ಕಾಫಿನಾಡಲ್ಲಿ ಕೆಂಪು ಕಾಡೆಮ್ಮೆ ಪ್ರತ್ಯಕ್ಷ.. 90ರ ದಶಕದಲ್ಲಿ ಏನಾಗಿತ್ತು ಗೊತ್ತಾ!?

ಕಾಫಿನಾಡಲ್ಲಿ ಕೆಂಪು ಕಾಡೆಮ್ಮೆ ಪ್ರತ್ಯಕ್ಷ.. 90ರ ದಶಕದಲ್ಲಿ ಏನಾಗಿತ್ತು ಗೊತ್ತಾ!?

ಚಿಕ್ಕಮಗಳೂರು: 1980-90 ದಶಕದಲ್ಲಿ ಕಣ್ಮರೆಯಾಗಿದ್ದ ಅಪರೂಪದ ಕಾಟಿ ತಳಿಯ ಕಾಡೆಮ್ಮೆ ಸಂತತಿ ಮತ್ತೆ ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತ ಅರಣ್ಯದ ಮುತ್ತೋಡಿ ವಲಯದಲ್ಲಿ ಪತ್ತೆಯಾಗಿದೆ. ಮುತ್ತೋಡಿ ಅರಣ್ಯದಲ್ಲಿ ಅಧಿಕಾರಿಗಳು ಸಫಾರಿ ಬೀಟ್ ಹಾಕುತ್ತಿರುವಾಗ ಕೆಂಪು ಕಾಡೆಮ್ಮೆ, ಅಧಿಕಾರಿಗಳ ಕಣ್ಣಿಗೆ ಬಿದ್ದು ಅಚ್ಚರಿ ತರಿಸಿದೆ. ಕಾಡೆಮ್ಮೆಗಳು ಬಹುತೇಕ ಕಪ್ಪು ಬಣ್ಣದಿಂದ ಕೂಡಿರುತ್ತವೆ. ಆದರೆ, ಕಾಟಿ ತಳಿಯ ಈ ಕಾಡೆಮ್ಮೆ ಕೆಂಪು ಬಣ್ಣದಿಂದ ಕಂಗೊಳಿಸುತ್ತಿದೆ. ಈ ಅಪರೂಪದ ಕಾಡೆಮ್ಮೆ ಬಣ್ಣ ಹಾಗೂ ಮೈಕಟ್ಟು ನೋಡುಗರಲ್ಲಿ ಅಚ್ಚರಿ ಮೂಡಿಸಿದರೂ, 80-90ರ ದಶಕದಲ್ಲಿ […]

sadhu srinath

| Edited By:

Jul 27, 2020 | 10:11 PM

ಚಿಕ್ಕಮಗಳೂರು: 1980-90 ದಶಕದಲ್ಲಿ ಕಣ್ಮರೆಯಾಗಿದ್ದ ಅಪರೂಪದ ಕಾಟಿ ತಳಿಯ ಕಾಡೆಮ್ಮೆ ಸಂತತಿ ಮತ್ತೆ ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತ ಅರಣ್ಯದ ಮುತ್ತೋಡಿ ವಲಯದಲ್ಲಿ ಪತ್ತೆಯಾಗಿದೆ. ಮುತ್ತೋಡಿ ಅರಣ್ಯದಲ್ಲಿ ಅಧಿಕಾರಿಗಳು ಸಫಾರಿ ಬೀಟ್ ಹಾಕುತ್ತಿರುವಾಗ ಕೆಂಪು ಕಾಡೆಮ್ಮೆ, ಅಧಿಕಾರಿಗಳ ಕಣ್ಣಿಗೆ ಬಿದ್ದು ಅಚ್ಚರಿ ತರಿಸಿದೆ.

ಕಾಡೆಮ್ಮೆಗಳು ಬಹುತೇಕ ಕಪ್ಪು ಬಣ್ಣದಿಂದ ಕೂಡಿರುತ್ತವೆ. ಆದರೆ, ಕಾಟಿ ತಳಿಯ ಈ ಕಾಡೆಮ್ಮೆ ಕೆಂಪು ಬಣ್ಣದಿಂದ ಕಂಗೊಳಿಸುತ್ತಿದೆ. ಈ ಅಪರೂಪದ ಕಾಡೆಮ್ಮೆ ಬಣ್ಣ ಹಾಗೂ ಮೈಕಟ್ಟು ನೋಡುಗರಲ್ಲಿ ಅಚ್ಚರಿ ಮೂಡಿಸಿದರೂ, 80-90ರ ದಶಕದಲ್ಲಿ ಈ ತಳಿಯ ಕಾಡೆಮ್ಮೆಗಳು ಕಾಫಿನಾಡಿನ ಅರಣ್ಯದಲ್ಲಿ ಇತ್ತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆಗ ಇಂದರ್ಫಿಸ್ಟ್ ಎಂಬ ಕಾಯಿಲೆಯಿಂದ ಈ ತಳಿ ಸಂಪೂರ್ಣ ನಾಶವಾಗಿತ್ತು. ಇದೀಗ ಮತ್ತೆ ಈ ತಳಿಯ ಕಾಡೆಮ್ಮೆ ಪತ್ತೆಯಾಗಿರೋದು ಈ ತಳಿಗಳ ಬೆಳವಣಿಗೆಯಾಗಿದೆ ಎಂದೇ ಭಾವಿಸಲಾಗಿದೆ.

ಹುಲಿಗಳಲ್ಲಿ ಬಿಳಿ ಹುಲಿ, ಚಿರತೆಗಳಲ್ಲಿ ಕಪ್ಪು ಚಿರತೆ ಇರುವಂತೆ ಕಾಡೆಮ್ಮೆಗಳಲ್ಲಿ ಈ ರೀತಿ ಕಂಡು ಬರುತ್ತೆ ಅಂತಾರೆ ಪ್ರಾಣಿ ಪ್ರಿಯರು. ಇದನ್ನ ಇಂಗ್ಲೀಷಿನಲ್ಲಿ ಗಾರ್ ಎಂದು ಕರೆಯುತ್ತಾರೆ. ಈ ಸಂತತಿ ಈಗ ಮತ್ತೆ ಬೆಳವಣಿಗೆಯಾಗಿರುವುದರಿಂದ ಈ ರೀತಿ ಪ್ರವಾಸಿಗರ ಕಣ್ಣಿಗೆ ಬಿದ್ದಿದೆ ಎಂದು ಹೇಳಲಾಗಿದೆ. ಮೆಲನಿನ್ Melanin ಅಂಶದ ಏರುಪೇರಿನಿಂದ ಜೀವಿಯ ದೇಹದ ಬಣ್ಣವು ಬದಲಾವಣೆ ಆಗುವುದು ಒಂದು ರೀತಿಯ ಸಹಜ ಪ್ರಕ್ರಿಯೆ ಎಂಬುದು ತಜ್ಞರ ಅಭಿಮತ.

ಹಿಂದೆ ಮುತ್ತೋಡಿಯಲ್ಲಿ ವಲಯ ಅರಣ್ಯಾಧಿಕಾರಿ ಆಗಿದ್ದವರೊಬ್ಬರು ಇದನ್ನು ಕರುವಾಗಿದ್ದಾಗ ನೋಡಿದ್ದಾಗಿ ಹೇಳಿಕೊಂಡಿದ್ದಾರೆ. ಈ ಮಧ್ಯೆ ಚಿನ್ನದ ಲೇಪನದಂತೆ ಹೊಳೆಯುವ ಕಾಡೆಮ್ಮೆಯೊಂದು ಮುತ್ತೋಡಿ ಅರಣ್ಯದಲ್ಲಿ ಕಾಣ ಸಿಕ್ಕಿರೋದು ನಿಜಕ್ಕೂ ವಿಶೇಷ. ಜಿಲ್ಲೆಯ ಮುತ್ತೋಡಿ ಅರಣ್ಯ ಹಲವು ವಿಚಿತ್ರ ಹಾಗೂ ವೈವಿಧ್ಯಮಯ ಘಟನೆಗೆ ಸಾಕ್ಷಿಯಾಗಿದೆ. ಈಗ ಸುಮಾರು 30-40 ವರ್ಷಗಳ ಹಿಂದೆಯೇ ನಾಶವಾಗಿರುವ ಪ್ರಾಣಿಗಳ ಸಂತತಿ ಒಂದು ಮತ್ತೆ ಅಭಿವೃದ್ಧಿ ಆಗಿರುವಂಥದ್ದು ಬೆಳಕಿಗೆ ಬಂದಂತಿದೆ.

ಈ ಕಾಡೆಮ್ಮೆ ಇರುವುದು ಅಪರೂಪ, ನಿಸರ್ಗದಲ್ಲಿ ಅನೇಕ ವಿಸ್ಮಯಗಳು ನಡೆಯುತ್ತದೆ. ಅಂತಹಾ ವಿಸ್ಮಯಗಳಲ್ಲಿ ಇದು ಕೂಡ ಸಹಜ. ಆದರೆ, ನೋಡಲು ಬಂಗಾರದ ಲೇಪನವಾದಂತೆ ಕಾಣೋ ಈ ಕಾಡೆಮ್ಮೆ ಪ್ರಾಣಿಪ್ರಿಯರ ಗಮನ ಸೆಳೆದಿರೋದಂತೂ ನಿಜ. -ಪ್ರಶಾಂತ್

Follow us on

Related Stories

Most Read Stories

Click on your DTH Provider to Add TV9 Kannada