತಪ್ಪು ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಅಭಿಪ್ರಾಯಪಟ್ಟರು.