ನಿನ್ನೆಯಿಂದ ಕರೆ ಮಾಡಿದ್ರೂ ಆಂಬುಲೆನ್ಸ್ ಬರಲಿಲ್ಲ, ಕೊನೆಗೆ ನಡೆದದ್ದಾದರು ಏನು?

| Updated By:

Updated on: Jul 27, 2020 | 10:26 PM

ಚಿಕ್ಕಮಗಳೂರು: ಕೊರೊನಾ ವರದಿ ತಡವಾಗಿ ಬಂದ ಕಾರಣದಿಂದ 38 ವರ್ಷದ ಸೋಂಕಿತ ಆಸ್ಪತ್ರೆಗೆ ಹೋಗುವ ದಾರಿ ಮಧ್ಯದಲ್ಲಿಯೇ ಸಾವನ್ನಪ್ಪಿರುವ ಘಟನೆ ಇಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಿಂಗದಹಳ್ಳಿಯಲ್ಲಿ ಈ ಘಟನೆ ಸಂಭವಿಸಿದ್ದು, ಜಿಲ್ಲಾ ಆರೋಗ್ಯ ಅಧಿಕಾರಿಗಳ ಮೇಲೆ ಕುಟುಂಬಸ್ಥರು ಆರೋಪಗಳ ಸುರಿಮಳೆಗೈದಿದ್ದಾರೆ. ಲಿಂಗದಹಳ್ಳಿ ಗ್ರಾಮದಲ್ಲಿ ಇದೇ ತಿಂಗಳ 22 ರಂದು ಮಹಿಳೆಯೊಬ್ಬರು ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದು, ಇದರಿಂದಾಗಿ ಮಹಿಳೆಯ 38 ವರ್ಷದ ಮಗ ಒಂದು ವಾರದ ಹಿಂದೆ ಕೊರೊನಾ ಸ್ಯಾಂಪಲ್ ನೀಡಿದ್ದರು. […]

ನಿನ್ನೆಯಿಂದ ಕರೆ ಮಾಡಿದ್ರೂ ಆಂಬುಲೆನ್ಸ್ ಬರಲಿಲ್ಲ, ಕೊನೆಗೆ ನಡೆದದ್ದಾದರು ಏನು?
Follow us on

ಚಿಕ್ಕಮಗಳೂರು: ಕೊರೊನಾ ವರದಿ ತಡವಾಗಿ ಬಂದ ಕಾರಣದಿಂದ 38 ವರ್ಷದ ಸೋಂಕಿತ ಆಸ್ಪತ್ರೆಗೆ ಹೋಗುವ ದಾರಿ ಮಧ್ಯದಲ್ಲಿಯೇ ಸಾವನ್ನಪ್ಪಿರುವ ಘಟನೆ ಇಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಿಂಗದಹಳ್ಳಿಯಲ್ಲಿ ಈ ಘಟನೆ ಸಂಭವಿಸಿದ್ದು, ಜಿಲ್ಲಾ ಆರೋಗ್ಯ ಅಧಿಕಾರಿಗಳ ಮೇಲೆ ಕುಟುಂಬಸ್ಥರು ಆರೋಪಗಳ ಸುರಿಮಳೆಗೈದಿದ್ದಾರೆ.

ಲಿಂಗದಹಳ್ಳಿ ಗ್ರಾಮದಲ್ಲಿ ಇದೇ ತಿಂಗಳ 22 ರಂದು ಮಹಿಳೆಯೊಬ್ಬರು ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದು, ಇದರಿಂದಾಗಿ ಮಹಿಳೆಯ 38 ವರ್ಷದ ಮಗ ಒಂದು ವಾರದ ಹಿಂದೆ ಕೊರೊನಾ ಸ್ಯಾಂಪಲ್ ನೀಡಿದ್ದರು. ಆದರೆ ಸ್ಯಾಂಪಲ್ ನೀಡಿ ಒಂದು ವಾರ ಕಳೆದರೂ ವರದಿ ಬಾರದ ಕಾರಣ ಯುವಕನಿಗೆ ಮನೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿತ್ತು.

ಆದರೆ ನಿನ್ನೆ ಸೋಂಕಿತನಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು ಬೆಳಿಗ್ಗೆಯಿಂದಲೂ ಅಂಬುಲೆನ್ಸ್ ಗಾಗಿ ಆಸ್ಪತ್ರೆಗೆ ಕರೆ ಮಾಡಿದ್ದಾರೆ. ಎಷ್ಟೇ ಕರೆ ಮಾಡಿದರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಂದು ಬೆಳಗ್ಗೆ ಸೋಂಕಿತನನ್ನು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಯುವಕ ದಾರಿ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾನೆ.

ಇದರಿಂದಾಗಿ ಇಂದು ಮೃತನ ಮನೆಗೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿದ್ದು, ನಿಮ್ಮ ನಿರ್ಲಕ್ಷದಿಂದ ನಾವು ನಮ್ಮ ಹುಡುಗನನ್ನು ಕಳೆದುಕೊಂಡವು ಎಂದು ಕುಟುಂಬಸ್ಥರು ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Published On - 2:26 pm, Mon, 27 July 20