ಮೃತ ಪಟ್ಟು 5 ಗಂಟೆಯಾದರೂ ಶವ ಸಾಗಿಸಲು ಸಿಗ್ತಿಲ್ಲ ಆ್ಯಂಬುಲೆನ್ಸ್, ಏನು ಮಾಡೋದು?
ಬೆಂಗಳೂರು: 4 ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಆಗಿದ್ದ ವ್ಯಕ್ತಿ ಇಂದು ತೀವ್ರ ಉಸಿರಾಟದ ತೊಂದರೆಯಿಂದ ಮನೆಯಲ್ಲಿ ಸಾವನ್ನಪ್ಪಿದ್ದು, ಸತತ 5 ಗಂಟೆಗಳಿಂದ ಶವವನ್ನು ಮನೆಯಲ್ಲಿ ಇಟ್ಟುಕೊಂಡು ಅಂಬುಲೆನ್ಸ್ ಗಾಗಿ ಕುಟುಂಬಸ್ಥರು ಕಾಯುತ್ತಿರುವ ಘಟನೆ ಇಂದು ನಗರದಲ್ಲಿ ನಡೆದಿದೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಎಂಸಿ ಲೇಔಟ್ ವಾರ್ಡಿನಲ್ಲಿ 65 ವರ್ಷದ ವ್ಯಕ್ತಿಗೆ 5 ದಿನಗಳ ಹಿಂದೆ ಕೊರೊನಾಗೆ ತುತ್ತಾಗಿದ್ದರು. ಬಿಬಿಎಂಪಿ ಸೂಚನೆ ಮೇರೆಗೆ ವ್ಯಕ್ತಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ ಇಂದು ಸೋಂಕಿತ ವ್ಯಕ್ತಿ ಅನಾರೋಗ್ಯದಿಂದ ಮನೆಯಲ್ಲಿ […]
ಬೆಂಗಳೂರು: 4 ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಆಗಿದ್ದ ವ್ಯಕ್ತಿ ಇಂದು ತೀವ್ರ ಉಸಿರಾಟದ ತೊಂದರೆಯಿಂದ ಮನೆಯಲ್ಲಿ ಸಾವನ್ನಪ್ಪಿದ್ದು, ಸತತ 5 ಗಂಟೆಗಳಿಂದ ಶವವನ್ನು ಮನೆಯಲ್ಲಿ ಇಟ್ಟುಕೊಂಡು ಅಂಬುಲೆನ್ಸ್ ಗಾಗಿ ಕುಟುಂಬಸ್ಥರು ಕಾಯುತ್ತಿರುವ ಘಟನೆ ಇಂದು ನಗರದಲ್ಲಿ ನಡೆದಿದೆ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಎಂಸಿ ಲೇಔಟ್ ವಾರ್ಡಿನಲ್ಲಿ 65 ವರ್ಷದ ವ್ಯಕ್ತಿಗೆ 5 ದಿನಗಳ ಹಿಂದೆ ಕೊರೊನಾಗೆ ತುತ್ತಾಗಿದ್ದರು. ಬಿಬಿಎಂಪಿ ಸೂಚನೆ ಮೇರೆಗೆ ವ್ಯಕ್ತಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ ಇಂದು ಸೋಂಕಿತ ವ್ಯಕ್ತಿ ಅನಾರೋಗ್ಯದಿಂದ ಮನೆಯಲ್ಲಿ ಮೃತಪಟ್ಟಿದ್ದು.
ಕುಟುಂಬಸ್ಥರು ಬಿಬಿಎಂಪಿ ಸಹಾಯವಾಣಿಗೆ ಎಷ್ಟೇ ಕರೆ ಮಾಡಿದರು ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ. ಹೀಗಾಗಿ ಮೃತರ ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರು 5 ಗಂಟೆಯಿಂದ ಅಂಬುಲೆನ್ಸ್ ಕಾಗಿ ಶವವನ್ನು ಮನೆಯಲ್ಲಿ ಇಟ್ಟುಕೊಂಡು ಕಾಯುವ ಪರಿಸ್ಥಿತಿ ಎದುರಾಗಿದೆ.
Published On - 1:31 pm, Mon, 27 July 20