ವಿಕ್ಟೋರಿಯಾ ಆಸ್ಪತ್ರೆಯ ಹೊಣೆಗೇಡಿತನ, ವೆಂಟಿಲೇಟರ್​ನಲ್ಲಿರಬೇಕಾದ ಸೋಂಕಿತ 5 ಗಂಟೆ ಇದ್ದಿದ್ದೆಲ್ಲಿ?

|

Updated on: Jul 01, 2020 | 10:10 AM

ಬೆಂಗಳೂರು: ನಗರದ ಖಾಸಗಿ ಆಸ್ಪತ್ರೆ ಸೋಂಕಿತನನ್ನು ಹೊರದಬ್ಬಿದ ಅಮಾನವೀಯ ಘಟನೆ ನಡೆದದ್ದು ಬೆಳಗ್ಗೆ ವರದಿಯಾಗಿತ್ತು. ಈಗ ಇದೇ ರೀತಿಯ ಮತ್ತೊಂದು ಘಟನೆ ವರದಿಯಾಗಿದೆ. ಆಸ್ಪತ್ರೆ ಮುಂದೆ ಸೋಂಕಿತನ್ನು ಕಾಯಿಸಿದ್ದಾರೆ. 5 ಗಂಟೆಗಳ ಕಾಲ‌ ಌಂಬುಲೆನ್ಸ್​ನಲ್ಲೇ ಮಲಗಿಸಿದ್ದ ಘಟನೆ ನಡೆದಿದೆ. ನಗರದ ವಿಕ್ಟೋರಿಯಾ ಆಸ್ಪತ್ರೆ ಬಳಿ ಕೊರೊನಾ ಸೋಂಕಿತ ಪರದಾಡಿದ ದೃಶ್ಯಗಳು ಕಂಡು ಬಂದಿವೆ. ಆಸ್ಪತ್ರೆ ಹೊರಗೆ 5 ಗಂಟೆಗಳ ಕಾಲ‌ ಌಂಬುಲೆನ್ಸ್​ನಲ್ಲೇ ಸೋಂಕಿತ ಮಲಗಿದ್ದಾನೆ. ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಸ್ವಾಬ್ ಟೆಸ್ಟ್ ಮಾಡಿಸಿದ್ದ. ಅಲ್ಲಿ […]

ವಿಕ್ಟೋರಿಯಾ ಆಸ್ಪತ್ರೆಯ ಹೊಣೆಗೇಡಿತನ, ವೆಂಟಿಲೇಟರ್​ನಲ್ಲಿರಬೇಕಾದ ಸೋಂಕಿತ 5 ಗಂಟೆ ಇದ್ದಿದ್ದೆಲ್ಲಿ?
Follow us on

ಬೆಂಗಳೂರು: ನಗರದ ಖಾಸಗಿ ಆಸ್ಪತ್ರೆ ಸೋಂಕಿತನನ್ನು ಹೊರದಬ್ಬಿದ ಅಮಾನವೀಯ ಘಟನೆ ನಡೆದದ್ದು ಬೆಳಗ್ಗೆ ವರದಿಯಾಗಿತ್ತು. ಈಗ ಇದೇ ರೀತಿಯ ಮತ್ತೊಂದು ಘಟನೆ ವರದಿಯಾಗಿದೆ. ಆಸ್ಪತ್ರೆ ಮುಂದೆ ಸೋಂಕಿತನ್ನು ಕಾಯಿಸಿದ್ದಾರೆ. 5 ಗಂಟೆಗಳ ಕಾಲ‌ ಌಂಬುಲೆನ್ಸ್​ನಲ್ಲೇ ಮಲಗಿಸಿದ್ದ ಘಟನೆ ನಡೆದಿದೆ.

ನಗರದ ವಿಕ್ಟೋರಿಯಾ ಆಸ್ಪತ್ರೆ ಬಳಿ ಕೊರೊನಾ ಸೋಂಕಿತ ಪರದಾಡಿದ ದೃಶ್ಯಗಳು ಕಂಡು ಬಂದಿವೆ. ಆಸ್ಪತ್ರೆ ಹೊರಗೆ 5 ಗಂಟೆಗಳ ಕಾಲ‌ ಌಂಬುಲೆನ್ಸ್​ನಲ್ಲೇ ಸೋಂಕಿತ ಮಲಗಿದ್ದಾನೆ. ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಸ್ವಾಬ್ ಟೆಸ್ಟ್ ಮಾಡಿಸಿದ್ದ.

ಅಲ್ಲಿ ಆತನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆ ಸೋಂಕಿತನನ್ನು ತಕ್ಷಣ ವೆಂಟಿಲೇಟರ್​ಗೆ ಶಿಫ್ಟ್ ಮಾಡುವಂತೆ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ನಿನ್ನೆ ಸಂಜೆ 6 ಗಂಟೆಗೆ ಌಂಬುಲೆನ್ಸ್​ನಲ್ಲಿ ಸೋಂಕಿತ ವ್ಯಕ್ತಿ ಬಂದಿದ್ದ. ಆದ್ರೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ವೆಂಟಿಲೇಟರ್ ಇಲ್ಲ ಎಂದು ಸಂಜೆ 6ರಿಂದ ರಾತ್ರಿ 11 ಗಂಟೆವರೆಗೆ ಌಂಬುಲೆನ್ಸ್​ನಲ್ಲಿಯೇ ಇರಿಸಿದ್ದಾರೆ. ಬರೋಬ್ಬರಿ 5 ಗಂಟೆಗಳ ಬಳಿಕ ದಾಖಲಿಸಿಕೊಂಡಿದ್ದಾರೆ.

Published On - 10:07 am, Wed, 1 July 20