
ಬೆಂಗಳೂರು: ರಾಜಧಾನಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಸೋಂಕಿತ ವ್ಯಕ್ತಿ ನರಕಯಾತನೆ ಅನುಭವಿಸಿದ್ದಾರೆ. ಮೂರು ದಿನ ಬೆಡ್ ಸಿಗದೆ ಪರದಾಡಿದ್ದ ಸೋಂಕಿತ ವೃದ್ಧ ಕೊರೊನಾ ಜೀವ ಹಿಂಡುತ್ತಿದ್ರೂ ಮನೆಯಲ್ಲೇ ನರಳಾಡಿರುವ ಘಟನೆ ನಡೆದಿದೆ. ಸದ್ಯ ಈಗ 78 ವರ್ಷದ ವೃದ್ಧನಿಗೆ ಆಸ್ಪತ್ರೆ ಸೇರಿಸಲಾಗಿದೆ.
ವೃದ್ಧನಿಗೆ ಮಂಗಳವಾರ ಪಾಸಿಟಿವ್ ಬಂದಿತ್ತು. ನಿನ್ನೆ ರಾತ್ರಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಿಬಿಎಂಪಿ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಸೋಂಕಿತ ವೃದ್ಧ ಸಿಡಿಮಿಡಿಗೊಂಡಿದ್ದಾರೆ. ಸೋಂಕಿತ ವೃದ್ಧ ಮೂರು ದಿನ ಮನೆಯಲ್ಲಿ ಇದ್ದಿದ್ದಕ್ಕೆ ಕುಟುಂಬಸ್ಥರಿಗೂ ಸೋಂಕು ಹರಡಿರುವ ಭೀತಿ ಉಂಟಾಗಿದೆ.