ಹೆಮ್ಮಾರಿಯ ಓಡಿಸಲು ಈ ಗ್ರಾಮದಲ್ಲಿ ಕೊರೊನಮ್ಮ ಪೂಜೆ ಮಾಡಿದ್ರು
ಬಳ್ಳಾರಿ: ಕೊರೊನಾ ಅನ್ನೋ ಮಹಾಮಾರಿ ವೈರಸ್ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಇಡೀ ವಿಶ್ವವೇ ಡೆಡ್ಲಿ ವೈರಸ್ಗೆ ಬೆಚ್ಚಿಬಿದ್ದಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇನ್ನೂ ಕೊರೊನಾ ಸೋಂಕಿಗೆ ಔಷಧಿ ಕಂಡುಹಿಡಿದಿಲ್ಲ. ಹೀಗಾಗಿ ಜನರು ಭಯ ಭೀತಿಗೊಂಡಿದ್ದಾರೆ. ಕೊರೊನಾದಿಂದ ಕಾಪಾಡುವಂತೆ ಗ್ರಾಮೀಣ ಭಾಗದ ಜನರು ದೇವರ ಮೊರೆ ಹೋಗಿದ್ದಾರೆ. ಕೊರೊನಾ ವೈರಸ್ ನಮ್ಮೂರಿಗೆ ಬರಬಾರದು ಅಂತಾ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹುಲಿಕೆರೆ ಗ್ರಾಮಸ್ಥರು ಕೊರೊನಾ ಮೂರ್ತಿ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಗ್ರಾಮದ ಪ್ರತಿಯೊಂದು […]
ಬಳ್ಳಾರಿ: ಕೊರೊನಾ ಅನ್ನೋ ಮಹಾಮಾರಿ ವೈರಸ್ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಇಡೀ ವಿಶ್ವವೇ ಡೆಡ್ಲಿ ವೈರಸ್ಗೆ ಬೆಚ್ಚಿಬಿದ್ದಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇನ್ನೂ ಕೊರೊನಾ ಸೋಂಕಿಗೆ ಔಷಧಿ ಕಂಡುಹಿಡಿದಿಲ್ಲ. ಹೀಗಾಗಿ ಜನರು ಭಯ ಭೀತಿಗೊಂಡಿದ್ದಾರೆ. ಕೊರೊನಾದಿಂದ ಕಾಪಾಡುವಂತೆ ಗ್ರಾಮೀಣ ಭಾಗದ ಜನರು ದೇವರ ಮೊರೆ ಹೋಗಿದ್ದಾರೆ. ಕೊರೊನಾ ವೈರಸ್ ನಮ್ಮೂರಿಗೆ ಬರಬಾರದು ಅಂತಾ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹುಲಿಕೆರೆ ಗ್ರಾಮಸ್ಥರು ಕೊರೊನಾ ಮೂರ್ತಿ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಗ್ರಾಮದ ಪ್ರತಿಯೊಂದು ಮನೆಯವರು ಹೋಳಿಗೆ ಎಡೆಯಿಂದ ಪೂಜೆ ಮಾಡಿ ಕಟ್ಟಿಗೆಯಿಂದ ಮಾಡಿದ ಕೊರೊನಮ್ಮನಿಗೆ ಪೂಜೆ ಸಲ್ಲಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಈ ರೀತಿಯ ಆಚರಣೆಗಳು ಮೊದಲಿನಿಂದಲೂ ನಡೆದುಕೊಂಡು ಬಂದಿವೆ. ಈ ಹಿಂದೆ ಗ್ರಾಮೀಣ ಭಾಗಗಳಲ್ಲಿ ಮಳೆಯಾಗದಿದ್ದರೆ ರೈತರು ಹಾಗೂ ಇಡೀ ಊರಿನ ಗ್ರಾಮಸ್ಥರು ಹೋಳಿಗೆ ಮಾಡಿ ಹೋಳಿಗೆಮ್ಮ ಎನ್ನುವ ಹೆಸರಿನ ಹಬ್ಬ ಮಾಡುತ್ತಿದ್ದರು. ಹೋಳಿಗೆ ಎಡೆ, ಬೇವಿನ ಸೊಪ್ಪು ಇಟ್ಟು ಹಳ್ಳಿಯ ಪ್ರತಿಯೊಂದು ಕುಟುಂಬದವರು ಹೋಗಿ ಊರ ಗಡಿಗೆ ಹೋಗಿ ಅಲ್ಲಿ ಎಡೆಯನ್ನು ಇಟ್ಟು ಬರುತ್ತಾರೆ. ಅಮ್ಮನ ಆಚರಣೆ ಮಾಡಿದರೆ ಮಳೆ ಬರುತ್ತದೆ ಎನ್ನುವ ನಂಬಿಕೆ ಈಗಲೂ ಜಿಲ್ಲೆಯಲ್ಲಿ ಇದ್ದು ಈ ಆಚರಣೆ ಪ್ರಚಲಿತದಲ್ಲಿದೆ.
ಇತರೆ ಕಾಯಿಲೆ ಬಂದಾಗಲೂ ಆಚರಣೆ ಮಾಡ್ತಾರೆ: ಅಷ್ಟೇ ಅಲ್ಲದೇ ಪ್ಲೇಗ್, ಮಲೇರಿಯಾ ಇತರೆ ಕಾಯಿಲೆಗಳು ಬಂದಾಗ ಇಡೀ ಊರನ್ನೇ ಖಾಲಿ ಮಾಡುವ ಗುಳೇದ ಲಕ್ಕಮ್ಮ ದೇವಿಯ ಆಚರಣೆಯನ್ನು ಈಗಲೂ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ, ಸಂಡೂರು, ಹಗರಿಬೊಮ್ಮನಹಳ್ಳಿ ತಾಲೂಕುಗಳಲ್ಲಿ ಮುಂದುವರೆಸಿಕೊಂಡು ಬರಲಾಗುತ್ತಿದೆ. ಇದೇ ರೀತಿ ಇತ್ತೀಚೆಗೆ ಚಿಕನ್ ಗುನ್ಯಾ ಬಂದಾಗಲೂ ಸಹ ಕುಂಟಮ್ಮ ಎನ್ನುವ ಹೆಸರಿನಲ್ಲಿ ಕಟ್ಟಿಗೆಯಲ್ಲಿ ಮೂರ್ತಿ ಮಾಡಿ ಅದಕ್ಕೆ ಪೂಜೆ ಮಾಡಿ ಊರ ಗಡಿಗೆ ತಂದು ಬಿಡುತ್ತಿರುವ ಆಚರಣೆ ಮಾಡಲಾಗುತ್ತಿದೆ. ನಂತರ ಅದನ್ನು ಮುಂದಿನ ಊರಿನವರು ಪೂಜೆ ಮಾಡಿ ನಂತರ ಮತ್ತೊಂದು ಊರಿನ ಗಡಿಗೆ ಅವರು ಬಿಡುತ್ತಾರೆ. ಈಗಲೂ ಈ ಆಚರಣೆಗಳು ಈ ಭಾಗದಲ್ಲಿ ರೂಢಿಯಲ್ಲಿವೆ.
ಗ್ರಾಮೀಣ ಭಾಗಗಳಲ್ಲಿ ಈಗಾಗಲೇ ಹೋಳಿಗೆ ಅಮ್ಮ, ಗುಳೇದ ಲಕ್ಕಮ್ಮ, ಕುಂಟಮ್ಮ ಆಚರಣೆಗಳು ನಡೆಯುತ್ತಿದ್ದು ಈ ಸಾಲಿಗೆ ಈಗ ಕೊರೊನಮ್ಮ ಆಚರಣೆ ಸೇರಿಕೊಂಡಿರುವುದು ವಿಶೇಷವಾಗಿದೆ. ಕೂಡ್ಲಿಗಿ ತಾಲೂಕಿನ ಹುಲಿಕೆರೆ ಗ್ರಾಮಸ್ಥರು ಕೊರೊನಮ್ಮ ದೇವಿಯ ಪೂಜೆಯನ್ನು ಇಡೀ ಊರೇ ಹಬ್ಬದ ರೀತಿ ಆಚರಿಸಿದೆ. ಇದೇ ರೀತಿಯ ಪೂಜೆ ಹಬ್ಬವನ್ನ ಇನ್ನು ಮುಂದೆ ಅಕ್ಕಪಕ್ಕದ ಗ್ರಾಮಗಳ ಜನತೆ ಆಚರಣೆ ಮಾಡುವ ದಿನಗಳು ದೂರವಿಲ್ಲ.
Published On - 1:27 pm, Fri, 22 May 20